ಮೂಲಸೌಲಭ್ಯ ಕಲ್ಪಿಸಲು ಆಗ್ರಹ


ಸಂಜೆವಾಣಿ ವಾರ್ತೆ
ಸಂಡೂರು ಏ:11: ಭಾರತ ಪ್ರಜಾಸತ್ತಾತ್ಮಕ ಯುವಜನ ಪೇಡರೇಶನ್ ತೋರಣಗಲ್ಲು ( ರೈ.ನಿ.) ಸಮಿತಿಯು ತೋರಣಗಲ್ಲು ಆರ್ ಎಸ್ ನಲ್ಲಿ 22ನೇ ವಾರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂದುಗಡೆ ಇರುವ ಸಾರ್ವಜನಿಕ ಮಹಿಳೆಯರ ಶೌಚಾಲಯ ಸಮೇತ ಕೆಲವು ಸಮಸ್ಯೆಗಳನ್ನು ಈಡೇರಿಸಲು ಪದಾಧಿಕಾರಿಗಳು ಸೇರಿ ಒಂದು ನೀಯೋಗ ಬೇಟಿ ಮಾಡಿ ಆರೋಗ್ಯ ನೀರಿಕ್ಷಕರು ಪುರಸಭೆ ಕುರೇಕುಪ್ಪ ಇವರಿಗೆ ಮನವಿ ಪತ್ರ ಕೊಡಲಾಯಿತು..
ಸಾರ್ವಜನಿಕರ ಮಹಿಳೆಯರ ಶೌಚಾಲಯದಿಂದ ಬಹಳಷ್ಟು ಸಮಸ್ಯೆಗಳು ಉದ್ಭವಗೊಂಡಿವೆ ಆ ಶೌಚಾಲಯ ಪಕ್ಕ ಸಣ್ಣ ಮಕ್ಕಳ ಅಂಗನವಾಡಿ ಶಾಲೆ ಹಿಂದಗಡೆ ಪ್ರಾಥಮಿಕ ಶಾಲೆ ಮುಂದಗಡೆ ಖಾಲಿ ಆವರಣ ಮತ್ತು ರಸ್ತೆ ಸುತ್ತಮುತ್ತ ಮನೆಗಳಿವೆ. ಆವರಣದಲ್ಲಿ ದುರ್ವಾಸನೆಯ ಕಸಗಳ ರಾಶಿ ತುಂಬಿ ದೊಡ್ಡ ತಿಪ್ಪೆಯಾಗಿದ್ದು ಹಲವಾರು ಹಸುಗುಸುಗಳು ಮತ್ತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಿರುಗಾಡುತ್ತಿದ್ದು ಆ ದುರ್ವಾಸನೆಯಿಂದ ಅನೇಕ ಜನಸಾಮಾನ್ಯರಿಗೆ ವಿದ್ಯಾರ್ಥಿಗಳಿಗೆ ಅನಾರೋಗ್ಯದಿಂದ ಬಳಲುವಂತೆ ಆಗಿದ್ದು ಸೊಳ್ಳೆಗಳು ಹೆಚ್ಚಾಗಿ ರೋಗಗಳು ಉಲ್ಬಣಗೊಳ್ಳಲು ಕಾರಣವಾಗಿದೆ ಆದ್ದರಿಂದ ಸೂಕ್ತಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ತೋರಣಗಲ್ಲು ಆರ್.ಎಸ್  ಘಟಕದ ಅಧ್ಯಕ್ಷರಾದ ರಘು ಕಾರ್ಯದರ್ಶಿ ವೀರೇಶ್, ಉಪಾಧ್ಯಕ್ಷರು ಛಲಪತಿ,ಮುಖಂಡರಾದ ಅಶೋಕ್  ಜಿಲ್ಲಾ ಕಾರ್ಯದರ್ಶಿ ಸ್ವಾಮಿ , ತಾಲ್ಲೂಕು ಸಾಂಸ್ಕೃತಿಕ ಕಾರ್ಯದರ್ಶಿ ನಾಗಭೂಷಣ, ಕಟ್ಟಡ ಕಾರ್ಮಿಕರ ತಾಲ್ಲೂಕು ಅಧ್ಯಕ್ಷರು ವಿ.ದೇವಣ್ಣ, ಜಿಲ್ಲಾ ಮುಖಂಡರಾದ ಕೆ.ದೇವಣ್ಣ ಇತರರು ಭಾಗವಹಿಸಿದ್ದರು..