ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.14:: ವಿಧಾನಸಭೆ ಚುನಾವಣೆಯ ನಾಮಪತ್ರ ಸ್ವೀಕಾರ ಪ್ರಕ್ರಿಯೆ ಆರಂಭವಾಗಿದ್ದು, ಮೂವರು ಅಭ್ಯರ್ಥಿಗಳು ಚುನಾವಣೆ ನಾಮಪತ್ರ ಸಲ್ಲಿಸಿದರು.
 ಕೆ.ಆರ್.ಪಿ.ಪಿ ಪಕ್ಷ ದಿಂದ ಸಿರುಗುಪ್ಪ ನಗರದ ನಿವಾಸಿಗಳಾದ ಜಿ.ಪಂ.ಮಾಜಿ ಸದಸ್ಯೆ ಎಚ್.ರಾಧ ಧರಪ್ಪ ನಾಯಕ, ರೈತಪರ ಹೊರಾಟಗಾರ ಟಿ.ಧರಪ್ಪ ನಾಯಕ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಶಾನವಾಸಪುರ ಗ್ರಾಮದ ಎಂ.ಎಸ್.ಗಾದಿಲಿಂಗಪ್ಪ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಸತೀಶ್ ತಿಳಿಸಿದರು.
 ಪತಿ,ಪತ್ನಿ ಇಬ್ಬರು ಒಂದೇ ಪಕ್ಷದಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಿರುವುದು ವಿಶೇಷವಾಗಿತ್ತು.