ಮೂವರು ಕಳ್ಳರ ಬಂಧನನಗದು, ಚಿನ್ನಾಭರಣ ವಶ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.31:  ಜನರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಇಲ್ಲಿನ ಬ್ರೂಸ್‌ ಪೇಟೆ ಪೊಲೀಸರು ನಿನ್ನೆ  ಬಂಧಿಸಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಆಂಧ್ರ ಪ್ರದೇಶ  ಚಿತ್ತೂರು ಜಿಲ್ಲೆಯ ಓಜಿ ಕೊಪ್ಪ ಗ್ರಾಮದ ಜಕ್ರಯ್ಯ, ಸುಬ್ರಮಣ್ಯಂ, ಪಿ.ನಾರಾಯಣನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ವೇಳೆ  ಇಲ್ಲಿನ ಗಾಂಧಿ ನಗರ, ಕೌಲ್‌ ಬಜಾರ್, ಸಂಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನರ ಗಮನ ಬೇರೆಡೆ ಸೆಳೆದು ಕಳ್ಳತನ
ಮಾಡುತ್ತಿದ್ದ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರಂತೆ.
ಅವರಿಂದ 1ಲಕ್ಷ ರೂ. ಬೆಲೆಬಾಳುವ 20 ಗ್ರಾಂ ತೂಕದ ಚಿನ್ನಾಭರಣ ಹಾಗೂ 4.25ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ನಗರ ಡಿವೈಎಸ್ಪಿ ಕೆ.ಬಸವರಾಜ್ ಮಾರ್ಗದರ್ಶನದಲ್ಲಿ ಪ್ರೊಬೆಷನರಿ ಡಿವೈಎಸ್ಪಿ ಉಮಾರಾಣಿ, ಬ್ರೂಸ್‌ಪೇಟೆ ಠಾಣೆಯ ಸಿಪಿಐ ಎಂ.ಎನ್.ಸಿಂಧೂ‌, ಪಿಎಸ್‌ಐ ಎಸ್.ಎಸ್.ವಡ್ಡ‌, ಸಿಬ್ಬಂದಿ ಶ್ರೀನಿವಾಸ, ಶಿವರಾಜ್, ರಾಮಲಿಂಗಪ್ಪ, ರಾಮಾಂಜಿನಿ, ಶಿವಕುಮಾರ್ ಅವರು ಆರೋಪಿಗಳನ್ನು ಬಂಧಿಸಿದ್ದಾರೆ.