ಮೂಲ ಸೌಲಭ್ಯ ವಂಚಿತ ಬಡಾವಣೆ: ಯುವ ಜೆಡಿಎಸ್ ಪ್ರತಿಭಟನೆ

ಕಲಬುರಗಿ,ನ.9- ಅಗತ್ಯ ಮೂಲ ಸೌಲಭ್ಯ ವಂಚಿತ ಬಡಾವಣೆಗಳಾದ ಅಮರ ನಗರ, ಸೋನಿಯಾ ಗಾಂಧಿ ಕಾಲೋನಿ, ಬುಕಾರಿ ಕಾಲೋನಿ, ಇತ್ತೇಹಾದ ಚೌಕ್ ಬಡಾವಣೆಗಳಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಯುವ ಜೆಡಿಎಸ್ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಕೈಗೊಂಡ ಜೆಡಿಎಸ್ ಯುವ ಘಟಕದ ಕಾರ್ಯಕರ್ತರು ಮತ್ತು ಬಡಾವಣೆಯ ನಾಗರಿಕರು, ಈ ಬಡಾವಣೆಗೆ ಸಿಸಿ ರಸ್ತೆ, ಒಳಚರಂಡಿ, ಕುರಿಯುವ ನೀರು ಮತ್ತು ಬೀದಿ ದೀಪಗಳನ್ನು ಅಳವಡಿಸುವಂತೆ ಒತ್ತಾಯಿಸಿದರು.
ಕಳದೆ ಎರಡು ದಶಕಗಳಿಂದ ಈ ಬಡಾವಣೆಗಳು ಅಗತ್ಯ ಮೂಲ ಸೌಕರ್ಯಗಳಿಲ್ಲದೆ ತೀವ್ರ ಸಮಸ್ಯೆಯನ್ನು ಎದುರಿಸುತ್ತಿವೆ. ಕುಡಿಯುವ ನೀರು, ರಸ್ತೆ, ಬೀದಿ ದೀಪ ಹಾಗೂ ಒಳಚರಂಡಿ ವ್ಯವಸ್ಥೆ ಕೈಗೊಳ್ಳಬೇಕು ಎಂಬ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮೊಹ್ಮದ ಅಲಿಂ ಇನಾಮದಾರ, ದೇವೆಗೌಡ ತೆಲ್ಲೂರ, ಮನೋಹರ ಪೋದ್ಧಾರ, ಅರವಿಂದ ರಂಜೋರಿ, ಮೈನುದ್ದೀನ ಅಬ್ದುಲ ವಾಹಿದ, ಫೆರೋಜ ಅಹ್ಮದ, ಪ್ರವೀಣ ಜಾಧವ, ಸೈಯದ ಸುಲೆಮಾನ, ದೇವಿಂದ್ರ ಹಸನಾಪೂರ, ಆನಂದ ಪಾಟೀಲ ಲಿಂಗನವಾಡಿ, ಅನುಸೂಯಾ ಕಾಂಬಳೆ, ಅಮಾನ, ರವಿ ಕೊಲಾರ, ಅಭಿಷೆಕ ಚಕ್ರವರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.