ಮೂಲ ಸಾಕ್ಷರತಾ ಪರೀಕ್ಷೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.06: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿ ಅವರಿಂದ2022-23ನೇ ಸಾಲಿನ 1000 ಸಂಪೂರ್ಣ ಸಾಕ್ಷರತಾ ಗ್ರಾಮ ಪಂಚಾಯಿತಿ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮೂಲ ಸಾಕ್ಷರತಾ ಪರೀಕ್ಷೆಗೆ ಕಲಿಕಾರ್ಥಿಗಳು ಸಂತಸದಿಂದ ಹಾಜರಾದರು.
ಸದರಿ ಪರೀಕ್ಷೆಗೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಶಿವಪ್ರಕಾಶ್ ಚಿಗಟೇರಿ ಧಿಡೀರನೆ ಭೇಟಿನೀಡಿ ಮೂರು ಪರೀಕ್ಷಾ ಕೊಠಡಿಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಡೈಯಟ್  ಉಪನ್ಯಾಸಕರಾದ ಮಯೂರ್ ಗದುಗಿನ,ಬಿ.ಆರ್. ಪಿ ಮಲ್ಲಿಕಾರ್ಜುನ, ಸಿ.ಆರ್. ಪಿ.ಗಳಾದ  ಎಂ.ಶ್ರೀನಿವಾಸ ರೆಡ್ಡಿ, ರಾಘವ ರೆಡ್ಡಿ ,ಶಾಲಾ ಮುಖ್ಯ ಗುರುಗಳಾದ ರವಿ ಚೇಳ್ಳಗುರ್ಕಿ,ಕೊಠಡಿ ಮೇಲ್ವಿಚಾರಕರಾದ ಬಸವರಾಜ, ಮೋದಿನ್ ಸಾಬ್,ಚನ್ನಮ್ಮ ಮುಂತಾದವರು ಉಪಸ್ಥಿತರಿದ್ದರು.