ಮೂಲ ಸಂಸ್ಕೃತಿಯ ಬೇರು ಭವ್ಯ ಭಾರತದ ತೇರು

ಚಿತ್ರದುರ್ಗ.ಮಾ.೧; ಜಾನಪದ  ಕಲೆಗಳಿಗೆ ಜೀವನ ಬದಲಾವಣೆ ಮಾಡುವಂತಹ ಶಕ್ತಿಯಿದೆ. ಈ ನೆಲದ ಮೂಲ ಸಂಸ್ಕøತಿಯ ಬೇರಿನ ಮೇಲೆ ಭವ್ಯ ಭಾರತ ನಿರ್ಮಾಣವಾಗಿದೆ ಎಂದು ಮೂಲ ಸಂಸ್ಕøತಿ-ಕನ್ನಡ ಸಂಸ್ಕøತಿ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಹೇಳಿದರು.ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ನಗರದ ತರಾಸು ರಂಗಮಂದಿರದಲ್ಲಿ  ಆಯೋಜಿಸಿದ್ದ, ಮೂಲ ಸಂಸ್ಕøತಿ-ಕನ್ನಡ ಸಂಸ್ಕøತಿ-ನಶಿಸಿ ಹೋಗುತ್ತಿರುವ ತಳ ಸಮುದಾಯಗಳ ವಿಶಿಷ್ಟ ಕಲೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಬಿಡುವಿನ ವೇಳೆಯಲ್ಲಿ ಜನರು ತಮ್ಮ ಮಾತುಗಳ ಮೂಲಕ ರಚಿಸಿದ ಸಾಹಿತ್ಯ ಜಾನಪದವಾಗಿದೆ. ಇವುಗಳಿಗೆ ಲಿಖಿತ ರೂಪವಿಲ್ಲ. ಯಾರು ರಚಿಸಿದ್ದಾರೆ ಎಂಬುದು ತಿಳಿದಿಲ್ಲ. ಆದರೆ ಜೀವನ ಮೌಲ್ಯಗಳನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹಬ್ಬಿಸುತ್ತಾ ಸಮೃದ್ಧವಾಗಿ ಬೆಳದಿವೆ.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ಕಂಡುಬರುತ್ತಿವೆ. ಈ ಪ್ರಮಾಣ ಭಾರತಕ್ಕೆ ಹೊಲಿಸಿದರೆ ಹೆಚ್ಚಿದೆ. ಜನಪದ ಸಾಹಿತ್ಯ ಮನ ಪರಿವರ್ತನೆ ಮಾಡುವ ಶಕ್ತಿ ಹೊಂದಿದೆ. ನೋವುಗಳನ್ನು ನಿವಾರಿಸುವ, ಒಂಟಿತನದಿಂದ ಹೊರ ಬರಲು ಸಹಾಯ ಮಾಡುತ್ತವೆ. ಆತ್ಮಹತ್ಯೆ ಪ್ರಯತ್ನಿಸುವ ವ್ಯಕ್ತಿಗೆ ಆತ್ಮಸ್ಥೈರ್ಯ ತುಂಬಿ ಬದುಕಿಸುವ ವಿಶಿಷ್ಠ ಶಕ್ತಿ ಜಾನಪದ ಕಲೆಗಳಿಗಿದೆ ಎಂದರು.ರಾಜ್ಯದಲ್ಲಿ ನಶಿಸಿ ಹೋಗುತಿರುವ ಜಾನಪದ ಕಲೆಗಳಿಗೆ ಪುನರ್ಜನ್ಮ ನೀಡಬೇಕಿದೆ. ವಾದ್ಯಗಳು ಮತ್ತು ಕಲೆಗಳಿಗೆ ಜನರನ್ನು ಆಕರ್ಷಿಸುವ ಶಕ್ತಿಯಿದೆ. ಜಾನಪದ ಕಲೆಗಳನ್ನು ಮುಂದಿನ ಪೀಳಿಗೆ ಉಳಿಸಿ, ಬೆಳಸಿಕೊಂಡು ಹೋಗಬೇಕು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಾಡಿನ ಮೂಲ ಸಂಸ್ಕøತಿಯ ಕಲೆಗಳನ್ನು ಉಳಿಸಿ ಬೆಳೆಸಲು ಪಣ ತೊಟ್ಟಿದೆ. ಇದರ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲೆಯ ಜನಪದ ಕಲೆಗಳನ್ನು ಗುರುತಿಸಿ ಆಸಕ್ತ ಯುವಜನರಿಗೆ ಈ ಕಲೆಗಳ ಕುರಿತು 20 ದಿನಗಳ ತರಬೇತಿ ಕಾರ್ಯಗಾರ ಹಮ್ಮಿಕೊಂಡಿದೆ. ಇದುವರೆಗೂ ರಾಜ್ಯದ 21 ಜಿಲ್ಲೆಗಳಲ್ಲಿ 155 ಜಾನಪದ ಶಿಕ್ಷಕರು, 62 ತಂಡಗಳಲ್ಲಿ ಒಟ್ಟು 1550 ಕಲಾವಿದರಿಗೆ 150 ಜಾನಪದ ಕಲಾ ಪ್ರಕಾರಗಳ ತರಬೇತಿ ನೀಡಿದ್ದಾರೆ.