
ಅಭಿವೃದ್ಧಿಯ ಹೆಸರಲ್ಲಿ ಕುಂಠಿತಗೊಂಡ ಕಾಮಗಾರಿಗಳು
ಸಂಜೆವಾಣಿ-ಚಂದ್ರಶೇಖರ ಮದ್ಲಾಪೂರ
ಮಾನ್ವಿ,ಏ.೧೫-
ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದರೂ ಕೂಡ ಮಾನ್ವಿ ತಾಲೂಕ ಅಭಿವೃದ್ಧಿ ಹೆಸರಲ್ಲಿ ಚುನಾವಣೆ ಎದುರಿಸಿ ವಿಜೇತ ಹಾಗೂ ಪರಾಜಯಗೊಂಡ ರಾಜಕೀಯ ಧುರೀಣರೇ ಇತ್ತ ಕಡೆಗೆ ತಮ್ಮೆಯಾದರೂ ಕಣ್ಬೀಟ್ಟು ನೋಡ್ರೀ, ನನ್ನ ಅವಧಿಯಲ್ಲಿ ನಾನು ಅದನ್ನು ಮಾಡಿದ್ದೇನೆ ಇದನ್ನು ಮಾಡಿದ್ದೇನೆ ಎಂದು ಬೊಬ್ಬೆಯೊಡೆದು ಮತವನ್ನು ಪಡೆದು ಜನರ ದುಡ್ಡಿನಲ್ಲಿ ಮಜಾ ಮಾಡುವ ಮನಸ್ಥಿತಿಯುಳ್ಳ ಭ್ರಷ್ಟ ರಾಜಕೀಯ ನಾಯಕರೇ ನಿಮ್ಮಯ ಆತ್ಮಸಾಕ್ಷಿಗೊಮ್ಮೆ ಇವುಗಳ ಕುರಿತು ಪ್ರಶ್ನೆ ಮಾಡಿಕೊಳ್ಳಿ ಖಂಡಿತವಾಗಿಯೂ ನಿಮಗೆ ನಾಚಿಕೆಯಾಗಬಹುದು…
ಮಾನ್ವಿ ಕ್ಷೇತ್ರದಲ್ಲಿ ಕಳೆದ ೪೫ ವರ್ಷದಲ್ಲಿ ನೋಡುದಾದರೆ ಎನ್ ಬೋಸರಾಜ ಹತ್ತು ವರ್ಷ, ಜಿ ಹಂಪಯ್ಯ ನಾಯಕ ಹತ್ತು ವರ್ಷ, ಬಸನಗೌಡ ಬ್ಯಾಗವಾಟ ಐದು ವರ್ಷ, ಗಂಗಾಧರ ನಾಯಕ ಐದು ವರ್ಷ, ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಐದು ವರ್ಷಗಳ ಕಾಲ ನಮ್ಮ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡಿದ್ದರೂ ಈ ಮಾನ್ವಿ ಕ್ಷೇತ್ರ ಉನ್ನತಿಯಾಗಬೇಕಾದಲ್ಲಿ ಮೊದಲು ಸರ್ಕಾರಿ ಶಾಲೆಯಲ್ಲಿ ಉತ್ತಮವಾದ ಶಿಕ್ಷಣ ಹಾಗೂ ಶಿಕ್ಷಕರ ವೃಂದ ಇರಬೇಕಾಗುತ್ತದೆ ಆದರೆ ಮಾನವಿ ತಾಲೂಕಿನಲ್ಲಿ ಎಷ್ಟು ಜನ ಶಿಕ್ಷಕರ ಕೊರತೆ ಇದೆ ಹಾಗೂ ಅನೇಕ ಶಿಕ್ಷಕರ ಸರಿಯಾದ ಸಮಯಕ್ಕೆ ಶಾಲೆಗೆ ತೆರಳಿದೆ ರಾಜಕೀಯ ಮಾಡಿಕೊಂಡು ಕಾರಿನಲ್ಲಿ ಓಡಾಟ ಮಾಡಿಕೊಂಡಿದ್ದಾರೆ ಅಂತಹ ಶಿಕ್ಷಕರ ವಿರುದ್ಧ ನೀವು ಮಾಡಿರುವ ಕ್ರಮವಾದರು ಏನು ? ಇವುಗಳನ್ನು ನೀಗಿಸುವ ಕೆಲಸ ಮಾಡಿದ್ದಾರಾ ? ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ಸುಗಳ ವ್ಯವಸ್ಥೆ ಇದೇಯಾ ಎಂದು ಅವಲೋಕನ ಮಾಡಿಕೊಳ್ಳಿ, ಪಾಪದ ವಿದ್ಯಾರ್ಥಿಗಳು ಪ್ರತಿ ವರ್ಷ ಹೋರಾಟ ಮಾಡಿಯೇ ಬಸ್ಸಿನ ಸೌಲಭ್ಯ ಮಾಡಿಕೊಳ್ಳಬೇಕಾಗಿದೆ..
ಹೇಳಬೇಕೆಂದರೆ ಮೂಲಭೂತ ಸೌಕರ್ಯಗಳನ್ನು ಪಡೆಯದೆ ಸಾರ್ವಜನಿಕರಿಗೆ ಈ ಪ್ರಮುಖವಾದ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳಲ್ಲಿ ಪ್ರಮುಖವಾಗಿರುವುದು ಹೇಳ್ತೀನಿ ನೋಡ್ರೀ ರಾಜಕೀಯ ನಾಯಕರೇ,, ಅನೇಕ ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಾಹಿಸುತ್ತಿದೆ, ಬಡ ವಿದ್ಯಾರ್ಥಿಗಳಿಗಾಗಿರುವ ಸರ್ಕಾರಿ ವಸತಿ ನಿಲಯಗಳಲ್ಲಿ ಬಹುತೇಕ ಬಾಡಿಗೆ ಕಟ್ಟಡ ಹಾಗೂ ಮೇಲ್ವಿಚಾರಕರಿಲ್ಲದೆ ಅಡುಗೆಯವರ ಆಡಳಿತದ ದರ್ಪ, ಸರಿಯಾದ ಊಟದ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ನರಳಾಟ, ಬಸ್ಸು ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ, ನೂತನ ಬಸ್ಸು ಡಿಪೋ ಉದ್ಘಾಟನೆಯಾಗಿ ಅನಾಥ ಶವದಂತೆ ಕೊಳೆಯುತ್ತಿರುವುದು, ನೂರು ಕೋಟಿಗೂ ಅಧಿಕ ಹಣದಿಂದ ನಿರ್ಮಾಣವಾದ ರಬ್ಬಣಕಲ್ ಕರೆಯಿಂದ ಕೊಳೆತ ನೀರು ಸರಬರಾಜು ಮಾಡಿ ಶುದ್ದೀಕರಣ ಮಾಡುತ್ತೇವೆ ಎಂದು ಕೋಟಿ ಕೋಟಿ ಹಣ ಗುಳಂ ಮಾಡುತ್ತಿರುವುದು, ಉಳುವವನೇ ಭೂಮಿಯ ಒಡೆಯ ಯೋಜನೆಯಲ್ಲಿ ಭೂಮಿ ಹಂಚಿಕೆ ಮಾಡದಿರುವುದು, ಡಿಗ್ರಿ ಕಾಲೇಜಿನಲ್ಲಿ ನಿರ್ಮಾಣವಾದ ನೂತನ ಕಟ್ಟಡ ಪಾಳು ಬಿದ್ದಿರುವುದು, ಹಲವಾರು ವರ್ಷಗಳಿಂದ ಬ್ರಿಜ್ ನಿರ್ಮಾಣವಿಲ್ಲದೆ ಗ್ರಾಮಕ್ಕೆ ಸಂಪರ್ಕವಿಲ್ಲದೆ ಮಳೆಗಾಲದಲ್ಲಿ ಪರದಾಡುವ ಮೂಸ್ಟೂರು ಗ್ರಾಮದವರ ಅಳಲು, ಅಂಗನವಾಡಿಯಲ್ಲಿ ಅಪೌಷ್ಟಿಕತೆ ಮಕ್ಕಳಿಗಾಗಿ ನೀಡುವ ಆಹಾರದ ಗುಣಮಟ್ಟ ಪರಿಶೀಲನೆ, ಶುದ್ದ ಪರಿಸರಕ್ಕಾಗಿ ಅರಣ್ಯ ಇಲಾಖೆಯಿಂದ ಹಾಕಿರುವ ಗಿಡ ಮರಗಳ ಸಂರಕ್ಷಣೆ, ಬಹಳ ಪ್ರಮುಖವಾಗಿ ಪಟ್ಟಣದ ಹೃದಯ ಭಾಗ ಬಸ್ಸು ನಿಲ್ದಾಣದ ಮುಂಭಾಗದಲ್ಲಿರುವ ರೈತ ಭವನ ಬಳಕೆ ಮಾಡದೇ ಸಂಪೂರ್ಣವಾಗಿ ಭೂತಬಂಗಲೆಯಂತೆ ಬಿಟ್ಟಿರುವುದು, ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ದಿನದಿನಕ್ಕೆ ಒಳರೋಗಿಗಳು ಹಾಗೂ ಹೊರರೋಗಿಗಳ ಸಂಖ್ಯೆ ಅಧಿಕವಾದರೂ ಕೂಡ ಡಾಕ್ಟರ್ ಹಾಗೂ ಸಿಬ್ಬಂದಿಗಳ ಕೊರತೆಯನ್ನು ಮರೆತುಬಿಟ್ಟಿರುವುದು, ಗ್ರಾಮೀಣ ಭಾಗದ ಅನೇಕ ಹೋಬಳಿಗಳಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಗಳು ಇಲ್ಲದೆ ಗ್ರಾಮಸ್ಥರು ಪರದಾಡುವುದು, ಬಹು ಮುಖ್ಯವಾಗಿ ಕೆಳಭಾಗದ ರೈತರಿಗೆ ಸರಿಯಾದ ಪ್ರಮಾಣದ ಕಾಲುವೆ ನೀರು ಆಗಮಿಸಿದ ಬೆಳೆದ ಬೆಳೆಯು ಸಂಪೂರ್ಣವಾಗಿ ನಷ್ಟವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇದನ್ನು ನೀವು ನಿಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಸಾಂದರ್ಭಿಕವಾಗಿ ಹೋರಾಟದ ನಾಟಕ ಮಾಡಿ ರೈತರ ಜೀವನದ ಜೊತೆಗೆ ಚಲ್ಲಾಟವಾಡುತ್ತಿರುವುದು ಸೇರಿದಂತೆ ಇನ್ನು ಗ್ರಾಮೀಣ ಭಾಗದ ಜನರಿಗೆ ಸುಳ್ಳು ಭರವಸೆಯನ್ನು ನೀಡುತ್ತಾ ನಿಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದೀರಲ್ಲಾ ನಾಚಿಕೆಯಾಗುವುದಿಲ್ಲವೇ ಈ ಮೇಲೆ ಹೇಳಿರುವ ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಮುಖವಾಗಿ ಪಾತ್ರವಹಿಸುತ್ತವೆ ಇವುಗಳ ಕುರಿತು ಒಮ್ಮೆಯಾದರೂ ಯೋಚನೆ ಮಾಡಿದ್ದಾರಾ ???
ಕ್ಷೇತ್ರದ ಮತದಾರರೇ ಈ ಚುನಾವಣೆಯಲ್ಲಿ ಹಣ,ಹೆಂಡಕ್ಕೆ ನಿಮ್ಮ ಅಮೂಲ್ಯವಾದ ಮತವನ್ನು ಮಾರಾಟ ಮಾಡಿಕೊಳ್ಳಬೇಡಿ, ನಿಮ್ಮ ಊರಿನ ಅಭಿವೃದ್ಧಿ ಹಾಗೂ ಮಕ್ಕಳ ಶಿಕ್ಷಣದ ಕುರಿತು ಯೋಚನೆ ಮಾಡಿ, ಆರೋಗ್ಯ, ಶಿಕ್ಷಣ, ಅಭಿವೃದ್ಧಿ, ಈ ಮೂರು ವಿಷಯವನ್ನು ನಿಮ್ಮ ರಾಜಕೀಯ ನಾಯಕರಿಗೆ ಪ್ರಶ್ನೆ ಮಾಡಿ ಇಲ್ಲವಾದಲ್ಲಿ ಆಕಾಶದಲ್ಲಿ ದೇವರನ್ನು ತೋರಿಸಿ ಭೂಮಿಯನ್ನು ಹಗೆದು ನುಂಗಿ ನೀರು ಕುಡಿದು ಬಿಡುತ್ತಾರೆ ಈ ಭ್ರಷ್ಟಾ ರಾಜಕಾರಣಿಗಳು, ಮಾಡುತ್ತೇನೆ,ಹೇಳಿದ್ದೇನೆ, ಮುಂದಿನ ದಿನಗಳಲ್ಲಿ ಖಂಡಿತವಾಗಿ ಇದನ್ನು ಪೂರ್ಣಗೊಳಿಸುತ್ತೇನೆ ಎನ್ನುವ ಟೊಳ್ಳು ಭರವಸೆಯನ್ನು ನೀಡುವ ನೀವುಗಳು ನಿಮ್ಮ ಆತ್ಮಸಾಕ್ಷಿಗೆ ಒಮ್ಮೆ ಪ್ರಶ್ನೆ ಮಾಡಿಕೊಳ್ಳಿ ಮೇಲೆ ತಿಳಿಸಿದ ವಿಷಯಗಳನ್ನು ಯಾವು ಮಾಡಿದ್ದಾರೂ ಏನು ಎನ್ನುವುದನ್ನು ಕೇಳಿಕೊಂಡು ಜನರಿಗಾಗಿ ರಾಜಕೀಯ ಮಾಡಿ ನಿಮ್ಮ ಸ್ವಾರ್ಥತೆಯನ್ನು ಕಡಿಮೆ ಮಾಡಿಕೊಳ್ಳಿರಿ…
(( ಬಾಕ್ಸ್ ಐಟಂ ೧ ))
ಕಳೆದ ೭೫ ವರ್ಷಗಳಿಂದ ಮಾನ್ವಿ ಕ್ಷೇತ್ರದಲ್ಲಿ ವಿಜೇತರಾದ ಶಾಸಕರು ತಮ್ಮ ಸ್ವಂತ ಏಳಿಗೆಗಾಗಿ ಶ್ರಮಿಸಿದ್ದಾರೆಯೇ ವರತು ಕ್ಷೇತ್ರದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ಘಟಕ, ಉಳುವವನೆ ಭೂಮಿಯ ಒಡೆಯ ಯೋಜನೆಯ ಫಲಾನುಭವಿಗೆ ಭೂಮಿ ಹಂಚಿಕೆ ಮಾಡದಿರುವುದು, ಗ್ರಾಮೀಣ ಭಾಗದ ಆಸ್ಪತ್ರೆಯು ಸತ್ತಿರುವ ರೀತಿಯಲ್ಲಿವೆ, ಬಹು ಪ್ರಮುಖವಾಗಿ ಮಾನ್ವಿ ಪಟ್ಟಣದ ರಬಣ್ಣಕಲ್ ಕೆರೆಯನ್ನು ಕೋಟಿಗೂ ಹೆಚ್ಚಿನ ಅನುದಾನದಲ್ಲಿ ನಿರ್ಮಾಣವಾದರು ಇಲ್ಲಿಯವರೆಗೆ ಶುದ್ದೀಕರಣ ನೀರು ಸಿಗದಿರುವುದು ನಮ್ಮ ದೌರ್ಭಾಗ್ಯವೇ ಸರಿ..
-ಅಶೋಕ್ ನಿಲೋಗಲ್
ಕರ್ನಾಟಕ ರೈತಸಂಘ ಜಿಲ್ಲಾಧ್ಯಕ್ಷರು )))
((ಬಾಕ್ಸ್ ಐಟಂ ೨ ))
ಯಾವುದೇ ರಾಜಕೀಯ ವ್ಯಕ್ತಿಗಳ ಸುಳ್ಳು ಭರವಸೆಗೆ ಮರುಳಾಗದೆ, ಅಭಿವೃದ್ಧಿಯ ಚಿಂತನೆಯನ್ನು ಹೊಂದಿರುವ ವ್ಯಕ್ತಿಯ ಆಯ್ಕೆ ನಮ್ಮದಾಗಿರಬೇಕು, ಅಭಿವೃದ್ಧಿಯ ಹೆಸರಲ್ಲಿ ಹಣ ಮಾಡುವುದು ಹಾಗೂ ಜನರಿಗೆ ಸುಳ್ಳು ಭರವಸೆ ನೀಡುವುದು ರಾಜಕೀಯದವರ ಜನ್ಮಸಿದ್ಧ ಹಕ್ಕಿನಂತೆ ವರ್ತಿಸುವುದು ದುರದೃಷ್ಟಕರ ವಿಷಯವಾಗಿದೆ ಮುಖ್ಯವಾಗಿ ರಾಯಚೂರು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಕ್ಕೆ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ..
-ಚನ್ನಪ್ಪ ಬಡಿಗೇರಾ ಜಾ,ಪನ್ನೂರು
ಕಟ್ಟಡ ಕಾರ್ಮಿಕ ಯೂನಿಯನ್ ಜಿಲ್ಲಾಧ್ಯಕ್ಷ ))
(( ಬಾಕ್ಸ್ ಐಟಂ ೩ ))
ನಾನು ಕಳೆದ ನಲವತ್ತಕ್ಕೂ ಅಧಿಕ ವರ್ಷಗಳಿಂದ ಸಾಮಾಜಿಕ ಕ್ಷೇತ್ರದಲ್ಲಿದ್ದೇನೆ ಮೊದಲಿನ ರಾಜಕೀಯಕ್ಕೂ ಈಗಿನ ರಾಜಕೀಯಕ್ಕೂ ತುಂಬಾ ವ್ಯತ್ಯಾಸಗಳಿವೆ, ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಿಗಳು ಕೇವಲ ಹಣ ಮಾಡುವ ಯಂತ್ರಮಾನವರಂತೆ ಕೆಲಸ ಮಾಡುತ್ತಿದ್ದಾರೆ, ದೇವಸ್ಥಾನ,ರಸ್ತೆ,ಚರಂಡಿ,ಬೀದಿದೀಪಾ ಎಂದು ಕಾಲಕಳೆಯುವ ಬದಲಾಗಿ ಶಿಕ್ಷಣ,ಆರೋಗ್ಯ,ರೈತ ಸೌಲಭ್ಯ, ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಇತ್ತೀಚಿನ ರಾಜಕಾರಣಿಗಳು ಮರೆತು ತಮ್ಮ ಕುಟುಂಬದ ಏಳಿಗೆಗಾಗಿ ದುಡಿಯುತ್ತಿರುವುದರಿಂದ ನಮ್ಮ ಕ್ಷೇತ್ರ ಅಭಿವೃದ್ಧಿಯಾಗಲು ಸಾದ್ಯವಾಗುತ್ತಿಲ್ಲ..
-ದೊಡ್ಡಣ್ಣ ಹೂಗಾರ
ಹಿರಿಯ ಸಮಾಜ ಚಿಂತಕರು ))
ಪೋಟೋ
೧) ಅಶೋಕ ನಿಲೋಗಲ್
೨) ಚನ್ನಪ್ಪ ಬಡಿಗೇರಾ ಜಾ,ಪನ್ನೂರು
೩) ದೊಡ್ಡಣ್ಣ ಹೂಗಾರ ಹಿರಿಯ ಸಮಾಜ ಚಿಂತಕರು