ಮೂಲ ಹುದ್ದೆಗೆ ಮರಳಿದ ಮೇಲ್ವಿಚಾರಕಿಯರು

ಮಾನ್ವಿ,ಆ.೨೧-
ಜಂಟಿ ನಿರ್ದೇಶಕರು (ಆಡಳಿತ), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ಇವರ ಆದೇಶದ ಮೇರೆಗೆ ಪ್ರಭಾರಿ ನಿಲಯ ಮೇಲ್ವಿಚಾರಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಾಯತ್ರಿ (ಅಡುಗೆಯವರು) ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಮಾನವಿ ಹಾಗೂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಸಿರವಾರ ಪಿ. ಕೋಮಲ (ಅಡುಗೆ ಸಹಾಯಕರು) ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯ ಮಾನವಿ, ಇವರನ್ನು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಬಲ್ಲಟಗಿ ಮೇಲ್ವಿಚಾರಕರ ಪ್ರಭಾರದಿಂದಬಿಡುಗಡೆಗೊಳಿಸಿ ಆದೇಶಿಸಿದ್ದು, ಕೂಡಲೇ ಸದರಿ ಕರ್ತವ್ಯದಿಂದ ಬಿಡುಗಡೆಗೊಂಡು ತಮ್ಮ ಮೂಲ ಹುದ್ದೆಯ ಕರ್ತವ್ಯಕ್ಕೆ ಹಾಜರಾಗಿ ಕಛೇರಿಗೆ ವರದಿ ಸಲ್ಲಿಸಲು ಆದೇಶ ಹೊರಡಿಸಲಾಗಿದೆ.