ಮೂಲಭೂತ ಸೌಲಭ್ಯ ಒದಗಿಸಿ: ಪಿಡಿಓ

ರಾಣೆಬೆನ್ನೂರ, ಮಾ9: ಗ್ರಾಮೀಣ ಪುನರ್ ವಸತಿ ವಿಶೇಷ ಚೇತನ ಕಾರ್ಯಕರ್ತರಿಗೆ ಮೂಲಭೂತ ಸೌಲಭ್ಯ ಹಾಗೂ ಕಾರ್ಯನಿರ್ವಹಣೆಗೆ ಪ್ರತ್ಯೇಕ ಕಾರ್ಯಾಲಯವನ್ನು ಪಂಚಾಯತಿ ಕೇಂದ್ರಸ್ಥಾನದಲ್ಲಿ ಒದಗಿಸಿಕೊಡುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸನಗೌಡ ಪಾಟೀಲ ಹೇಳಿದರು.
ಅವರು ತಾಲೂಕಿನ ಅಂತರವಳ್ಳಿ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಸರ್ಕಾರದ ಆದೇಶದ ಮೇರೆಗೆ ಪಂಚಾಯಿತಿ ಮಟ್ಟದ ವಿಶೇಷಚೇತನರ ಸಮನ್ವಯ ಗ್ರಾಮಸಭೆಯಲ್ಲಿ ಮಾತನಾಡುತ್ತಾ ವಿಶೇಷ ಚೇತನರು ಕಡ್ಡಾಯವಾಗಿ ವಿಶಿಷ್ಠ ಗುರ್ತಿನ ಚೀಟಿ, ಪೋಷಣಾ ಭತ್ಯೆ ಸೇರಿದಂತೆ % 5 ರ ಅನುದಾನದಲ್ಲಿ ಕೊಠಡಿ ನಿರ್ಮಾಣ ಸೇರಿದಂತೆ ಸಮುದಾಯದ ಅಭಿವೃದ್ಧಿಗೆ ನಮ್ಮ ಆಡಳಿತ ಮಂಡಳಿ ಸಹಕಾರ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಾ ಕರಿಗಾರ, ರಾಜ್ಯ ಸಮಿತಿ ನಿರ್ದೇಶಕ ಗಣೇಶ ನಂದಿಗಾಂವಿ, ಗ್ರಾ.ಪಂ. ಸದಸ್ಯ ನಾಗನಗೌಡ ಜೀನವಗೌಡ್ರ, ಆನಂದ ದೇಶಿ, ಸರ್ವ ಸದಸ್ಯರು, ಗ್ರಾ.ಪಂ. ಗ್ರಾಮೀಣ ಪುನರ್ ವಸತಿ ವಿಶೇಷ ಚೇತನ ಕಾರ್ಯಕರ್ತ ಶಿವಪುತ್ರಪ್ಪ ಮುದೇನೂರ, ಆಲದಕಟ್ಟಿ, ನಂದಿಹಳ್ಳಿ, ಅಂತರವಳ್ಳಿ ಗ್ರಾಮದ ಎಲ್ಲಾ ವಿಶೇಷಚೇತನರು ಭಾಗವಹಿಸಿದ್ದರು.