
ಔರಾದ :ಸೆ.8: ಪಟ್ಟಣದ ಶಿಕ್ಷಕರ ಕಾಲೊನಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ತಹಸೀಲ್ದಾರ ಮಲಶೆಟ್ಟಿ ಚಿದ್ರೆ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಶಿಕ್ಷಕರ ಕಾಲೊನಿಯಲ್ಲಿ 1965 ರಲ್ಲಿ ಸ್ಥಾಪನೆಗೊಂಡ ಸರ್ಕಾರಿ ಪ್ರೌಢಶಾಲೆ ಸುಮಾರು 11 ಎಕ್ಕರೆ ಜಮೀನು ದಾನಿಗಳು ನೀಡಿದರು ಕಾರಣ ಇಷ್ಟೇ ತಾಲೂಕಿನ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ ಎಂದು
ಇಂದು ಪ್ರೌಢ ಶಾಲೆಯಲ್ಲಿ ಉರ್ದು ಕನ್ನಡ ಮರಾಠಿ ಆಂಗ್ಲ ಮಾಧ್ಯಮದ ಶಾಲೆಗಳು ನಡೆಯುತ್ತಿದ್ದು ಆದರ್ಶ ವಿದ್ಯಾಲಯ ಬಿ ಆರ್ ಸಿ ಅಂಗನವಾಡಿ ಕೇಂದ್ರ ಶಿಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಿಕ್ಷಕರ ಭವನ ಹೀಗೆ ದಾನಿಗಳ ಕೊಡುಗೆಗಳಿಂದ ನಿರ್ಮಿತಗೊಂಡಿದೆ ಆದರೆ ಮಳೆಗಾಲದ ಸಮಯದಲ್ಲಿ ನಗರದ ಎಲ್ಲೆಡೆಯಿಂದ ಮಳೆ ನೀರು ಬಂದು ಶಾಲಾ ಅಂಗಳದಲ್ಲಿ ನಿಲ್ಲುತ್ತಿದ್ದು ಕೆಸರು ಗದ್ದೆಯಂತಾಗಿದೆ, ಸುಮಾರು ನಾಲ್ಕು ಸಾವಿರ ಮಕ್ಕಳು ಅಭ್ಯಾಸ ಮಾಡುವ ಸ್ಥಳ ಕೆಸರಿನಿಂದ ಕೊಳಚೆ ನೀರಿನಿಂದ ತುಂಬಿದೆ ವಿದ್ಯುತ್ ದೀಪ ಕಾಣದಂತಾಗಿದೆ, ಇದರಿಂದ ರಾತ್ರಿ ಸಮಯದಲ್ಲಿ ಪುಂಡರ ಕಳ್ಳರ ಕುಡುಕರ ತಾಣವಾಗಿದೆ ಕೂಡಲೇ ಶಾಲಾ ಮಕ್ಕಳಿಗೆ ಸರಿಯಾದ ರಸ್ತೆ ನಿರ್ಮಾಣ ಮಾಡಿ ಕೊಡಬೇಕು, ವಿದ್ಯುತ ದೀಪ ಅಳವಡಿಕೆ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರವೇ ಗೌರವಾಧ್ಯಕ್ಷ ಬಸವರಾಜ ಶೆಟಕಾರ, ಅಧ್ಯಕ್ಷ ಅನಿಲ ದೇವಕತ್ತೆ, ಪಪ್ಪು ಹಕ್ಕೆ ಅರ್ಜುನ ಭಂಗೆ, ಬಾಲಾಜಿ ದಾಮಾ, ಬಾಬು ರಾಠೋಡ್, ರಮೇಶ್ ಚವ್ಹಾಣ, ಮುನ್ನಾ ಹಕ್ಕೆ, ಕಪೀಲ ಕಾಂಬಳೆ, ಯವನ ಕಾಂಬಳೆ, ಸಂಗಮೇಶ ಮೇತ್ರೆ, ಸುನೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.