ಮೂಲಭೂತ ಸೌಕರ್ಯವಿಲ್ಲ.. ಕೊಳಚೆ ಸಿಟಿಯಾದ ದಾವಣಗೆರೆ ಸ್ಮಾರ್ಟ್ ಸಿಟಿ

 

ದಾವಣಗೆರೆ.ಜು.೧೫; ನಗರ ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ ಎಂಬಂತಾಗಿದ್ದು, ಸ್ಮಾರ್ಟ್ ಸಿಟಿ ಘೋಷಣೆಯಾದ ಕ್ಷಣ ನೂರಾರು ಕನಸು ಕಂಡಿದ್ದ ನಗರದ ನಾಗರಿಕರಿಗೆ ಸರ್ಕಾರವಾಗಲಿ, ಸ್ಮಾರ್ಟ್ ಸಿಟಿ ಅಧಿಕಾರಿಗಳಾಗಲಿ, ಸ್ಮಾರ್ಟ್ ಸಿಟಿ ಎಂದರೇನು ಅದರ ಉದ್ದೇಶವೇನು ಎಂಬುದರ ಬಗ್ಗೆ ಇರುವ ಸಂಶಯ ನಿವಾರಣೆ ಮಾಡಬೇಕಾಗಿದೆ.ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಿಟ್ಟುವಳ್ಳಿ, ಸಿದ್ದಗಂಗಾ ಶಾಲಾ ಸುತ್ತಮುತ್ತ ಈ ರೀತಿಯ ಕೊಳಚೆ ನಿರ್ಮಾಣವಾಗಿದ್ದು, ಇಲ್ಲಿ ಓಡಾಡುವ ಸಾವಿರಾರು ಮಕ್ಕಳ ಹಾಗೂ ಸಾರ್ವಜನಿಕರ ಆರೋಗ್ಯವನ್ನು ದೇವರೇ ಕಾಪಾಡಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಕೆ.ಎಲ್  ಹರೀಶ್ ಬಸಾಪುರ ಹೇಳಿದ್ದಾರೆ.ವಾರ್ಡ್ ಗಳಲ್ಲಿ ಇಂಜಿನಿಯರಗಳು ಹಾಗೂ ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಸಂಚರಿಸಿ ವೀಕ್ಷಣೆ ಮಾಡಿದರೆ ಇಂತಹ ಸಮಸ್ಯೆಗಳು ದೂರವಾಗಬಹುದು ಆದರೆ ಯಾರೊಬ್ಬರೂ ಇದರ ಬಗ್ಗೆ ಗಮನಹರಿಸದೆ ಇರುವುದು ಮಾತ್ರ ವಿಪರ್ಯಾಸ.ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆ ಇದೆಯೇ ಎಂಬ ಅನುಮಾನ ಕಂಡುಬರುತ್ತಿದೆ ಆರ್ಥಿಕ ಪರಿಸ್ಥಿತಿಯಿಂದ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತಿಲ್ಲವೇ ಅಥವಾ ಸಿಬ್ಬಂದಿಗಳು ತಮ್ಮ ಹಿಡಿತದಲ್ಲಿ ಇಲ್ಲವೇ ಎಂಬುದನ್ನು ಮಹಾನಗರ ಪಾಲಿಕೆಯ ಮಹಾಪೌರವರೇ ತಿಳಿಸಬೇಕಾಗಿದೆ ಎಂದಿದ್ದಾರೆ.ಮಹಾಪೌರರು ಅಧಿಕಾರ ವಹಿಸಿಕೊಂಡು ನಾಲ್ಕೈದು ತಿಂಗಳು ಕಳೆದರೂ ಸಹ ಪಾಲಿಕೆಯನ್ನು ತಮ್ಮ ಹಿಡಿತದಲ್ಲಿ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಸಾರ್ವಜನಿಕರಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದಾದರೆ ಅರ್ಥವೇನು.ವಿಪಕ್ಷ ನಾಯಕರು ಆರೋಪ ಮಾಡಿದಾಗ ಮಾತ್ರ ಮಾಧ್ಯಮಗಳ ಮುಂದೆ ಬಂದು ಮಾತನಾಡುವ ಮಹಾಪೌರರು, ಸಾರ್ವಜನಿಕರ ಸಮಸ್ಯೆಗಳಿಗೂ ಸಹ ಸ್ಪಂದಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂಬುದೇ ನಮ್ಮ ಆಶಯ ಮದು ತಿಳಿಸಿದ್ದಾರೆ