ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಯಾರು ಜವಬ್ದಾರರು

ಸೈದಾಪುರ:ಜು.31:ಸೈದಾಪುರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಹಾಳದ ರಸ್ತೆಗಳು, ಅತಿಥಿ ಶಿಕ್ಷಕರ ಕೊರತೆ, ವಿದ್ಯುತ ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆಗಳಿಂದ ಅಭಿವೃದ್ಧಿಯಲ್ಲಿ ನಾವು ಹಿಂದೆ ಇದ್ದೇವೆ. ಜನಪ್ರತಿನಿದಿಗಳು ಸೇರಿದಂತೆ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜವಾಗಿಲ್ಲಾ ಇದಕ್ಕೆ ಯಾರು ಜವಬ್ದಾರರು ಎಂದು ಮಾಜಿ ಜಲ್ಲಾ ಪಂಚಾಯತ ಉಪಾಧ್ಯಕ್ಷ ಶರಣಿಕುಮಾರ ದೋಖಾ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೈದಾಪುರ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ ಜೊತೆ ಸೈದಾಪುರ ಸೇರಿದಂತೆ ಸುತ್ತಲಿನ ಗ್ರಾಮಗಳ ಅಭಿವೃದ್ಧಿ ಕುರಿತು ಜಂಟಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಮತಕ್ಷೇತ್ರದಲ್ಲಿ ಸಾಕಷ್ಟು ರಸ್ತೆಗಳು ಹದಗೆಟ್ಟಿವೆ. ಸೈದಾಪುರ ಬಸ್ ನಿಲ್ದಾಣದ ಮುಂಬಾಗ ರಸ್ತೆ ಹಳ್ಳದಂತಾಗಿದೆ. ಪಟ್ಟಣದ ಬಸ್ ನಿಲ್ದಾಣದಿಂದ ರಾಚನಳ್ಳಿ ಮಾರ್ಗದ ಮೂಲಕ ಹೆದ್ದಾರಿಗೆ ತಲುಪುವ ಮುಖ್ಯ ರಸ್ತೆಯಲ್ಲಿ ಸಾಕಷ್ಟು ಅನಾವುತಗಳಾಗುತ್ತಿವೆ. ಇದರ ಬಗಗೆ ಯಾರು ಕಾಳಜಿ ವಹಿಸುತ್ತಿಲ್ಲಾ. ಡಬಲ್ ಇಂಜಿನ ಹೊಂದಿದ ಕೇಂದ್ರ, ರಾಜ್ಯ, ಸೇರಿದಂತೆ ಸ್ಥಳೀಯ ಶಾಸಕರು ಸರಿ ಪಡಿಸುವ ಕೆಲಸ ಮಾಡುತ್ತಿಲ್ಲಾ ಎಂದು ದೂರಿದರು. ಬದ್ದೇಪಲ್ಲಿ, ದುಪ್ಪಲ್ಲಿ, ಚೆಂದಾಪುರ, ಬೋಮಲರಲ್ ದೋಡ್ಡಿ, ಮಾವಿನಹಳ್ಳಿ, ಲಿಂಗೇರಿ, ಮಲ್ಹಾರ, ಮುಷ್ಟುರ, ಗೊಂದಡಗಿ ಭೀಮನದಿ ತೀರದ ಸಂಪರ್ಕ ಕಲ್ಪಿಸುವ ರಸ್ತೆ ಸೇರಿದಂತೆ ಕೆಲ ಗ್ರಾಮಗಳ ರಸ್ತೆಗಳು ಹಾಳಾಗಿವೆ. ಉಸ್ತುವಾರಿ ಸಚಿವರ ಗಮನಕ್ಕೆ ತಂದರು ಪ್ರಯೋಜವಾಗಿಲ್ಲಾ. ಇವುಗಳ ಬಗಗೆ ಕಾಳಜಿ ವಹಿಸುವವರು ಯಾರು ಎಂಬುವುದು ತಿಳಿಯದ ಪರಸ್ಥಿತಿ ನಿರ್ಮಾಣವಾಗಿದೆ ಎಂದರು. 1967 ರಲ್ಲಿದ್ದ ವಿದ್ಯುತ ಕಂಬ ಅವುಗಳ ತಂತಿಗಳನ್ನು ಸರಿ ಪಡಿಸುವ ಕೆಲಸವಾಗದೆ ಸರಿಯಾದ ವಿದ್ಯುತ್ ಪೂರೈಕೆ ಆಗುತ್ತಿಲ್ಲಾ. ಇದೊಂದು ಬೇಜವಬ್ದಾರಿ ಇಲಾಖೆಯಾಗಿದೆ. ರೈತರು ನೀರಿಗಾಗಿ ತೊಂದರೆ ಕಾಣುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ಇಲಾಖೆಯಿಂದ ಯಾವುದೇ ರಿಯಾಯಿತಿ ಸೌಲಭ್ಯಗಳು ಸುಲಭವಾಗಿ ದೊರೆಯುವುದಿಲ್ಲಾ. ಈ ಭಾಗದ ರೈತರ ಮಹತ್ವಕಾಂಕ್ಷಿ ಕೆರೆ ತುಂಬುವ ಯೋಜನೆ ಕುಂಟಿಗೊಂಡಿದೆ ಎಂದು ಹೇಳಿದರು. ಸೈದಾಪುರ ಬಸ್ ನಿಲ್ದಾಣದಲ್ಲಿ ಶೌಚಾಲಯ ಸ್ವಚ್ಚ ಇರದೆ ರೋಗ ಹರಡುವ ಬೀತಿ ಎದುರಾಗಿದೆ. ದುರ್ಗಂದ ವಾಸನೆಯಿಂದ ಬಸ್ ನಿಲ್ದಾಣ ಒಳಗಡೆ ಹೋಗಲು ಸಾಧ್ಯವಾಗುತ್ತಿಲ್ಲಾ. ರೈಲ್ವೆ ನಿಲ್ದಾಣದ ಮೇಲ್ದರ್ಜೇಗೆ ಹೆರಿಸಿದರು. ಯಾವುದೆ ಮುಲಭೂತ ಸೌಕರ್ಯಗಳು ಕಲ್ಪಿಸಿಲ್ಲಾ ಎಂದು ಪಟ್ಟಣದಲ್ಲಿನ ಅವ್ಯವಸ್ಥೆಯ ಬಗೆಗೆ ಪ್ರಶ್ನೆಸಿದರು. ಕೆಲಸಗಳು ಪೂರ್ಣಗೊಂಡರು ಕಳಪೆಕಾಮಾಗಾರಿ ಆಗಿರುತ್ತವೆ ಅಪಾದಿಸಿದರು.

ಸೈದಾಪುರ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ ಮಾತನಾಡಿ, ಸೈದಾಪುರದಿಂದ ನಾರಯಾಣಪೇಟಗೆ ಸಂಪರ್ಕ ಕಲ್ಪಿಸುವ ಕಾಮಗಾರಿ ರಸ್ತೆ ಟೆಂಡರ ರದ್ದಾಗಿ. ತೊಂದರೆ ಅನುಭವಿಸುವಂತಾಗಿದೆ. ಕೆಲವೇ ಕಿಲೋ ಮಿಟರಗಳವರೆಗೆ ಸಾಗಲು 2 ತಾಸಿಗೂ ಹೆಚ್ಚಿನ ಸಮಯ ತೆಗದುಕೊಳ್ಳಬೇಕಾದ ಪ್ರರಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸೈದಾಪುರದಿಂದ ಹೈದಾರಬಾದಿಗೆ ಹೋಗುವ ಬಸ್ ಮುಂದಿನ ದಿನಗಳಲ್ಲಿ ರದ್ದಾಗುವ ಆತಂಕ ಪ್ರಯಾಣಿಕರಲ್ಲಿ ಮೂಡಿದೆ. ಇದಕ್ಕೆ ಯಾರು ಜವಬ್ದಾರರು ಎಂದಾ ಅವರು, ಪ್ರತಿಯೊಂದು ಇಲಾಖೆಯಲ್ಲಿ ಬ್ರಷ್ಟತೆ ಹೆಚ್ಚಾಗಿದೆ. ರಸಗೊಬ್ಬರ, ಸಿಲೆಂಡರ, ಪಟ್ರೋಲ, ಡಿಸೇಲ ಬೆಲೆಗಳು ಹೆಚ್ಚಾಗಿವೆ. ಇದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಆಡಳಿತ ಕುಸಿದಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಹಿಪಾಲರೆಡ್ಡಿ ದುಪ್ಪಲ್ಲಿ, ಸೈದಾಪುರ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯ ಕಂದಳ್ಳಿ, ಜಿಲ್ಲಾ ಯೂತ್ ಪ್ರದಾನ ಕಾರ್ಯದರ್ಶಿ ತಿಮ್ಮರೆಡ್ಡಿ ಬೆಳಗುಂದಿ ಸೇರಿದಂತೆ ಇತರರಿದ್ದರು.