ಮೂಲಭೂತ ಸೌಕರ್ಯ ಒದಗಿಸಲು ಸದಾ ಬದ್ಧ : ಶಾಸಕಿ ಶಿವಳ್ಳಿ

ಕುಂದಗೋಳ ನ 18 : ಕುಂದಗೋಳ ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕಟ್ನೂರು ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿಗೆ ಕೂಡುವ ರಸ್ತೆಯ 1 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಕುಸುಮಾವತಿ ಚನ್ನಬಸಪ್ಪ ಶಿವಳ್ಳಿಯವರು ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು ಕ್ಷೇತ್ರದಲ್ಲಿ ವಿಪರೀತ ಮಳೆಯಿಂದಾಗಿ ಬಹಳಷ್ಟು ಪ್ರಮಾಣದಲ್ಲಿ ರಸ್ತೆಗಳು ಹದಗೆಟ್ಟಿದ್ದು. ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನಾನು ಕೆಲಸವನ್ನು ಮಾಡುತ್ತೇನೆ. ಅಲ್ಲದೆ ಸರಕಾರ ಒದಗಿಸುವ ಮೂಲಭೂತ ಸೌಕರ್ಯವನ್ನು ನೀಡಲು ಸದಾ ಸಿದ್ಧಳಾಗಿದ್ದೆನೆ ಎಂದು ಅವರು ತಿಳಿಸಿದರು.

.ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರು ಸಂಕಣ್ಣವರ. ರಪಿಕ ಅರಳಿಕಟ್ಟಿ.ಅಪ್ಪಾಜಿರಾವ ಪಾಟೀಲ ಸೇರಿದಂತೆ ಗ್ರಾಮದ ಹಿರಿಯರು, ಸಾರ್ವಜನಿಕರು ಉಪಸ್ಥಿತರಿದ್ದರು.