ಮೂವರು ಆರೋಪಿಗಳ ಬಂಧನ: 2.20 ಲಕ್ಷ ರೂ. ಜಪ್ತಿ

ವಿಜಯಪುರ,ಫೆ.11: ಜಿಲ್ಲೆಯಲ್ಲಿ ಬ್ಯಾಂಕ್ ಮತ್ತು ಫೈನಾನ್ಸ್ ಗಳಲ್ಲಿನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, 2.20 ಲಕ್ಷ ರೂ.ಗಳನ್ನು ಜಪ್ತಿ ಮಾಡಿದ್ದಾರೆ.
ಸಿಂದಗಿ ಪಟ್ಟಣದ ಗೋಲಿಬಾರ ಮಡ್ಡಿ ಓಣಿಯ ಪ್ರಭು ಶಿವಪ್ಪ ಹಲಗಿ (32), ಅನಿಲ ಸುರೇಶ ನಾಯ್ಕೋಡಿ (32) ಹಾಗೂ ಬಸವರಾಜ ಲಕ್ಷ್ಮಣ ಮಾದರ (28) ಬಂಧಿತ ಆರೋಪಿಗಳು.
ಈ ಆರೋಪಿಗಳು ಸಿಂದಗಿ ಪಟ್ಟಣದ ಅನ್ನಪೂರ್ಣ ಫೈನಾನ್ಸ್, ಇಂಡಿಯ ಪಿಕೆಪಿಎಸ್ ಬ್ಯಾಂಕ್ ನಲ್ಲಿ ಕಳ್ಳತನ ಮಾಡಿದ್ದು, ಅಲ್ಲದೆ ಸಿಂದಗಿಯ ಎಲ್ ಆಯಿಂಡ್ ಟಿ ಫೈನಾನ್ಸ್ ಅನ್ನು ಕಳ್ಳತನಕ್ಕೆ ಯತ್ನ ಸೇರಿ ಒಟ್ಟು 3 ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.
ಸಿಂದಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.