ಮೂಲ ಸೌಕರ್ಯಕ್ಕೆ ಆದ್ಯತೆ : ಶಂಶುನ್ನೀಸಾ


ಹಿರಿಯೂರು.ನ.೧೩: ನಗರದಲ್ಲಿ ಕುಡಿಯುವ ನೀರು ಸ್ವಚ್ಛತೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ನಗರಸಭೆಯ ನೂತನ ಅಧ್ಯಕ್ಷರಾದ ಶಂಶುನ್ನೀಸಾ ಹೇಳಿದರು. ಅಧಿಕಾರ ಸ್ವೀಕರಿಸಿದ ನಂತರ ನಗರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡುತ್ತಿದ್ದು ಇಲ್ಲಿನ ವಲ್ಲಭಾಯ್ ಪಟೇಲ್ ರಸ್ತೆ ಬಡಾವಣೆಯಲ್ಲಿ ಇಂದು ಬೆಳಿಗ್ಗೆ ಸಂಚರಿಸಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಪೌರಾಯುಕ್ತರಾದ ಟಿ.ಲೀಲಾವತಿಯವರು ಮಾತನಾಡಿ ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾದ ಕೆಲಸ ಕಾರ್ಯಗಳನ್ನು ಬೇಗನೆ ಮಾಡಿಸಿಕೊಡುವುದಾಗಿ ಹೇಳಿದರು. ವಾರ್ಡ್‌ನ ನಾಗರೀಕರಾದ ರವೀಂದ್ರನಾಥ್ ಮಾತನಾಡಿ ನಗರಸಭೆಗೆ ನೂತನ ಅಧ್ಯಕ್ಷರು ಉಪಾಧ್ಯಕ್ಷರು ಆಯ್ಕೆಯಾಗಿದ್ದು ಸಂತೋಷದ ವಿಚಾರ ವಾರ್ಡ್ ಗಳಿಗೆ ಭೇಟಿ ನೀಡಿ ಉತ್ಸಾಹದಿಂದ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಸಾರ್ವಜನಿಕರ ಮೂಲ ಸೌಕರ್ಯ ಕುಂದುಕೊರತೆಗಳಿಗೆ ಸ್ಪಂದಿಸಬೇಕು ಎಂದರು.

ಕಿರಣ್ ಮಾತನಾಡಿ ತಮ್ಮ ಮನೆ ಬಳಿ ಬೋರ್ ನೀರಿನ ಪೈಪ್ ಹಾದುಹೋಗಿದೆ ಒಂದು ನಲ್ಲಿ ಹಾಕಿಸಿ ಕೊಡಿ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು. ನಗರಸಭೆ ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್, ವಾರ್ಡ್‌ನ ಸದಸ್ಯ ಅನಿಲ್ ಕುಮಾರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಖಾದಿರಮೇಶ್, ಯುವ ಮುಖಂಡರಾದ ಪಿ.ಎಸ್.ಸಾದತ್‌ವುಲ್ಲಾ, ಜಿ.ದಾದಾಪೀರ್, ಲೋಕೇಶ್, ಆರೋಗ್ಯ ನಿರೀಕ್ಷಕ ಸುನೀಲ್, ಮತ್ತು ನಗರಸಭೆ ಸಿಬ್ಬಂದಿ, ವಾರ್ಡ್ ನಾಗರೀಕರಾದ, ದೇವರಾಜ್‌ಮೂರ್ತಿ, ರಾಜೇಶ್, ನಾಗರಾಜ್, ಅಮರ್‌ನಾಥ್, ಜಫೃದ್ದೀನ್, ಶ್ರೀನಿವಾಸ್, ಪ್ರಕಾಶ್, ಅಮೃತಲಕ್ಷ್ಮಿ, ಅನಂತಕುಮಾರ್, ಮತ್ತಿತರರು ಇದ್ದರು.