ಮೂವರು ಅಂತರ ಜಿಲ್ಲಾ ಸರಗಳ್ಳರ ಬಂಧನ-15 ಲಕ್ಷರೂ. ಮೌಲ್ಯದ ಚಿನ್ನಾಭರಣ ವಶ

ಮಂಡ್ಯ : ಅಂತರ ಜಿಲ್ಲಾ ಸರಗಳ್ಳರನ್ನು ಬಂಧಿಸಿರುವ ಪೆÇಲೀಸರು ಅವರಿಂದ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಶ್ರೀನಗರದ ಕಾಳಪ್ಪ ಬ್ಲಾಕ್ ನಿವಾಸಿ ಎಸ್. ಕುಮಾರ (20), ಕುಮಾರಸ್ವಾಮಿ ಲೇಔಟ್‍ನ ವಿ. ಲಿಖಿತ್ (23) ಹಾಗೂ ಬಿನ್ನಿಪೇಟೆ ರೈಲ್ವೆ ಗೇಟ್‍ನ ಪಿ. ನಿಖಿಲ್ (19) ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಿಲ್ಲಾ ಪೆÇಲೀಸ್ ಅಧೀಕ್ಷಕಿ ಡಾ. ಎಂ. ಅಶ್ವಿನಿ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಂಧಿತ ಆರೋಪಿಗಳಿಂದ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಒಂದು ಬಜಾಜ್ ಪಲ್ಸರ್ ಬೈಕ್, ಒಂದು ಕೆಟಿಎಂ. ಡ್ಯೂಕ್ ಬೈಕ್, ಬಟನ್ ಚಾಕುವೊಂದನ್ನು ನಾಗಮಂಗಲ ಪೆÇಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಆರೋಪಿಗಳ ಭೇಟೆ ಹೇಗೆ :
ನಾಗಮಂಗಲ ತಾಲೂಕು ತುಪ್ಪದಮಡು ಗ್ರಾಮದ ಮಂಜೇಶ ಅವರ ಪತ್ನಿ ಟಿ.ಸಿ. ಲಕ್ಷ್ಮಿ ಅವರು ಪಟ್ಟಣದಿಂದ ಗ್ರಾಮಕ್ಕೆ ತಮ್ಮ ಸ್ಕೂಟರ್‍ನಲ್ಲಿ ಮೂಡಲಕೊಪ್ಪಲು-ತುಪ್ಪದಮಡು ಗ್ರಾಮಗಳ ಗೇಟ್ ಮಧ್ಯೆ ಇರುವ ದೊಡ್ಡ ಅತ್ತಿಮರದ ನೇರ ಹೋಗುತ್ತಿದ್ದಾಗ ಹಿಂದಿನಿಂದ ಒಂದು ಕೆಟಿಎಂ ಡ್ಯೂಕ್ ಬೈಕ್‍ನಲ್ಲಿ ಬಂದ ಇಬ್ಬರು ಅಪರಿಚಿತರು ಸ್ಕೂಟರ್‍ಗೆ ಅಡ್ಡಬಂದು ಅವರನ್ನು ಬೀಳಿಸಿ ಚಾಕು ತೋರಿಸಿ, ಅವರ ಬಳಿ ಇದ್ದ 400 ಗ್ರಾಂ ತೂಕವುಳ್ಳ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಲಕ್ಷ್ಮಿ ಅವರ ತಲೆಜುಟ್ಟು ಹಿಡಿದು ಬಲವಾಗಿ ನೆಲಕ್ಕೆ ತಳ್ಳಿ ಪರಾರಿಯಾಗಿದ್ದರು ಎಂದರು.
ಈ ಬಗ್ಗೆ ನಾಗಮಂಗಲ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಆರೋಪಿಗಳಾದ ಲಿಖಿತ್ ಮತ್ತು ನಿಖಿಲ್ ಅವರು ಮದ್ಯಪಾನ, ಹುಕ್ಕಾಘಿ ಸೇವನೆ, ಹುಡುಗಿಯರ ಚಟ ಇತರೆ ದುಷ್ಕಟಗಳಿಗೆ ಬಲಿಯಾಗಿ, ಹಣ ಹೊಂದಿಸಲು ಗ್ರಾಮೀಣ ಪ್ರದೇಶಗಳಲ್ಲಿ ನಿರ್ಜನ ಪ್ರದೇಶಗಳಲ್ಲಿ ಬೈಕ್‍ಗಳಲ್ಲಿ ಹಾಗೂ ನಡೆದುಕೊಂಡು ಹೋಗುವ ಒಂಟಿ ಮಹಿಳೆ, ದಂಪತಿಗಳನ್ನು ಗುರಿಯಾಗಿಸಿಕೊಂಡು ಬೈಕ್‍ನಲ್ಲಿ ಹಿಂದಿನಿಂದ ಅಡ್ಡಲಾಗಿ ನಿಲ್ಲಿಸಿ, ಚಾಕು ತೋರಿಸಿ ಬೆದರಿಸಿ ಚಿನ್ನಾಭರಣಗಳನ್ನು ದೋಚಿ ಗಿರವಿ ಅಂಗಡಿಯಲ್ಲಿ ಮಾರಾಟ ಮಾಡಿ ಬಂದ ಹಣದಿಂದ ಮೋಜು, ಮಸ್ತಿಯಲ್ಲಿ ತೊಡಗಿಕೊಳ್ಳುವುದು ಅವರ ಹವ್ಯಾಸವಾಗಿತ್ತು ಎಂದು ವಿವರಿಸಿದರು.
ನಾಗಮಂಗಲ ತಾಲೂಕಿನ ದೇವಲಾಪುರ ಹ್ಯಾಂಡ್‍ಪೆÇೀಸ್ಟ್ ಬಳಿ ಅನುಮಾನಾಸ್ಪದವಾಗಿ ನಂಬರ್ ಪ್ಲೇಟ್ ಇಲ್ಲದೆ ಕೆಟಿಎಂ ಡ್ಯೂಕ್ ಬೈಕ್‍ನಲ್ಲಿ ಬರುತ್ತಿದ್ದ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ವಿಚಾರಣಎ ನಡೆಸಿದ ವೇಳೆ ಮಾಂಗಲ್ಯಸರ ಅಪಹರಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂತು ಎಂದು ಹೇಳಿದರು.
ಆರೋಪಿಗಳು ಮಂಡ್ಯಘಿ, ಮೈಸೂರು, ಬೆಂಗಳೂರು, ಹಾಸನ, ಶಿವಮೊಗ್ಗಘಿ, ರಾಮನಗರ, ಮೈಸೂರು, ಕೋಲಾರ, ಕೆಜಿಎï, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಒಟ್ಟು 26 ಪ್ರಕರಣಗಳು ಆರೋಪಿಗಳ ಮೇಲೆ ದಾಖಲಾಗಿದೆ ಎಂದ ಅವರು, ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅಪರ ಪೆÇಲೀಸ್ ಅಧೀಕ್ಷಕ ಧನಂಜಯ, ನಾಗಮಂಗಲ ಡಿವೈಎಸ್ಪಿ ಎನ್. ನವೀನ್‍ಕುಮಾರ್, ಸಿಪಿಐ ಕೆ.ಎನ್. ಸುಧಾಕರ್, ನಾಗಮಂಗಲ ಪಿಎಸ್‍ಐ ಸಿ. ರವಿಶಂಕರ್, ಗ್ರಾಮಾಂತರ ಪಿಎಸ್‍ಐ ಶಿವಪ್ರಕಾಶ್ ಇತರರಿದ್ದರು.