ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಎಸ್ಸೆಸ್ ಚಾಲನೆ

ದಾವಣಗೆರೆ.ಸೆ.೧೬; ದಾವಣಗೆರೆ ಸ್ಮಾರ್ಟ್ಸಿಟಿ ಯೋಜನೆಯಡಿ ಎ.ಬಿ.ಡಿ. ಏರಿಯಾದ ಎಸ್ ಎಸ್‌ಎಂ ನಗರ, ಬೀಡಿ ಲೇ ಔಟ್ ಹಾಗೂ ಪಾರ್ವತಮ್ಮ ನಗರಗಳಲ್ಲಿ ೭.೫೭ ಕೋಟಿ ರೂ ಮೊತ್ತದಲ್ಲಿ ಮೂಲಸೌರ‍್ಯ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾಮನೂರು ಶಿವಶಂಕರಪ್ಪನವರು ಚಾಲನೆ ನೀಡಿದರು. ನಗರದ ಮಾಗಾನಹಳ್ಳಿ ರಸ್ತೆಯ ಆಜಾದ್ ನಗರ ಪೊಲೀಸ್ ಠಾಣೆಯ ಮುಂಭಾಗ ಹಾಗೂ ಎಸ್ ಎಸ್.ಎಂ ನಗರದ ಬಳಿ ಕಾಮಗಾರಿಗೆ ಪೂಜೆ ನೇರವೇರಿಸಿ ಮಾತನಾಡಿದ ಶಾಸಕರು ಸ್ಮಾರ್ಟ್ಸಿಟಿ ಯೋಜನೆ ದಾವಣಗೆರೆ ಆಯ್ಕೆಯಾಗಿ ಈಗಾಗಲೇ ಅಭಿವೃದ್ದಿ ಕಾಮಗಾರಿಗಳು ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ ಇನ್ನು ನಿಧಾನಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದನ್ನು ನೋಡಿದರೆ ಇನ್ನು ೫ ವರುಷಗಳ ಕಾಲ ಯೋಜನೆ ಮುಕ್ತಾಯಗೊಳ್ಳುವುದಿಲ್ಲ ಎಂದರು.ಕಾಮಗಾರಿಗಳು ತ್ವರಿತವಾಗಿ ಮತ್ತು ಗುಣಮಟ್ಟದಿಂದ ನಡೆಯಬೇಕೆಂದು ಅನೇಕ ಬಾರಿ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಆದರೂ ಸಹ ನಿಧಾನಗತಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದ ಅವರು ಅಧಿಕಾರಿಗಳು ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿಯೊಂದಿಗೆ ತ್ವರಿತವಾಗಿ ಮುಕ್ತಾಯಗೊಳಿಸಬೇಕೆಂದು ಸೂಚಿಸಿದರು.ಆಡಳಿತ ನಡೆಸುವವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಆದರೆ ಇತ್ತೀಚಿಗೆ ಸರ್ಕಾರದಿಂದ ೧೨೫ ಕೋಟಿ ರೂ ಅನುದಾನ ಬಂದಾಗ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎಂಬAತೆ ವರ್ತಿಸಿದರು. ಈ ಬಗ್ಗೆ ಸಚಿವರ ಗಮನಕ್ಕೂ ತರಲಾಯಿತು.ಅವರು ಸಹ ಸ್ಪಂದಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಹಾಪೌರರಾದ ಬಿ.ಜಿ.ಅಜಯಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವಿರೇಶ್, ಮುಖಂಡ ಅಮಾನುಲ್ಲಾ ಖಾನ್ ಮಾತನಾಡಿದರು.ಈ ಸಂದರ್ಭದಲ್ಲಿ ಉಪ ಮಹಾಪೌರರಾದ ಶ್ರೀಮತಿ ಸೌಮ್ಯ ನರೇಂದ್ರ, ಮಹಾನಗರ ಪಾಲಿಕೆ ಸದಸ್ಯರಾದ ಎ.ಬಿ.ರಹೀಂ, ಚಮನ್‌ಸಾಬ್, ಜಾಕೀರ್, ಸೈಯದ್ ಚಾರ್ಲಿ, ನೂರ್‌ಜಾನ್‌ಬಿ, ಡೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಮುಖಂಡರುಗಳಾದ ಎ.ಬಿ.ಹಬೀಬ್ ಸಾಬ್, ಶಫೀಕ್ ಪಂಡಿತ್, ದಾದಾಪೀರ್, ಟಿ.ಅಸ್ಗರ್ ಮತ್ತಿತರರಿದ್ದರು.