ಮೂಲಭೂತ ಸೌಕರ್ಯ ಕಲ್ಪಿಸದಿದ್ದರೆ ಉಗ್ರ ಹೋರಾಟ

ರಾಯಚೂರು,ಜೂ.೧೬- ಮಾನ್ವಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಅರೋಲಿ ಗ್ರಾಮ ಪಂಚಾಯತಿಯ ೧ನೇ ವಾರ್ಡಿನ ಹೊಸ ಮನೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಸಿಸಿ ರಸ್ತೆ ಹಾಗೂ ಜಲ ಜೀವನ ಕಾಮಗಾರಿ (ಜೆಜೆಎಂ) ಮತ್ತು ಹೆಣ್ಣು ಮಕ್ಕಳ ಬೀಡಿ ಶೌಚಾಲಯಗಳಿಗೆ ಹೆಣ್ಣು ಮಕ್ಕಳ ಗೌರವ ಮತ್ತು ಗೌಪ್ಯತೆ ಕಾಪಾಡುವುದಕ್ಕೆ ಕಂಪೌಂಡ್ ನಿರ್ಮಾಣ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮಾನ್ವಿಯ ಯುವ ಘಟಕದ ಅಧ್ಯಕ್ಷ ರಾಮಸ್ವಾಮಿ ಎಚ್ಚರಿಸಿದ್ದಾರೆ.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,೧ನೇ ವಾರ್ಡಿನ ಸಿಸಿ ರಸ್ತೆ ಬಗ್ಗೆ ಪಂಚಾಯತ್ ಪಿಡಿಒ, ಅಧ್ಯಕ್ಷ ಮತ್ತು ಸದಸ್ಯರ ಗಮನಕ್ಕೆ ತಂದರೂ ಬೇಜವಾಬ್ದಾರಿ ತೋರುತ್ತಿದ್ದಾರೆ. ಕುಡಿಯುವ ನೀರಿನ ಪೈಪ್‌ಗಳ ಸಾಮಗ್ರಿಗಳು ಪಂಚಾಯತಿಯಲ್ಲಿದ್ದರೂ ಕುಡಿಯುವ ನೀರಿನ ವ್ಯವಸ್ಥೆ ಮಾಡದೆ ಕುಡಿಯುವ ನೀರಿನ ಹೆಸರಲ್ಲಿ ಸುಮಾರು ಐದು ಲಕ್ಷ ರೂಗಳು ದುರ್ಬಳಕೆ ಮಾಡಿಕೊಂಡಿದ್ದರೆ ಎಂದು ಆರೋಪಿಸಿದರು.
ಆರೋಲಿ ಗ್ರಾಮದ ೧ನೇ ವಾರ್ಡಿನ ಹೊಸ ಮನೆಯಲ್ಲಿ ಜಲ ಜೀವನ ಕಾಮಗಾರಿಯ ಸಿಸಿ ರಸ್ತೆ ಆಗೆದಿರುವುದು,ಇದರಿಂದ ನಿಂತಲ್ಲೆ ನೀರು ನಿಂತು ಸೊಳ್ಳೆಗಳ ಕಾಟ, ಕ್ರಿಮಿ ಕೀಟಗಳ ಹಾವಳಿ ಹೆಚ್ಚಾಗಿದ್ದು ಕೂಡಲೇ ದುರಸ್ತಿ ಕಾರ್ಯ ಮಾಡದೆ ಹೋದರೆ ಉಗ್ರ ಹೋರಾಟ ಮಾಡಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ರಾಮಣ್ಣ ಆರ್.ಹೆಚ್, ಕುಮಾರ್ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.