ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ

ಚಾಮರಾಜನಗರ, ಮೇ.20:- ನಗರದ ಸ್ವಾಮಿ ಲೇಔಟ್ ಹಾಗೂ ಸೋಮಣ್ಣ ಲೇಔಟ್‍ನಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ನಿವಾಸಿಗಳು ನಗರಸಭೆ ಹಾಗೂ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.
ನಗರದ ನಗರಸಭೆಕಚೇರಿ ಮುಂಭಾಗ ಜಮಾಯಿಸಿದ ನಿವಾಸಿಗಳು ನಗರಸಭಾ ಅಧಿಕಾರಿಗಳ ವಿರುದ್ಧಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಾಡ್ರ್ನ 3 ಮತ್ತು 4ನೇ ಅಡ್ಡರಸ್ತೆಯಲ್ಲಿ ಸಂಚರಿಸಲುರಸ್ತೆ, ಬೀದಿ ದೀಪಗಳು, ಚರಂಡಿಗಳು ಸೇರಿದಂತೆಯಾವುದೇ ಮೂಲ ಸೌಕರ್ಯಗಳು ಸರಿಯಾಗಿಲ್ಲ. ಈ ಸಂಬಂಧ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂಯಾವುದೇ ಪ್ರಯೋಜನವಾಗಿಲ್ಲ. ಹಲವು ವರ್ಷಗಳಿಂದಲೂ ವಾಸಿಸುವ ನಿವಾಸಿಗಳು ಮೂಲ ಸೌಕರ್ಯಕೊರತೆಯಿಂದತೊಂದರೆಅನುಭವಿಸುತ್ತಿದ್ದಾರೆಎಂದುದೂರಿದರು. ಆದ್ದರಿಂದಕೂಡಲೇಅಕ್ರಮವಾಗಿ ನಡೆದಿರುವರಸ್ತೆಒತ್ತುವರಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಅಲ್ಲದೇ ಬಡಾವಣೆಗಳಿಗೆ ಬೇಕಾದ ಮೂಲ ಸೌಕರ್ಯಗಳನ್ನು ಕೂಡಲೇ ಕಲ್ಪಿಸಿಕೊಡಬೇಕು. ಬೇಡಿಕೆಈಡೇರುವತನಕ ಅನಿರ್ಧಿμÁ್ಟವಧಿಧರಣಿ ನಡೆಸಲಾಗುವುದು. ಕೂಡಲೇ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಮಾತಿನ ಚಕಮಕಿ: ನಿವಾಸಿಗಳು ಹಾಗೂ ನಗರಸಭೆ ಪೌರಾಯುಕ್ತರಾಮದಾಸ್ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಗರಸಭೆ ಮುಂಭಾಗ ಪ್ರತಿಭಟನಾನಿರತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕಾಗಮಿಸಿದ ಪೌರಾಯುಕ್ತರಾಮದಾಸ್, ನಿವಾಸಿಗಳ ಅಹವಾಲನ್ನು ಆಲಿಸಿ ಒಂದು ತಿಂಗಳ ಕಾಲಾವಕಾಶ ಕೇಳಿದರು. ಇದರಿಂದಾಗಿಕುಪಿತಗೊಂಡ ನಿವಾಸಿಗಳು, ಈಗಾಗಲೇ ಕಳೆದ 7 ತಿಂಗಳಿ ನಿಂದಲೂ ಮನವಿ ಸಲ್ಲಿಸಿ, ಜಿಲ್ಲಾಧಿಕಾರಿಗಳು ಸಹ ಆದೇಶ ಹೊರಡಿಸಿದ್ದರೂ ರಸ್ತೆತೆರವು ಮಾಡಿಸದ ನೀವು ಇನ್ನೂಒಂದು ತಿಂಗಳೊಳಗೆ ಮಾಡಿಸುತ್ತೀರಾಎಂದು ಪ್ರಶ್ನಿಸಿದರು.
ಚುನಾವಣಾ ಹಿನ್ನಲೆಯಿಂದ ಸರ್ವೆಕಾರ್ಯವನ್ನು ಸ್ಥಗಿತ ಮಾಡಲಾಗಿತ್ತು. ಮುಂದಿನವಾರದಿಂದ ಮುಂದುವರೆಸಲಾಗುವುದುಎಂದು ಪೌರಾಯುಕ್ತ ಹೇಳಿದಾಗ, ಇದಕ್ಕೂ ಬಗ್ಗದ ನಿವಾಸಿಗಳು ಇಂದಿನಿಂದಲೇ ಸರ್ವೆಕಾರ್ಯ ಮಾಡಿ ನಮಗೆ ಓಡಾಡಲು ಸುಗಮ ದಾರಿ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕಾಗಮಿಸಿದ ಪೌರಾಯುಕ್ತರಾಮದಾಸ್ ಮನವೊಲಿಕೆಗೂ ಬಗ್ಗದ ಪ್ರತಿಭಟನಾಕಾರರು ಬಳಿಕ ಪಚ್ಚಪ್ಪ ವೃತ್ತ, ಬಿ.ರಾಚಯ್ಯಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ಮುಂದುವರಿಸಿದರು.
ಪ್ರತಿಭಟನೆಯಲ್ಲಿಮಧು, ವಿನಯ್, ಮಹೇಂದ್ರ, ವೀರಭದ್ರಸ್ವಾಮಿ, ರಾಜಗೋಪಾಲ, ಜಯಪ್ರಕಾಶ್, ಅನುರಾಧ, ಜಯಮ್ಮ, ಲಕ್ಷ್ಮಮ್ಮ, ಸುಶೀಲಮ್ಮ, ಮಮತಾ ಸೇರಿದಂತೆಇತರರು ಭಾಗವಹಿಸಿದ್ದರು.