ಮೂಲ ಸಂಸ್ಕøತಿ ಮರೆಯುತ್ತಿದ್ದೇವೆ


ಧಾರವಾಡ,ಫೆ.25: ಈ ಹಿಂದೆಕರ್ನಾಟಕ ಕೇವಲ ಗಡಿಭಾಗದ ನಾಡುಗಳನμÉ್ಟ ಕಳೆದುಕೊಂಡಿಲ್ಲ ಬದಲಾಗಿಅಲ್ಲಿನ ಪ್ರಾದೇಶಿಕ ಸಾಹಿತ್ಯವನ್ನು ಕಳೆದುಕೊಂಡಿದೆ ಎಂದುಡಾ.ಗುರುಪಾದ ಮರೆಗುದ್ದಿ ಹೇಳಿದರು.
ಕವಿವಿ ಸಂಘ ಅಥಣಿಯಲ್ಲಿ ಆಯೋಜಿಸಿದ್ದ ಗಡಿನಾಡಿನಲ್ಲಿಕನ್ನಡಜಾಗೃತಿ ಮತ್ತು ಸಾಂಸ್ಕøತಿಕ ಸಂಭ್ರಮಕಾರ್ಯಕ್ರಮದಲ್ಲಿ `ಸಾಹಿತ್ಯ ಮತ್ತು ಸಂಸ್ಕೃತಿ ಮೊದಲ ಗೋಷ್ಠಿ’ಯಲ್ಲಿ ಮಾತನಾಡಿದಅವರುಕನ್ನಡದಉಪಭಾμÉಯ ಸಮುದಾಯಗಳ ಜನರ ಭಾμÁ ಪ್ರಯೋಗವನ್ನು ಬಳಸಿಕೊಂಡ ಸಾಹಿತ್ಯಗಳು ರಚನೆಯಾಗಬೇಕುಅದರಲ್ಲಿ ಸೃಜನಶೀಲತೆಯ ಕಾವ್ಯಗಳು ಅಡಗಿವೆ, ಆಧುನಿಕತೆಯಲ್ಲಿ ಮಾದ್ಯಮಗಳ ಶಿಷ್ಟಭಾಷ ಪ್ರಯೋಗದಿಂದ ಪ್ರಭಾವಿತರಾಗುತ್ತಿದ್ದೇವೆಆದರೆ ನಮ್ಮ ಮೂಲ ಸಂಸ್ಕೃತಿಯ ಮರೆಯುತ್ತಿದ್ದೇವೆ, ಸೃಜನಶೀಲ ಸಾಹಿತಿ, ಕಲಾವಿದ ಮತ್ತು ಈ ನೆಲವನ್ನ ಅರ್ಥಮಾಡಿಕೊಳ್ಳದಿದ್ದರೆ ಇಲ್ಲಿಯಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದಪ್ರೊ. ಶ್ರೀಶೈಲ ಹೊರ್ತಿಕರಕನ್ನಡ ಕಲಿಸಿದರೆ ಕನಿಷ್ಠರುಎನ್ನುವ ಪ್ರಜ್ಞೆಯನ್ನು ಇಂದಿನ ಜನರು ಬೆಳಸಿಕೊಂಡು ಪಾಶ್ಚಿಮಾತ್ಯರ ಅಂದಾನುಕರಣೆಯಲ್ಲಿತೊಡಗುತ್ತಿದ್ದಾರೆ. ಈ ವ್ಯವಸ್ಥೆ ಬದಲಾಗಬೇಕಿದೆ, ಪಾಶ್ಚಿಮಾತ್ಯರ ಅನುಕರಣೆಯಿಂದಾಗಿ ನಮ್ಮ ಸಂಸ್ಕೃತಿಯು ನಾಶವಾಗುತ್ತಿದೆ, ಮೊಬೈಲ ಬಳಕೆಯಿಂದಾಗಿ ನಮ್ಮತನವನ್ನು ಕಳೆದುಕೊಂಡು ನಮ್ಮ ಭಾμÉಯನ್ನುದೂರ ಮಾಡಿಕೊಳ್ಳುತ್ತಿದ್ದು ಜನರುಆಂಗ್ಲಭಾμÁ ವ್ಯಾಮೋಹಕ್ಕೆ ಒಳಗಾಗುತ್ತಿರುವದು ವಿμÁದನೀಯ ಎಂದರು.
ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿಮತ್ತುಕಾರ್ಯಕಾರಿ ಸಮಿತಿ ಸದಸ್ಯಡಾ.ಧನವಂತ ಹಾಜವಗೋಳ ವೇದಿಕೆಯಲ್ಲಿದ್ದರು.
ಚಿದಾನಂದ ಮಾಸನಕಟ್ಟಿ ಸ್ವಾಗತಿಸಿದರು ಗುರುರಾಜ ಸಬನೀಸ ನಿರೂಪಿಸಿ ವಂದಿಸಿದರು.