ಮೂಲ ಸೌಕರ್ಯ ವಂಚಿತ ಫತ್ತೆಪೂರ್ ಗ್ರಾಮ: ಯಾಕಾಪೂರ ಆಕ್ರೋಶ

ಚಿಂಚೋಳಿ,ಸೆ.25- ತಾಲೂಕಿನ ಫತ್ತೆಪೂರ್ ಗ್ರಾಮಕ್ಕೆ ಭೇಟಿ ನೀಡಿದ ಜೆಡಿಎಸ್ ಮುಖಂಡ ಸಂಜೀವನ ಯಾಕಾಪೂರ ಗ್ರಾಮದ ಹಲವಾರು ಸಮಸ್ಯೆಗಳನ್ನು ಆಲಿಸಿದ ಅವರು, ಮಳೆ ಮತ್ತು ನೆರೆಯಿಂದ ತತ್ತರಿಸಿದ ಈ ಗ್ರಾಮಕ್ಕೆ ಸೂಕ್ತಪ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಫsÀತ್ತೆಪೂರ್ ಗ್ರಾಮದ ಮೂಲ ಸಮಸ್ಯೆ ನೀರಿನ ಪೈಪ್ ಲೈನ್ ಕಾಮಗಾರಿಯು ಗ್ರಾಮದ ಸಿ ಸಿ ರಸ್ತೆಯನ್ನು ನುಜ್ಜು ನುಜ್ಜಾಗಿ ಒಡೆದು ಕಳಪೆ ಕಾಮಗಾರಿ ನಿರ್ಮಾಣಮಾಡಿದ್ದಾರೆ. ಅನೇಕ ಮನೆಗಳ ಸುತ್ತ ಮುತ್ತ ನೀರಿನಿಂದ ಜಲಾವೃತಗೊಂಡಿದೆ. ಅನೇಕ ಬಡವರ ಜನಜೀವನ ಅಸ್ತವ್ಯಸ್ತಗೊಂಡಿದೆ.
ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಸಕರ ಕೈಗೊಂಬೆಯಾಗಿ ಗ್ರಾಮಸ್ಥರಿಗೆ ದಬ್ಬಾಳಿಕೆ ಮಾಡಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಸಂಪೂರ್ಣ ಗ್ರಾಮದ ವ್ಯವಸ್ಥೆ ಹದಗೆಟ್ಟಿದೆ ಎಂದು ಅವರು ಆರೋಪಿಸಿದರು.
ಫತ್ತೆಪೂರ್ ಗ್ರಾಮದ ಹಲವಾರು ಓಣಿಗಳಲ್ಲಿ ಭೇಟಿ ನಿಡಿ ಅನೇಕ ಸಮಸ್ಯೆಗಳನ್ನು ಪರಿಶೀಲನೆ ಮಾಡಿ ಸಂಭಂದಪಟ್ಟ( ಪಿ ಡಿ ಓ) ಹಾಗೂ ವಿವಿಧ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಮಾತನಾಡಿ ಅಧಿಕಾರಿಗಳಿಗೆ ಫತ್ತೆಪೂರ್ ಗ್ರಾಮದ ನಿರ್ಲಕ್ಷ್ಯ ಮಾಡದೆ ಗ್ರಾಮದಲ್ಲಿರುವ ವಿವಿಧ ಸಮಸ್ಯೆಗಳನ್ನು ಆದಷ್ಟು ಬೇಗನೆ ಬಗೆಹರಿಸಬೇಕೆಂದು ಯಾಕಾಪೂರ್ ಅವರು ಮನವರಿಕೆ ಮಾಡಿದರು.
ಈ ಸಂಧರ್ಭದಲ್ಲಿ. ರಘು ದೇಸಾಯಿ ದೇಗಲ್ಮಡಿ. ನೀಲಕಂಠ ಐನೋಳ್ಳಿ. ಶ್ರೀನಿವಾಸ್ ನಿಂಗಪ್ಪ ಗ್ರಾಮ. ಪಂ ಸದಸ್ಯರು. ರಾಮಣ್ಣ ಬೀರನಹಳ್ಳಿ. ವಿಲಾಸ ರೆಡ್ಡಿ ಸೇರಿಕಾರ್.ಶಿವಪ್ಪ ಗಂಜೈ. ಜಗಪ್ಪ ಚಿಮ್ಮನಚೋಡ್. ಶಂಕರ್ ದೆಗಲ್ಮಡಿ. ಸಿದ್ದಪ್ಪ ದೆಗಲ್ಮಡಿ. ಮಾರುತಿ ತಟ್ಟಿ. ಕಾಶೀನಾಥ್ ಸ್ವಾಮಿ. ಜಗಪ್ಪ ಬೇಡಗಪಳ್ಳಿ. ಲಕ್ಷ್ಮಣ್ ಗಂಜೈ.ವಿಲಾಸ್ ಕುಮಾರ್. ವಿಠಲ್. ವಿಠಲ್ ದೇಗಲ್ಮಡಿ. ಜೈಪಾಲ್ ರೆಡ್ಡಿ. ಮೋಹನ್ ರೆಡ್ಡಿ. ಬಕ್ಕರೆಡ್ಡಿ. ಕೃಷ್ಣ. ಭೀಮರಾವ್ ಗಾಂಜೈ. ಮತ್ತು ಅನೇಕ ಜೆಡಿಎಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.