ಮೂಲಭೂತ ಸೌಲಭ್ಯ ಒದಗಿಸಿ: ವಿದ್ಯಾರ್ಥಿ ಸಂಘ ಆಗ್ರಹ

ಚಿತ್ತಾಪೂರ: ಸೆ.20:ಕದ್ದರ್ಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಶಾಲೆಯ ವಿದ್ಯಾರ್ಥಿಗಳು ಗ್ರಾಮ ಪಂಚಾಯತ್ ಕಾರ್ಯದರ್ಶಿ ರಾಜು ಬಾಳಿಯವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.

ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಿವಶಂಕರ ಪಾಳ್ ಮಾತನಾಡಿ ಶಾಲೆಯ ಹಿಂದೆ ಪ್ಲೇ ಗ್ರೌಂಡ್, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯ, ಶಾಲೆಗೆ ಸುಣ್ಣ-ಬಣ್ಣ, ಸುತ್ತಲೂ ಕಾಂಪೌಂಡ್, ಶುದ್ಧ ಕುಡಿಯುವ ನೀರಿನ ಘಟಕ ಹೀಗೆ ಈ ಎಲ್ಲಾವು ಮಾಡಿಸಬೇಕು ಎಂದು ಒತ್ತಾಯಿಸಿದರು.

ಶಾಲೆಯ ವಿದ್ಯಾರ್ಥಿಗಳು ಮಾತನಾಡಿ ಶಾಲೆಯಲ್ಲಿ ಶಾಲೆ ಕಿಟಕಿ, ಬಾಗಿಲುಗಳು ಮುರಿದಿವೆ, ಶಾಲೆಯ ಒಳಗೆ ಹಾವು ಚೇಳು ಬರುತ್ತಿವೆ ಹಾಗೂ ಮನೆಯಿಂದ ಶಾಲೆಯ ಚತ್ತು ಸೊರಿ ಶಾಲೆಯ ಒಳಗೆ ನೀರು ಬರುತ್ತಿದೆ. ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ತುಂಬ ತೊಂದರೆ ಆಗುತ್ತಿದೆ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲನ್ನು ತೋಡಿಕೊಂಡರು.

ಈ ಸಂದರ್ಭದಲ್ಲಿ ಶಿವರಾಜ್ ಗುಡ್ಡಪೂರ, ಸಿದ್ದು ಕೋರಿ, ಮಲ್ಲು ಗುತ್ತೇದಾರ್, ಅನ್ವರ್, ಭೀಮರಾಯ ದೇಸಾಯಿ, ಸೇರಿದಂತೆ ಇತರರು ಇದ್ದರು.