ಮೂಲಸೌಕರ್ಯಗಳಿಂದ ವಂಚಿತವಾದ ಶಹಾಪುರ ಕೊಳಗೆರೆ ನಿವಾಸಿಗರು

ಶಹಾಪುರ:ನ.6:ಮುರಿದ ಬಾಗಿಲು ಪಾಳು ಬಿದ್ದ ಕಟ್ಟಡ ವಾಸ ಮಾಡುವದಕ್ಕೆ ಅಸಾಧ್ಯತೆಯಲ್ಲಿ ಮುಳುಗಿದ ಶಹಾಪುರ ಕೊಳಚೆ ಕೇರಿಗಳಿಗೆ ಕೇಳುವರಿಲ್ಲದೆ ದುರಸ್ತಿಗೆ ಲಕ್ಷಾಂತರ ವೆಚ್ಚವಾದರೂ ದುರ್ವಾಸನೆಯಲ್ಲಿ ಬದುಕು ಸಾಗಿಸುತ್ತಿರುವ ಕುಟುಂಬಗಳು. 2008ರಲ್ಲಿ ನಿರ್ಮಾಣ ಗೊಂಡ ಶಹಾಪುರ ನಗರದ ಬಸ್ ಡಿಪೋ ಹಿಂಭಾಗದ ಸರ್ವೆ ನಂ.7ರಲ್ಲಿಯ 207 ಮನೆಗಳು ಅರ್ಧ ಆಯುಷ್ ಕಳೆದ ಮೇಲೆ 15 ವರ್ಷಗಳ ನಂತರದಲ್ಲಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಹಂದಿಗಳ, ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದ ಈ ಕೊಳಚೆ ಮನೆಗಳು, ಇಂದು ಹದಗೆಟ್ಟು ಪಾಳು ಬಿದ್ದು ಕೊಳಚೆ ನೀರಿನ ಮಡುವಿನಲ್ಲಿ ಕೊಳೆಯುತ್ತಿವೆ. ರಸ್ತೆ, ಚರಂಡಿಗಳು ಹದಗೆಟ್ಟಿದ್ದರೂ, ಇಂದಿನವರೆಗೂ ಕೊಳಚೆ ನಿರ್ಮೂಲನಾ ಅಧಿಕಾರಿಗಳು ಇತ್ತಕಡೆ ಗಮನ ಹರಿಸದೆ ಇರುವುದೆ ವಿಪರ್ಯಾಸದ ಸಂಗತಿಯಾಗಿದೆ.

ಇತ್ತಿಚಿಗೆ ಸುರಿದ ದಾರಾಕಾರ ಮಳೆಗೆ ಶಹಾಪುರ ದೊಡ್ಡ ಚರಂಡಿ ನೀರು ಕೋಳಚೆ ಮನೆಗಳಲ್ಲಿ ನುಗ್ಗಿದ್ದರು ಅಧಿಕಾರಿಗಳು ಬೇಟಿ ನೀಡದೆ ಇರುವದು ನಿಲಕ್ರ್ಷದೊರಣೆಯ ಕ್ರಮವಾಗಿದೆ.

ಮಳೆ ನೀರಿಗೆ ಮನೆಗಳಿಲ್ಲಿನ ದವಸ ದಾನ್ಯಗಳು ಚರಂಡಿ ನೀರು ಪಾಲಾಗಿವೆ. ಕೆಸರು ಗದ್ದೆಯಲ್ಲಿ ಕೊಳಚೆ ನಿವಾಸಿಗಳು ಜೀವನಸಾÀಗಿಸುತ್ತಿದ್ದಾರೆ. ಕುಡಿಯಲು ನೀರಿಲ್ಲದೆ ನಿತ್ಯ ಪರದಾಟ ನೆಡೆಯುತ್ತಿದ್ದರೂ ಕೇಳುವರಿಲ್ಲ ಅಲ್ಲದೆ ಕೊಳಚೆ ನಿವಾಸಿಗರು ಕುಡಿಯುವ ನೀರಿಗಾಗಿ ಕೊಡಗಳನ್ನೊತ್ತುಕೊಂಡು ಅಲೆದಾಡುತ್ತಿದ್ದಾರೆ. ವಿಧ್ಯುತ ಸಂಪರ್ಕವಿಲ್ಲದೆ ಕಾರ್ಗತ್ತಲಲ್ಲಿ ಕಾಲ ಕಳೆಯುತ್ತಿದ್ದಾರೆ. ಕೊಳಚೆ ನಿರ್ಮೂಲನಾ ಅಧಿಕಾರಿಗಳು ಕಿಂಚಿತ್ತು ಗಮನ ಹರಿಸುತ್ತಿಲ್ಲವೆಂದು ಕೊಳಚೆ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

ಕೇವಲ ಕಲಬುರ್ಗಿಗೆ ಸೀಮಿತಗೊಂಡ ಅಧಿಕಾರಿಗಳು.

ಶಹಾಪುರ ನಗರದಲ್ಲಿ ಕೊಳಚೆ ನಿವಾಸಿಗಳ ಗೋಳು ಕೇಳದೆ ಇರುವ ಕಲಬುರ್ಗಿ ಕೊಳಚೆ ನಿರ್ಮೂಲನಾ ಮಂಡಳಿಯ ಎಇಇ, ಜಿಇಯವರು ಶಹಾಪುರ ನಗರಕ್ಕೆ ಬಾರದೆ ಯಾದಗಿರಿ ಜಿಲ್ಲೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಸರ್ಕಾರಿ ನೌಕರಿಯಲ್ಲೂ ಚಾಕರಿ ಮಾಡಿಕೊಂಡು ಸಂಭಂಧಪಟ್ಟ ಕೊಳಚೆ ಪ್ರದೇಶಗಳಿಗೆ ಬೇಟಿ ನೀಡದೆ ಈ ಅಧಿಕಾರಿಗಳು ಬೇಜವಾಬ್ದಾರಿಗೆ ಕಾರಣರಾಗಿದ್ದಾರೆ. ಕೊಳಚೆ ಪ್ರದೇಶದ ಅಭಿವೃದ್ದಿಯನ್ನು ಮರೆತ ಕೋಳಚೆ ನಿರ್ಮೂಲನಾ ಅಧಿಕಾರಿಗಳ ವಿರುದ್ದ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಶಹಾಪುರ ತಾಲುಕಾ ಕೊಳಚೆ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ, ವೆಂಕಟೇಶ ಆಲೂರ, ಮತ್ತು ಗೌರವಾಧ್ಯಕ್ಷರಾದ, ವೆಂಕಟೇಶ, ಮತ್ತು ಪ್ರಧಾನ ಕಾರ್ಯದರ್ಶಿಗಳಾದ, ರವಿಚಂದ್ರ ಎದರಮನಿಯವರು ಆಕ್ರೋಶ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದ್ದಾರೆ. ಕೂಡಲೆ ತುರ್ತು ಸೌಕರ್ಯಗಳಿಗಾಗಿ ಕ್ರಮಕ್ಕೆ ಮುಂದಾಗದಿದ್ದಲ್ಲಿ ಡಿಸಿ ಕಚೇರಿ ಮುಂದೆ ಹೋರಾಟ ಮಾಡುವದಾಗಿ ಅವರು ಹೇಳಿದ್ದಾರೆ.