ಮೂಲಭೂತ ಸೌಲಭ್ಯಗಳಿಗೆ ಆಧ್ಯತೆ: ಲಕ್ಷ್ಮೀ ಅರುಣ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಮೇ 06 : ನಿನ್ನೆ ಸಂಜೆ  ಇಲ್ಲಿನ ಹುಸೇನ್ ನಗರ, ಎಪಿಎಂಸಿ, ವಿದ್ಯಾನಗರ, ಇಂದಿರಾನಗರ ಭಾಗಗಳಲ್ಲಿ ಬಹಿರಂಗ ಸಭೆ ನಡೆಸಿದ ಕೆಆರ್ ಪಿ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣ ನಗರದ ಮೂಲಭೂತ ಸೌಲಭ್ಯಗಳಿಗೆ ಆಧ್ಯತೆ ನೀಡಲಿದೆಂದರು.
ಸಭೆಯಲ್ಲಿ ನೆರೆದಿದ್ದ  ಜನಸ್ತೋಮ ಪಕ್ಷದ  ಜಯಘೋಷ ಮೊಳಗಿಸಿದ್ದನ್ನು ಕಂಡು ಪುಳಕಿತರಾದ ಅವರು. 
ಬಳ್ಳಾರಿಯ ಅಭಿವೃದ್ಧಿಯೇ ನಮ್ಮ ಮೂಲಮಂತ್ರ ವಿಶೇಷವಾಗಿ ಮೂಲಸೌಕರ್ಯಗಳಾದ ಒಳಚರಂಡಿ, ನೀರು, ರಸ್ತೆಯ ಬಗ್ಗೆ ವಿಶೇಷ ಗಮನ ಹರಿಸಲಾಗುವುದು ಬಳ್ಳಾರಿಯ ರಿಂಗ್ ರಸ್ತೆ, ಬಡವರಿಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ ಹಾಗೂ ಪ್ರಣಾಳಿಕೆಯ ಅಂಶಗಳನ್ನು ಜಾರಿಗೆ ತರಲಾಗುವುದೆಂದರು.
ಈ ಸಂದರ್ಭದಲ್ಲಿ ಪಕ್ಷದ  ಜಿಲ್ಲಾಧ್ಯಕ್ಷ  ಗೋನಾಳ ರಾಜಶೇಖರಗೌಡ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಹೇಮಲತ, ಪುತ್ರಿ ಬ್ರಹ್ಮಿಣಿ‌ ಮೊದಲಾದವರು ಇದ್ದರು