ಮೂಲ ಕಾಂಗ್ರೆಸ್ ಕಾರ್ಯಕರ್ತರ ಕಡೆಗಣನೆ ಆರೋಪ

ಮುದ್ದೇಬಿಹಾಳ:ಡಿ.5: ಸಧ್ಯ ಮೂಲ ಕಾಂಗ್ರೇಸ್ ಕಾರ್ಯಕರ್ತರನ್ನು ಹಾಗೂ ಅನೇಕ ಮುಖಂಡರನ್ನು ಪಕ್ಷದ ವತಿಯಿಂದ ಕೈಗೊಳ್ಳುವ ಇತ್ತಿಚಿಗೆ ನಡೆಯುತ್ತಿರುವ ಯಾವ ಸಭೇ ಕಾರ್ಯಕ್ರಮಗಳಿಗೆ ಆಹ್ವಾನ ನೀಡದೆ ಕಡೆಗಣಿಸುತ್ತಿದ್ದಾರೆ ಇದು ಹೀಗೆ ಮುಂದುವರೆದರೆ ಹೈಕಮಾಂಡ ಎದುರಿಗೆ ತಿಳಿಸಬೇಕಾಗುತ್ತದೆ ಎಂದು ಪುರಸಭೆ ಮಾಜಿ ಸದಸ್ಯ ಸಂತೋಷ ನಾಯ್ಕೋಡಿ ನೇತ್ರತ್ವದ ಅಹಿಂದ ಯುವ ಕಾರ್ಯಕರ್ತರು ಆರೋಪಿಸಿದರು.

ಪಟ್ಟಣದ ಅಂಜುಮನ್ ಕಾಂಪ್ಲೇಕ್ಸ್ ನಲ್ಲಿ ಶನಿವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಈಗಾಗಲೇ ಹಲವು ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿ ಗುರ್ತಿಸಿಕೊಂಡು ಪಕ್ಷ ಸಂಘನೆ ಜವಾಬ್ದಾರಿಗಳನ್ನು ಹೊತ್ತುಕೊಂಡು ನಿಷ್ಠಾವಂತ ಕಾರ್ಯಕರ್ತರಾಗಿ ನಮ್ಮ ನಾವು ತೊಡಗಿಸಿಕೊಂಡಿದ್ದೇವೆ.

ಎಷ್ಠೆ ಒತ್ತಡಗಳ ಬಂದಿದ್ದರೂ ಯಾವ ಒತ್ತಡಕ್ಕೂ ಮಣಿಯದೇ ಕಾಂಗ್ರೇಸ್ ಪಕ್ಷದಲ್ಲಿಯೇ ಉಳಿದು ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ಬಾಗವಹಿಸುವ ಮೂಲಕ ಪಕ್ಷದ ಬಲ ಶಕ್ತಿ ತುಂಬುವ ಕಾರ್ಯ ಮಾಡಿದ್ದೇವೆ. ಆದರೇ ಮಾಜಿ ಸಚೀವ ಸಿ ಎಸ್ ನಾಡಗೌಡ ಅವರು ನಮ್ಮ ನ್ನು ಪಕ್ಷದ ಯಾವೂದೇ ಕಾರ್ಯಕ್ರಮ ಕ್ಕೆ ಆಹ್ವಾನಿಸದೇ ನಮ್ಮ ಬಗ್ಗೆ ಕೀಳುರಿಮೆ ತೊರಿಸುತ್ತಿರುವುದು ಮನಸಿಗೆ ನೋವನ್ನುಂಟು ಮಾಡಿದೆ.

ಇದಕ್ಕೆ ತಾಜಾ ಉದಾಹರಣೆ ಎಂದರೆ ಸಧ್ಯ ವಿಧಾನ ಪರಿಷತ್ ಚುನಾವಣೆ ಸಂಬಂಧಿಸಿದಂತೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸುನೀಲಗೌಡ ಪಾಟೀಲ ಅವರ ಪ್ರಚಾರಾರ್ಥವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ನಮ್ಮ ಯುವ ಕಾರ್ಯಕರ್ತರನ್ನು ಕೆಲ ಮುಖಂಡರನ್ನು ಆಹ್ವಾನ ನೀಡದೇ ಇರುವುದು ತುಂಬಾ ಬೇಸರವಾಗಿದೆ.

ಸಿ ಎಸ್ ನಾಡಗೌಡರು ಬೇಕು ಅಂತನಾ ಬಿಟ್ಟಿದ್ದಾರೆಯೇ? ಅಥವಾ ಅವರು ಬೇರೆಯವರ ಮಾತು ಕೇಳಿ ನಮ್ಮನ್ನು ಆಹವಾನಿಸದೇ ಬಿಟ್ಟಿದ್ದಾರೆಯೇ ಎಂಬುದನ್ನು ತಿಳಿಯದಾಗಿದೆ. ಸಿ ಎಸ್ ನಾಡಗೌಡ ಅವರೋಬ್ಬ ಸಜ್ಜನ ಸರಳ ವ್ಯಕ್ತಿತ್ವದ ರಾಜಕಾರಣಿಯಾಗಿದ್ದಾರೆ ಆದರೇ ನಮ್ಮ ಮೂಲ ಕಾರ್ಯಕರ್ತರನ್ನು ಯಾಕೇ ಕಡೆಗಣಿಸಿದರು ಎಂದು ತಿಳಿಯದಂತಾಗಿದೆ ಎಂದರು. ಈ ವೇಳೆ ಆಸ್ಪಾಕ ನಾಡಗೌಡ, ಮಹಾಂತೇಶ ಬಾಗಲಕೋಟ, ರಮಜಾನ್ ನದಾಪ್, ಮೋಶಪ್ಪ ನಾಯಮಕ್ಕಳ, ಹರೀಶ ಬೇವೂರ, ಬಸವರಾಜ ಬಿರಾದಾರ, ಹಣಮಂತ ಯಲ್ಲೂರ, ಪರಮಣ್ಣ ನಾಗಾವಿ ಸೇರಿದಂತೆ ಹಲವರು ಇದ್ದರು.