ಮೂವರು ಅಂತಾರಾಜ್ಯ ಕಳ್ಳರ ಬಂಧನ

ವಿಜಯಪುರ,ನ.12-ವಿಜಯಪುರ ಸೇರಿದಂತೆ ನೆರೆಯ ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಲ್ಲಿ ವಾಹನ ಹಾಗೂ ಮನೆ ಕಳ್ಳತನ ಮಾಡುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ವಿಜಯಪುರ ಪೆÇಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರದ ಬೀಡ್ ಗ್ರಾಮದ ಸಿಕಂದರ್ ಅಖ್ತರ್ ಸೈಯ್ಯದ್ (40), ಆಗಮೀರಖಾನ್ ಉರ್ಫ್ ಜಹಾಂಗೀರಖಾನ್ ಪಠಾಣ (40), ಅಬ್ದುಲ್‍ರಹೀಮ್ ಅಬ್ದುಲ್‍ಕರೀಮ್ ಶೇಖ್ (52) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ 1 ಬುಲೋರೋ, ಕ್ರೂಸರ್ ಸೇರಿದಂತೆ 3 ವಾಹನಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಜಿಲ್ಲಾ ಪೆÇಲೀಸ್ ಅಧೀಕ್ಷಕ ಎಚ್.ಡಿ. ಆನಂದಕುಮಾರ, ವಿಜಯಪುರ ಜಿಲ್ಲೆಯ ಪೆÇಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಪುರ ಶಹರದಲ್ಲಿ ಇತ್ತೀಚಿಗೆ ಘಟಿಸುತ್ತಿದ್ದ ಮೋಟರ ಸೈಕಲ್ ಕಳ್ಳತನ ಪ್ರಕರಣಗಳ ತಪಾಸಣೆ ಕುರಿತು ಎಎಸ್‍ಪಿ ಡಾ.ಶ್ರೀರಾಮ ಅರಸಿದ್ಧಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿತ್ತು.
ಈ ತನಿಖಾ ತಂಡವು ನಮ್ಮ ಪಕ್ಷದ ರಾಜ್ಯ ಮಾಹಾರಾಷ್ಟ್ರದ ಸಾಂಗ್ಲಿ, ಕಲ್ಲಾಪೂರ, ಸೋಲಾಪೂರ ಹಾಗೂ ನೆರೆಯ ಜಿಲ್ಲೆಗಳಾದ ಬಾಗಲಕೋಟ, ಬೆಳಗಾವಿ ಕಡೆಗಳಲ್ಲಿಯ ಆರೋಪಿತರ ತಪಾಸಣೆಯಲ್ಲಿ ಇದ್ದಾಗ, ಖಚಿತ ಮಾಹಿತಿ ಆಧರಿಸಿ ವಿಜಯಪುರ ಸೊಲ್ಲಾಪೂರ ಬೈಪಾಸ್ ಬಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳು ಆದರ್ಶ ನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಮನೆ ಕಳ್ಳತನ, ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ 3 ಮನೆ, 1 ಬುಲೋರೋ, ಮಹಾರಾಷ್ಟ್ರದ ಜಾಲ್ನಾ ಷಹರ ಸದರ ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಕ್ರೂಸರ್, ಪಾಕರ್ಡಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಬುಲೆರೋ ವಾಹನ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಎಸ್.ಪಿ. ಆನಂದಕುಮಾರ ತಿಳಿಸಿದರು.
ತನಿಖಾ ತಂಡದಲ್ಲಿದ್ದ ಪೆÇಲೀಸ್ ಅಧಿಕಾರಿಗಳಾದ ವಿಜಯಮಹಾಂತೇಶ ಮಠಪತಿ, ಯತೀಶ.ಎನ್, ಎಸ್.ಸಿ. ಗುರಬಟ್ಟಿ, ಎಸ್.ಎಸ್.ಮಾಳೆಗಾಂವ, ಬಿ.ಎಂ. ಪವಾರ, ಪಿ.ಆರ್, ಹಿಪ್ಪರಗಿ, ವೈ.ಪಿ. ಬಕಾಡೆ, ಡಿ.ಎಚ್. ಭೈರಗೊಂಡ, ಎಸ್.ಪಿ. ಲೋಗಾವಿ, ಎಂ.ಎ. ಜಾಧವ, ಪುಂಡಲೀಕ ಬಿರಾದಾರ, ಸಂಜಯ ಬನಪಟ್ಟಿ, ಮಹೇಶ ಸಲಿಕೇರಿ, ಜಿ.ಎಸ್. ವನಜಂಕರ, ಬಿ.ಎಸ್. ರೋಣಿಹಾಳ, ಎಸ್.ಎಂ. ಕಲಾದಗಿ, ಯೋಗೇಶ್ ಮಾಳಿ, ಭೀಮಾಶಂಕರ ಮಖಣಾಪೂರ, ಸಿದ್ದು ಬಿರಾದಾರ, ಮೌನೇಶ ಬಡಿಗೇರ, ಆನಂದ ಕುಂಬಾರ, ಮಾಳಪ್ಪ ಹಾವಡಿ, ಆರ್.ಎಸ್. ಮರೇಗುದ್ದಿ, ಎ.ಎಚ್. ಗೋಲಗೇರಿ, ಎಸ್.ಎಸ್. ಮಸಳಿ, ಆನಂದಯ್ಯ ವಿ.ಪಿ, ನಿಂಗಪ್ಪ ವಠಾರ, ಗುಂಡು ಗಿರಣಿವಡ್ಡರ, ಮತೀನ್ ಬಾಗವಾನ ಅವರು ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಈ ತನಿಖಾ ತಂಡದ ಕಾರ್ಯವನ್ನು ಎಸ್.ಪಿ. ಎಚ್.ಡಿ. ಆನಂದಕುಮಾರ ಶ್ಲಾಘಿಸಿದರು.