ಮೂಲಭೂತ ಸೌಲಭ್ಯಕ್ಕೆ ಸಾರ್ವಜನಿಕರ ಒತ್ತಾಯ

ಕೋಲಾರ,ಏ.೩:ಕೋಲಾರ ನಗರದ ಹಾರೋಹಳ್ಳಿ ವಾರ್ಡ್ ನಂ-೧೫ ರ ನಿವಾಸಿಗಳಾದ ಗೋಕುಲ್ ಕಾಲೇಜು ಹಾಸ್ಟೆಲ್ ಹಿಂಭಾಗದ ರಸ್ತೆಯಲ್ಲಿರುವ ಸುಮಾರು ೧೫-೨೦ ಮನೆಗಳಿಗೆ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ನಿವಾಸಿಗಳು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.
ಕೋಲಾರ ನಗರದ ಹಾರೋಹಳ್ಳಿ ವಾರ್ಡ್ ನಂ-೧೫ ರ ನಿವಾಸಿಗಳಾದ ಗೋಕುಲ್ ಕಾಲೇಜು ಹಾಸ್ಟೆಲ್ ಹಿಂಭಾಗದ ರಸ್ತೆಯಲ್ಲಿರುವ ಸುಮಾರು ೧೫-೨೦ ಮನೆಗಳಿಗೆ ಕನಿಷ್ಟ ಮೂಲಭೂತ ಸೌಕರ್ಯಗಳಾದ ಚರಂಡಿ, ಒಳಚರಂಡಿ, ರಸ್ತೆ, ಕುಡಿಯುವ ನೀರು, ಇನ್ನಿತರೆ ಸೌಲಭ್ಯಗಳು, ವಾರ್ಡ್‌ನ ನಿವಾಸಿಗಳಿಗೆ ದೊರಕದೆ ಕಂಗಾಲಾಗಿರುತ್ತಾರೆ.
ಈ ಬಡಾವಣೆಯು ಜಿಲ್ಲಾಧಿಕಾರಿಗಳಿಂದ ಭೂಪರಿವರ್ತನೆಯಾಗಿದ್ದು, ಎಲ್ಲಾ ರೀತಿಯ ಶುಲ್ಕಗಳನ್ನು ಪಾವತಿಸಿದ್ದಾರೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಹಾಗೂ ಬಡಾವಣೆಯ ನಗರಸಭೆ ಸದಸ್ಯರ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಬಡಾವಣೆಯ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದರು.
ಇನ್ನಾದರೂ ಸಂಬಂದಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಬಡಾವಣೆಯ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸೂಕ್ತ ಕ್ರಮ ವಹಿಸಬೇಕೆಂದು ಬಡಾವಣೆಯ ನಿವಾಸಿಗಳಾದ ಸಿವಿಲ್ ಇಂಜಿನಿಯರ್ ಬಿ.ವಿ ಮೋಹನ್‌ಕುಮಾರ್, ಪೊಲೀಸ್ ಇಲಾಖೆಯ ಆಂಜಿನಪ್ಪ ಇ.ಎಂ, ಬೆಸ್ಕಾಂ ನಂದೀಶ್, ಹಿರಿಯರಾದ ವೆಂಕಟಪ್ಪ, ನಿವೃತ್ತ ಯೋಧ ರಮೇಶ್ ರವರು ಒತ್ತಾಯಿಸಿದ್ದಾರೆ.