ಚಿಟಗುಪ್ಪ:ಅ.1:ಬೀದರ್ ದಕ್ಷಿಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವೆ, ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಇನ್ನಷ್ಟು ಅನುದಾನಗಳನ್ನು ತಗೆದುಕೊಂಡು ಬಂದು ಬೀದರ್ ದಕ್ಷಿಣ ಕ್ಷೇತ್ರಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಸದಾಬದ್ಧನಾಗಿರುವೆ ಎಂದು ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶಾಸಕರಾದ ಡಾ ಶೈಲೇಂದ್ರ ಬೆಲ್ದಾಳೆ ಅವರ ಜನ್ಮದಿನ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ ಅಭಿಮಾನಿಗಳು, ಮತದಾರರಿಂದ, ಪಕ್ಷದ ಮುಖಂಡರರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಡಾ. ಶೈಲೇಂದ್ರ ಬೆಲ್ದಾಳೆ ಅವರು ಜನ್ಮದಿನ ನಿಮಿತ್ತ ಬೆಳಿಗ್ಗೆ ಸೀಮಿ ನಾಗಣ್ಣ ದೇವಸ್ಥಾನ, ಚಳಕಾಪುರ ಹನುಮಾನ ದೇವಸ್ಥಾನ, ಹಾಗೂ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು ಮತ್ತು ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಮ್ಮ ಕ್ಷೇತ್ರದ ಅಭಿವೃದ್ಧಿಗೆ, ಜನರ ಒಳಿತಿಗಾಗಿ ಕೆಲಸ ಸೇವೆ ಸಲ್ಲಿಸುವೆ ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿ ಹಗಲಿರುಳು ಶ್ರಮಿಸಿ ಜನರ ಎಲ್ಲ ಕಷ್ಟಗಳಲ್ಲಿ ಭಾಗಿಯಾಗಿ ಸಮಸ್ಯೆಗಳನ್ನು ಪರಿಹರಿಸಲು ಶ್ರಮ ಪಡುವೆ.
ಕ್ಷೇತ್ರದ ಯಾವುದೇ ಗ್ರಾಮದಲ್ಲಿಯೂ ವಿಧ್ಯು ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ರಸ್ತೆ ಚರಂಡಿ ಇನ್ನಿತರ ಯಾವುದೇ ಮೂಲ ಸೌಕರ್ಯಗಳ ಸಮಸ್ಯೆ ಎದುರಾದರೆ ಶೀಘ್ರ ಸಂಪರ್ಕಿಸಿ ತಕ್ಷಣ ಸ್ಪಂದಿಸಲಾಗುವುದು ಕ್ಷೇತ್ರದ ಸಮಗ್ರ ಜನರ ಸೇವಕನಾಡೆಷಗಿ ದುಡಿಯುವೆ ಎಂದರು.
ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರ ಆದೇಶದಂತೆ ಕ್ಷೇತ್ರದ ಪಕ್ಷದ ಮುಖಂಡರು ಕಾರ್ಯಕರ್ತರು ವಿವಿಧ ಗ್ರಾಮಗಳಲ್ಲಿ
ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪುಸ್ತಕ ವಿತರಿಸುವ ಮೂಲ ಶಾಸಕರ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವಾನಂದ ಮಠಾಳಕರ್, ಮಲ್ಲಿಕಾರ್ಜುನ ಕುಂಬಾರ
, ಮುಖಂಡರಾದ
ರಾಮ್ಲು ಮಂತ್ರಿ, ವಿಜಯಕುಮಾರ ವಾಲಿ, ನರೇಶ್ ತೊಂಟಿ, ಜಗನ್ನಾಥ ಬೇಡರ್, ವಿಕೆ ಪೂಜಾರಿ, ಮಲ್ಲಿಕಾರ್ಜುನ ಪಾಟೀಲ, ಶಂಕರ, ಚಂದ್ರಶೇಖರ್, ಪಾಟೀಲ್ ಪರಮೇಶ್ವರ, ಅಂಬರೀಷ್ ಕುಂಬಾರ, ವಿಜಯಕುಮಾರ, ಅಶೋಕ ರೆಡ್ಡಿ, ಲಕ್ಷ್ಮಣ ದರ್ಜಿ, ಜೀವನ, ಶಿವಾಜಿ ಗೌಳೆ, ಡಾ. ನಯಿಮ, ಸೂರ್ಯಕಾಂತ ಕಾರಕಪಳ್ಳಿ, ಶ್ರೀನಿವಾಸ್, ವೀರಶೆಟ್ಟಿ, ಲಾಲಪ್ಪ, ಬಸವರಾಜ ಮತ್ತಿತರರು ಉಪಸ್ಥಿತರಿದ್ದರು.