ಮೂಲ ಸೌಲಭ್ಯಕ್ಕೆ ಒತ್ತಾಯಿಸಿ ಕರವೇ ಪ್ರತಿಭಟನೆ

ಮಾಲೂರು, ಜು.೧೦- ತಾಲೂಕಿನ ನೂಟವೆ ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಸೇರಿದ ಪೆಮ್ಮದೊಡ್ಡಿ ಗ್ರಾಮದ’ ದಿನ್ನೆಯಲ್ಲಿ ವಾಸವಾಗಿರುವ ನಾಯಕ ಸಮುದಾಯಕ್ಕೆ ಸೇರಿದ ಕುಟುಂಬಗಳು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದು ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳು ಒದಗಿಸಲು ತಾಲೂಕ ಆಡಳಿತ ಮುಂದಾಗುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿಯಲ್ಲಿ ಗ್ರೇಡ್ ೨ ತಹಸಿಲ್ದಾರ್ ಹರಿಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕ ಅಧ್ಯಕ್ಷ ಶಿವರನಾರಾಯಣಸ್ವಾಮಿ ತಾಲೂಕಿನ ಟೇಕಲ್ ಹೋಬಳಿಯ ಪೆಮ್ಮ ದೊಡ್ಡಿ ಗ್ರಾಮದ ದಿನ್ನೆಯಲ್ಲಿ ಸುಮಾರು ವರ್ಷಗಳಿಂದ ಬುಡಕಟ್ಟು ಹಾಗೂ ನಾಯಕ ಸಮುದಾಯದ ಕುಟುಂಬಗಳು ವಾಸವಾಗಿದ್ದು ಆ ಕುಟುಂಬಗಳಿಗೆ ಸರ್ಕಾರದಿಂದ ಸಿಗುವ ಕನಿಷ್ಠ ಮೂಲಭೂತ ಸೌಲಭ್ಯಗಳು ಸಹ ಸಿಗುತ್ತಿಲ್ಲ ಚುನಾವಣಾ ಸಮಯದಲ್ಲಿ ಪ್ರತಿನಿಧಿಗಳು ಭರವಸೆಗಳನ್ನು ನೀಡಿ ಮತ ಪಡೆದು ಹೋಗುತ್ತಾರೆ, ಆದರೆ ಇದುವರೆಗೂ ಇವರಿಗೆ ಮನೆಯಾಗಲೀ, ವಿದ್ಯುತ್ ಸೌಲಭ್ಯ, ಕುಡಿಯುವ ನೀರು, ಯಾವುದೇ ರೀತಿಯ ಸೌಲತ್ತು ದೊರೆತ್ತಿಲ್ಲ, ಎಣ್ಣೆ ದೀಪದಿಂದಲೆ ರಾತ್ರಿಯನ್ನು ಕಳೆಯುತ್ತಿದ್ದಾರೆ, ಅಲ್ಲಿನ ಮಕ್ಕಳ ವಿಧ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದೆ, ಇಂತಹ ಕುಟುಂಬಗಳನ್ನು ಸಮಾಜ ಕಲ್ಯಾಣ ಇಲಾಖೆಯಾಗಲೀ, ಗ್ರಾಮ ಪಂಚಾಯಿತಿಯಾಗಲೀ, ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ, ಕುಡಿಯುವ ನೀರನ್ನು ಈಗಲೂ ಸಹ ಕೆರೆಯಿಂದ ತಂದು ಕುಡಿಯುತ್ತಿದ್ದಾರೆ, ಕೂಡಲೇ ಸಂಬಂಧಪಟ್ಟ ಕುಟುಂಬಗಳಿಗೆ ವಿದ್ಯುತ್, ನೀರಿನ ವ್ಯವಸ್ಥೆ, ಮನೆ ನಿರ್ಮಾಣ ಬುಡಕಟ್ಟು ನಾಯಕ ಜನಾಂಗಕ್ಕೆ ನ್ಯಾಯ ಒದಗಿಸಬೇಕು ಇವರಿಗೆ ಮತದಾನ ಮಾಡಲು ಮತದಾರರ ಗುರುತಿನ ಚೀಟಿ ಮಾತ್ರ ಹೊಂದಿದ್ದು, ಪಡಿತರ ಚೀಟಿ ಮತ್ತು ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಇವರಿಗೂ ನೀಡಬೇಕು ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ಸೂಕ್ತ ನ್ಯಾಯ ಒದಗಿಸ ಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ ದಯಾನಂದ, ಅಮರಾವತಿ, ಕೊಪ್ಪ ಚಂದ್ರು, ನಾರಾಯಣಸ್ವಾಮಿ, ಸುಧಾಕರ್, ಚಿರಂಜೀವಿ, ಮಿಥುನ್, ಮಣಿ, ಸುರೇಶ್ ರೆಡ್ಡಿ, ಬಸವರಾಜು, ನವೀನ್, ಕಿರಣ್, ಸುರೇಶ್, ಮಂಜುನಾಥ್, ರವಿಚಂದ್ರ, ಇನ್ನಿತರರು ಹಾಜರಿದ್ದರು.
ಫೋಟೋ ೧ ಮಾಲೂರು ಜುಲೈ ೮ ತಾಲೂಕಿನ ನೂಟವೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಪೆಮ್ಮದೊಡ್ಡಿ ಗ್ರಾಮದ ದಿನ್ನೆಯಲ್ಲಿ ನಾಯಕ ಸಮುದಾಯದ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳು ಒದಗಿಸಲು ತಾಲೂಕ ಆಡಳಿತ ಮುಂದಾಗುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿಯಲ್ಲಿ ಗ್ರೇಡ್ ೨ ತಹಸಿಲ್ದಾರ್ ಹರಿಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.