ಮೂಲಭೂತ ಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

ರಾಯಚೂರು,ಜು.೨೧-
ರಾಯಚೂರು ನಗರದಲ್ಲಿರುವ ಮೇಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯಕ್ಕೆ ಮೂಲಭೂತ ಸೌಲಭ್ಯಗಳನ್ನು ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟ ರಾಜ್ಯ ದಲಿತ ಸಂಘರ್ಷ ಸಮಿತಿ, ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ಜನಸ್ಯನ್ಯ ಜಿಲ್ಲಾ ಸಮಿತಿ ಜಂಟಿಯಾಗಿ ಪ್ರತಿಭಟನೆ ನಡೆಸಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ನಿಲಯದ ಮೇಲ್ವಿಚಾರಕರಾದ ಶ್ರೀ ಗೂಳಪ್ಪ ಇವರನ್ನು ಸೇವೆಯಿಂದ ಅಮಾನತು ಮಾಡಬೇಕು. ಬೇಬಿ ಹುಲ್ಪವಾರ, ಸಹಾಯಕ ನಿರ್ದೇಶಕರು, ಗ್ರೇಡ್-೧, ಸಮಾಜ ಕಲ್ಯಾಣ ಇಲಾಖೆ ರಾಯಚೂರು ಇವರನ್ನು ಸೇವೆಯಿಂದ ಅಮಾನತು ಮಾಡಬೇಕು.ನಿಲಯಕ್ಕೆ ಗ್ರಂಥಾಲಯ ವ್ಯವಸ್ಥೆ ಮಾಡಬೇಕು. ನಿಲಯಕ್ಕೆ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಸೋಲ್‌ರ್ ವ್ಯವಸ್ಥೆ ಇರುವುದಿಲ್ಲ, ಸೋಲರ್ ವ್ಯವಸ್ಥೆ ಮಾಡಿಸಬೇಕು.
ನಿಲಯದ ಸುತ್ತಲೂ ಸ್ವಚ್ಛತೆ ಮಾಡಿಸಬೇಕು. ಶೈಕ್ಷಣಿಕ ಪ್ರವಾಸ ಕೈಗೊಳ್ಳಬೇಕು. ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ ಮಾಡಬೇಕು. ಶೌಚಾಲಯ ಮತ್ತು ಸ್ಥಾನದ ಕೊಣೆಗಳಿಗೆ ನೀರಿನ ಸಮಸ್ಯೆ ಇರುವುದರಿಂದ ಸರಿಯಾದ ನಿರ್ವಹಣೆ ಆಗುವುದಿಲ್ಲ. ನಿಲಯದಲ್ಲಿ ನೀಡುತ್ತಿರುವ ಊಟವು ತೀರ ಕಳಪೆ ಗುಣಮಟ್ಟದ ಮತ್ತು ಪೌಷ್ಠಿಕ ಅಂಶ ಇಲ್ಲದ ಪದಾರ್ಥಗಳನ್ನು ತಯಾರು
ಮಾಡುತ್ತಾರೆ ಮತ್ತು ಮೇನೊಚಾರ್ಟ್ ಪ್ರಕಾರ ಅಡಿಗೆ ಪದಾರ್ಥಗಳನ್ನು ನೀಡುವುದಿಲ್ಲ. ನೀಲಯದ ಸುತ್ತಲೂ ಸುರಕ್ಷಿತ ಕಂಪೌಡ ನಿರ್ಮಾಣ ಮಾಡಬೇಕು.ನಿಲಯದ ಸಾರ್ಮಥ್ಯಕ್ಕೆ ತಕ್ಕಂತೆ ಜನರೇಟರ್ ವ್ಯವಸ್ಥೆ ಅಳವಡಿಸಬೇಕು. ವಿದ್ಯಾರ್ಥಿಗಳಿಗೆ ಮಂಚಗಳು, ಆಟದ ಸಾಮಾನುಗಳು, ಸೊಳ್ಳೆ ಪರದೆಗಳು, ಬೆಡ್‌ಶೀಟ್‌ಗಳು ನೀಡಬೇಕು.
ವಸತಿ ನಿಲಯಗಳಲ್ಲಿ ಕೆಲಸ ಮಾಡುವವರಿಗೆ ಸುಮಾರು ೪-೫ ತಿಂಗಳಾದರೂ ಸಹ ವೇತನ ಪಾವತಿ ಮಾಡುವುದಿಲ್ಲ. ಕೇಳಲು ಹೋದರೆ ಬಾಯಿಗೆ ಬದಂತೆ ಬೈದು ಮಾನಸಿಕ ಹಿಂಸೆ ನೀಡಿ, ಕೆಲಸದಿಂದ ತೆಗೆದು ಹಾಕುತ್ತಾರೆ ಎಂದು ಬೇದರಿಕೆ ಹಾಕುತ್ತಾರೆ. ಅಪೆಡಿಕ್ಸ್ “ಬಿ” ಪ್ರಕಾರ ರಾಯಚೂರು ಜಿಲ್ಲೆಯ ತಾಲೂಕವಾರು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಹಂಚಿಕೆ ಮಾಡದೇ ಬೇರೆ ತಾಲೂಕಗಳಿಗಿಂತ ರಾಯಚೂರು ತಾಲೂಕು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಸಹ ತಾವು ಜಿಲ್ಲೆ ಕಛೇರಿಯಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿರುವುದರಿಂದ ರಾಯಚೂರು ತಾಲೂಕಿಗೆ ಹೆಚ್ಚಿನ ಅನುದಾನವನ್ನು ಹಂಚಿಕೆ ಮಾಡಿಕೊಂಡು ಕರ್ತವ್ಯ ಲೋಪ ಮಾಡಿರುತ್ತಾರೆ.
ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸದೇ ನಿರ್ಲಕ್ಷ್ಯ ತೋರುತ್ತಿರುವ ಗೊಳಪ್ಪ ನಿಲಯದ ಮೇಲ್ವಿಚಾರಕರು ಮತ್ತು ಬೇಬಿ ಹುಲ್ಲವಾರ, ಸಹಾಯಕ ನಿರ್ದೇಶಕರು ಗ್ರೇಡ್-೧, ಸಮಾಜ ಕಲ್ಯಾಣ ಇಲಾಖೆ ರಾಯಚೂರು ಇವರುಗಳು ಕರ್ತವ್ಯ ಲೋಪ ವೆಸಗಿರುವುದರಿಂದ ಇವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ವೆಂಕಟೇಶ್ ಅರಗೋಲ್ ,ಜಿಲ್ಲಾ ಸಂ.ಸಂಚಾಲಕರು ಪರಶುರಾಮ ಅರೋಲಿ, ಚನ್ನಬಸವ ಮಂಡಗಿರಿ, ಪ್ರದೀಪ್, ಸಂಜನಾ, ಪ್ರಶಾಂತ್, ದೇವರಾಜ ಸೇರಿದಂತೆ ಅನೇಕರು ಭಾಗವಹಿಸಿದ್ದರು.