ಮೂಲಭೂತ ಸೌಲಭ್ಯಗಳಿಂದ ವಂಚಿತ ಪಂಚಾಯತಿ

ಗುರುಮಠಕಲ್ :ನ.14: ಕೊರೋನಾ ಸೊಂಕು ಹರಡುತ್ತಿರುವ ಸಂದರ್ಭದಲ್ಲಿ ನಗರದಿಂದ ಗ್ರಾಮೀಣ ಪ್ರದೇಶಕ್ಕೆ ವಲಸೆ ಬಂದ ಜನರಿಗೆ ಉದ್ಯೋಗ ನೀಡಿ, ಮೂಲಭೂತ ಸೌಲಭ್ಯಗಳನ್ನು ಯುದ್ದಪಾಯದಿಯಲ್ಲಿ ಒದಗಿಸಿ ಜನ ಮೆಚ್ಚುಗೆಯನ್ನು ಗ್ರಾಮ ಪಂಚಾಯತಿಗಳು ಪಡೆದಿದ್ದು ನಿಜವಾಗಿ ಶ್ಲಾಘನೀಯವಾಗಿದೆ. ಆದರೆ ಈಗ ಪುಟಪಾಕ ಪಂಚಾಯತಿ ಯಾಕೆನೋ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪುಟಪಾಕ ಗ್ರಾಮವು ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿದೆ.

ಜನರಿಗೆ ಉದ್ಯೋಗವನ್ನು ನೀಡಿದ ಮಹತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಹಳ್ಳಕ್ಕೆ ಹಿಡಿದಿದೆ. ಕೆಲಸ ಮಾಡಿದ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣವೇ ಬಂದಿಲ್ಲ ಎಂದು ದೂರಿದ್ದಾರೆ. ಪಿಡಿಓ ಹಾಗೂ ಗಣಕಯಂತ್ರ ಅಪರೇಟರ್ ಬಾರದಿರುವುದರಿಂದ ಪಂಚಾಯತಿಯಲ್ಲಿ ಅಭಿವೃದ್ದಿ ಯೋಜನೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ ಎಂದು ಸತೀಶಕುಮಾರ, ಮೊಗಲನಾ, ವೆಂಕಟಪ್ಪ, ಲಕ್ಷ್ಮೀಕಾಂತರೆಡ್ಡಿ, ಶಿವಾರೆಡ್ಡಿ ಸೇರಿದಂತೆ ಗ್ರಾಮಸ್ಥರು ಆರೋಪಿಸಿದ್ದಾರೆ.

ವಾಟರ್ ಶುದ್ದಿಕರಣ ಘಟಕ ಇನ್ನುವರೆಗೆ ಉದ್ಘಾಟನೆಗೊಂಡಿಲ್ಲ. ಚರಂಡಿಗಳು ಸ್ವಚ್ಚಗೊಳ್ಳದಿರುವುದರಿಂದ ನೀರು ರಸ್ತೆಮೇಲೆ ನಿಂತು ದುರ್ವಾಸನೆ ಬರುತ್ತಿದೆ. ಇದರ ಪರಿಣಾಮ ರಸ್ತೆಮೇಲೆ ಜನರು ಓಡಾಡಲು ಆಗುತ್ತಿಲ್ಲ. ಸೊಳ್ಳೆಗಳು ಹೆಚ್ಚುತ್ತಿದ್ದು, ಜನರ ಆರೋಗ್ಯ ಸಮಸ್ಯೆಗಳು ತಲೆದೂರಿವೆ.


ಗಣಕಯಂತ್ರ ಅಪರೇಟರ್‍ರು ಬಾರದಿರುವುದರಿಂದ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿದ ಕೂಲಿಗಾರರಿಗೆ ಹಣ ಖಾತೆಯಲ್ಲಿ ಜಮೆಯಾಗದಿರುವುದರಿಂದ ಕೂಲಿಗಾರರು ಬದುಕುವುದು ಕಷ್ಠಕಾರವಾಗಿದೆ. ಅಧಿಕಾರಿಗಳು ಕಂಪ್ಯೂಟರ್ ಅಪರೇಟರ್‍ನ್ನು ವರ್ಗಾವಣೆ ಮಾಡಬೇಕಾಗಿದೆ.

     ----ಬ್ರಹ್ಮಯ್ಯ ಬಡಿಗೇರ್, ಗ್ರಾಮಸ್ಥರು,

ಪಿಡಿಓ ಪಂಚಾಯತಿಗೆ ಬಾರದಿರುವುದರಿಂದ ನಮ್ಮ ಸಮಸ್ಯೆಗಳನ್ನು ಅಲಿಸುವವರು ಯಾರು ಇಲ್ಲದಂತೆ ಆಗಿದೆ. ನಮ್ಮ ಗ್ರಾಮ ಅಭಿವೃದ್ದಿಯಿಂದ ವಂಚಿತಗೊಂಡಿದೆ. ನಮ್ಮ ಪಂಚಾಯತಿ ಕಡೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಂಡು ಅಭಿವೃದ್ದಿಗೆ ಚಾಲನೆ ನೀಡಬೇಕು.

     ------ ವೆಂಕಟೇಶ, ಗ್ರಾಮಸ್ಥರು

ಜಿಲ್ಲೆಯಲ್ಲಿ ಪಂಚಾಯತಿ ಸಭೆಗಳು ದಿನ ಇರುತ್ತದೆ. ಅಲ್ಲಿ ಭಾಗವಹಿಸುವುದರಿಂದ ಪಂಚಾಯತಿಗೆ ಹೊಗಲು ಆಗುವುದಿಲ್ಲ. ಇದರ ಬಗ್ಗೆ ಜನರಿಗೇನು ಗೋತ್ತು.

  ------ಸೂರ್ಯಕಾಂತ ಪಿಡಿಓ, ಪುಟಪಾಕ