ಮೂಲೆ ಸೇರಿದ ಅಂಬುಲೆನ್ಸ್:ಸಾರ್ವಜನಿಕರು ಪರದಾಟ

ಕೊಟ್ಟೂರು ಜೂ 9:ಕೋವಿಡ್ ಹಾಗೂಇತರೆಸಮಯದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುವ ರೋಗಿಗಳನ್ನು ತುರ್ತಾಗಿ ಅಸ್ಪತ್ರೆಗೆ ಸಾಗಿಸಲು ಅನುಕೂಲವಾಗುವಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರ ಕ್ಕೆ ಶಾಸಕ ಎಸ್ ಭೀಮನಾಯ್ಕ ಜೀವರಕ್ಷಕ ತಂತ್ರಜ್ಞಾನವುಳ್ಳ ಆಂಬುಲೆನ್ಸ್? ವಾಹನವನ್ನು ನೀಡಿದ್ದು ಇದರ ಉಪಯೋಗ ಮಾತ್ರ ಸಾರ್ವಜನಿಕ ರಿಗೆ ದೊರೆಯುತ್ತಿಲ್ಲ.ಸಮುದಾಯ ಆರೋಗ್ಯ ಕೇಂದ್ರದಲ್ಲಿ 2ಅಂಬಲೆನ್ಸ್ ಗಳಿದ್ದು ಒಂದು ವಾಹನ ರಿಪೇರಿಗೆ ದಾವಣಗೆರೆ ಸೇರಿ ಒಂದು ವಾರವಾಗಿದೆ ಇನ್ನೊಂದು ವಾಹನಕ್ಕೆ ವಿಮಾ ಕಂತು ಕಟ್ಟದೇ ಮೂರು ತಿಂಗಳ ನಿಂದ ಮೂಲೆ ಸೇರಿದೆ.ಅಧಿಕಾರಿಗಳೇ ಇತ್ತ ಗಮನ ಹರಿಸಿ.