ಮೂಲೆಗದ್ದೆ ಮಠದಲ್ಲಿ ವಿಶ್ವ ಪರಿಸರ ದಿನಾಚರಣೆ

 ಹೊಸನಗರ.ಜೂ.೬; ವಿಶ್ವ ಪರಿಸರ ದಿನದ ಅಂಗವಾಗಿ ಹೊಸನಗರದ ಕೊಡಚಾದ್ರಿ ಜೇಸಿಸ್ ವತಿಯಿಂದ ತಾಲೂಕಿನ ಮೂಲೆಗದ್ದೆ ಮಠದಲ್ಲಿ ಆಯೋಜಿಸಿದ್ದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ವಿಕ್ರಮ್ ರೇವಣಪ್ಪಗೌಡ ದುಮ್ಮ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ವೇಳೆ ಮಠದ ಶ್ರೀ ಅಭಿನವ ಚೆನ್ನಬಸವ ಮಹಾಸ್ವಾಮೀಜಿ, ಜೇಸಿಸ್‌ನ ದೀಪಕ್ ಸ್ವರೂಪ್, ಸುರೇಶ್, ಬಿ.ಎಸ್, ವಿನಯ್ ಕಂಕಳಲೆ, ರಾಧಕೃಷ್ಣ ಪೂಜಾರಿ,ವಿನಯ ಇದ್ದರು.