ಮೂಲ ಸಂಸ್ಕøತಿ –ಕನ್ನಡ ಸಂಸ್ಕøತಿ ಕಾರ್ಯಕ್ರಮ ರೂಪಿಸಿದೆ

ದಾವಣಗೆರೆ; ಮಾ.4; ತಳಸಮುದಾಯದ ಕಲೆಗಳು ನಶಿಸಿಹೋಗುತ್ತಿರುವ ಇಂದಿನ ತಾಂತ್ರಿಕ ಯುಗದಲ್ಲಿ ನಮ್ಮ ಪರಂಪರೆಯ ಬಳುವಳಿಯಾದ ತಳಸಮುದಾಯದ ಕಲಾ ಪ್ರಕಾರಗಳನ್ನು ಉಳಿಸಲು ಸರ್ಕಾರ `ಮೂಲ ಸಂಸ್ಕøತಿ ಕನ್ನಡ ಸಂಸ್ಕøತಿ` ಎಂಬ ಕಾರ್ಯಕ್ರಮ ರೂಪಿಸಿದೆ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ನಿಕಟ ಪೂರ್ವ ಸದಸ್ಯ ಹಾಗೂ ಮೂಲ ಸಂಸ್ಕøತಿ ಕನ್ನಡ ಸಂಸ್ಕøತಿ ಕಾರ್ಯಕ್ರಮದ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಹೇಳಿದರು.ಜಿಲ್ಲಾಡಳಿತÀ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ಶುಕ್ರವಾರ, ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಜರುಗಿದ “ಮೂಲ ಸಂಸ್ಕøತಿ ಕನ್ನಡ ಸಂಸ್ಕøತಿ 2023” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ದೇಶದ ಮೂಲ ಸಂಸ್ಕøತಿಯ ತಳಹದಿ ಜಾನಪದ ಸಾಹಿತ್ಯ, ಪ್ರಕಾರವಾಗಿದೆ ಇಂದು ಈ ಮೂಲ ಸಂಸ್ಕøತಿಯ ಪರಂಪರೆ ನಶಿಸಿಸಿತ್ತಿರುವುದನ್ನು ಮನಗಂಡ ಸರ್ಕಾರ ಇಂದಿನ ಯುವ ಪೀಳಿಗೆ ಮೂಲ ಸಂಸ್ಕøತಿಯ ತಳಸಮುದಾಯದ ಕಲಾ ಪ್ರಕಾರಗಳ ಪರಿಚಯ ಅಭ್ಯಾಸದ ಮೂಲಕ ಈ ಪರಂಪರೆಯನ್ನು ಉಳಿಸುವ ಕೆಲಸವನ್ನು ಮಾಡುತ್ತಿದೆ ಎಂದರು.ರಾಜ್ಯ ಸರ್ಕಾರ ಜಾರಿಗೊಳಿಸಿದ ಈ ಯೋಜನೆಯಡಿ ಕರ್ನಾಟಕ ರಾಜ್ಯಾದ್ಯಂತ 62 ತಂಡಗಳ 650 ವಿದ್ಯಾರ್ಥಿ ಕಲಾವಿದರಿಗೆ ಕನ್ನಡ ಸಂಸ್ಕøತಿ ಇಲಾಖೆಯಿಂದ ಅಧಿಕೃತ ಕಲಾವಿದರೆಂದು ಗುರುತಿಸಲಾಗಿದೆ ಇವರಿಗೆ ಮೂಲ ಸಂಸ್ಕøತಿ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರು.