ಮೂಲ ಸೌಕರ್ಯಕ್ಕೆ ಆಗ್ರಹ

Exif_JPEG_420

ಕಲಬುರಗಿ: ಜು.21:ಗ್ರಾಮೀಣ ಮತಕ್ಷೇತ್ರದ ಕುಸನೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೃಷ್ಣ ಕಾಲೋನಿ ಹಾಗೂ ಸರಸ್ವತಿಪುರ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಲು ಶಾಸಕ ಬಸವರಾಜ ಮತ್ತಿಮಡು ರವರು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಕರವೇ(ಶಿವರಾಮೇಗೌಡ ಬಣ) ದ ಜಿಲ್ಲಾಧ್ಯಕ್ಷರಾದ ಶರಣು ಹೊಸಮನಿ ಆರೋಪಿಸಿದರು.
ಗ್ರಾಮದಲ್ಲಿ ಸಮರ್ಪಕವಾಗಿ ಮೂಲ ಸೌಕರ್ಯಗಳು ಇಲ್ಲದಿರುವುದು ಹಾಗೂ ಗ್ರಾಮದಲ್ಲಿ ಚರಂಡಿಗಳು ನಿರ್ಮಿಸದೇ ಮನೆಗಳ ಮುಂದೆ ನೀರು ನಿಂತು ತೊಂದರೆ ಉಂಟಾಗುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಹಲವು ತಿಂಗಳುಗಳಿಂದ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಅರ್ಜಿ, ಮನವಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಕಾರ್ಯ ಪ್ರಗತಿಯಾಗಿಲ್ಲ ಎಂದು ಆರೋಪಿಸಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಗ್ರಾಮದ ಸಮಸ್ಯೆಗಳನ್ನು ಸಂಬಂಧ ಪಟ್ಟ ಜನಪ್ರತಿನಿಧಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಿಲ್ಲ.ಯಾವುದೇ ಜನಪ್ರತಿನಿಧಿ ಮತ್ತು ಅಧಿಕಾರಿ ನಮ್ಮ ಸಮಸ್ಯೆಗಳತ್ತ ತಿರುಗಿಯೂ ನೋಡುತ್ತಿಲ್ಲ. ಗ್ರಾಮದ ಸಮಸ್ಯೆಗಳತ್ತ ಕೂಡಲೇ ಗಮನ ಹರಿಸಬೇಕು ಎಂದು ಅವರು ಎಚ್ಚರಿಸಿದರು.