
ಕಲಬುರಗಿ:ನ.18: ಬಿಜೆಪಿ ಪಕ್ಷವು ಕರ್ನಾಟಕದಲ್ಲಿ ಮೂಲ ಅಸ್ಪøಶ್ಯರ ಮತಗಳನ್ನು ಪಡೆದುಕೊಂಡು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುತ್ತದೆ. ಆದರೆ ಇಲ್ಲಿಯವರೆಗೆ ಅಸ್ಪøಶ್ಯರನ್ನು ಬಿಜೆಪಿ ಪಕ್ಷದ ಮುಖ್ಯಮಂತ್ರಿಯನ್ನಾಗಿಲೀ, ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ದಲಿತರನ್ನು ಇಲ್ಲಸಲ್ಲದ ಸುಳ್ಳು ಭರವಸೆಯನ್ನು ಹೇಳಿಕೊಂಡು ಮತಗಳನ್ನು ಪಡೆದುಕೊಂಡು ಕರ್ನಾಟಕದಲ್ಲಿ 25 ಲೋಕಸಭಾ ಸದಸ್ಯರನ್ನಾಗಿ ಮಾಡಿಕೊಂಡಿದ್ದಿರಿ. ಬಿಜೆಪಿ ಪಕ್ಷದಲ್ಲಿ ಅಸ್ಪ್ಯಶರು ಸುಮಾರು ವರ್ಷಗಳಿಂದ ಕರ್ತವ್ಯನಿಷ್ಠೆ ಸೇವೆ ಸಲ್ಲಿಸುತ್ತಿರುವ ಹಿರಿಯ ನಾಯಕರು ಇದ್ದಾರೆ. ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಎಸ್ ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ನೀಲುರ ಹೇಳಿದ್ದಾರೆ.
ಆದರೆ ಇಲ್ಲಿಯವರೆಗೆ ಅಸ್ಪøಶ್ಯರಿಗೆ ಮುಖ್ಯಮಂತ್ರಿಯನ್ನಾಗಲೀ, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರ ಹುದ್ದೆಯಾಗಲೀ ಮಾಡಲಿಲ್ಲ. ಆದರೆ ಈಗಲಾದರೂ ಬಿಜೆಪಿ ಪಕ್ಷದಲ್ಲಿ ಇದ್ದ ದಲಿತ ಮುಖಂಡರು ಎಚ್ಚೆತ್ತುಕೊಳ್ಳಿ ಮತ್ತು ಈಗಲಾದರೂ ವಿರೋದ ಪಕ್ಷದ ನಾಯಕರ ಹುದ್ದೆಗೆ ದಲಿತ ನಾಯಕರಿಗೆ ಆಯ್ಕೆ ಮಾಡುತ್ತಿರಾ?
ಆದರೆ ಕಾಂಗ್ರೇಸ್ ಪಕ್ಷವು ಅಸ್ಪøಶ್ಯರಿಗೆ ಯಾವುದೇ ಹುದ್ದೆ ಕೊಟ್ಟಿಲ್ಲ ಎಂದು ತಾವುಗಳು ಟಿಕೆ ಮಾಡುತ್ತಿದ್ದಿರಿ. ಆದರೆ ಕಾಂಗ್ರೇಸ್ ಪಕ್ಷವು ಕರ್ನಾಟಕದ ರಾಜ್ಯಾಧ್ಯಕ್ಷರಾಗಿ ಹಾಗೂ ವೀರೋದ ಪಕ್ಷದ ನಾಯಕರ ಹುದ್ದೆಗೆ ಹಲವು ಬಾರಿ ಅಸ್ಪøಶ್ಯರಿಗೆ ಒದಗಿಸಿಕೊಟ್ಟಿರುತ್ತಾರೆ. ಹಾಗೂ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರ ಹುದ್ದೆಗೆ ಆಯ್ಕೆ ಮಾಡಿರುತ್ತಾರೆ. ಈಗಲಾದರು ಅಸ್ಪøಶ್ಯರಿಗೆ ಬಿಜೆಪಿ ಪಕ್ಷವು ತಾರತಮ್ಯ ಮಾಡುತ್ತಿರುವುದು ಮತ್ತು ಸುಳ್ಳು ಭರವಸೆಗಳನ್ನು ಕೊಡುತ್ತಿರುವದನ್ನು ತಿಳಿದುಕೊಳ್ಳಬೇಕು ಮತ್ತು ಅಸ್ಪøಶ್ಯರನ್ನು ಶಿಕ್ಷಣ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿ ಆಗಲು ಯಾವ ಪಕ್ಷದಿಂದ ಸಾಧ್ಯ ಎಂಬುವುದನ್ನು ಅರಿತುಕೊಳ್ಳಬೇಕೆಂದು ನೀಲುರ ಅವರು ಪ್ರಕಟಣೆಯ ಮೂಲಕ ಆಗ್ರಹಿಸಲಾಗಿದೆ.