ಮೂಲಭೂತ ಸೌಕರ್ಯಗಳಿಲ್ಲದ ಚಂಡ್ರಿಕಿ ಗ್ರಾಮದ ಬಾಲಕರ ವಸತಿ ನಿಲಯ

ಗುರುಮಠಕಲ್:ಮಾ.24: ತಾಲೂಕು ಸಮಿಪದಲ್ಲಿರುವ ಚಂಡ್ರಿಕಿ ಗ್ರಾಮದಲ್ಲಿ ಐವತ್ತು ಜನ ವಿದ್ಯಾರ್ಥಿಗಳು ಇರುವ ಬಾಲಕರ ವಸತಿ ನಿಲಯವು ಮೂಲಸೌಕರ್ಯಗಳಿಂದ ವಂಚಿತವಾಗಿದ್ದು ಅಧಿಕಾರಿಗಳಿಗು ಮೊಬೈಲ್ ಫೆÇೀನ್ ಮುಖಾಂತರ ಮಾತನಾಡಿದರು ಬರೆ ಸಮಾಧಾನ ಹೇಳುತ್ತಿದ್ದಾರೆ ಹೊರತು ಪರಿಷ್ಕರಸಿಗುತ್ತಿಲ್ಲ. ಸುಮಾರು ಹತ್ತು ದಿನಗಳ ಹಿಂದೆ ಚಂಡ್ರಿಕಿ ಗ್ರಾಮದ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಚರ್ಚಿಸಿ ವಿಧ್ಯಾರ್ಥಿಗಳ ಜೊತೆಯಲ್ಲಿ ವಸತಿ ನಿಲಯವೆಲ್ಲ ಸುತ್ತಾಡಿ ನೋಡಿದಾಗ ಸ್ನಾನದ ಗೃಹಗಳು ಮತ್ತು ಶೌಚಾಲಯ ಗೃಹಗಳು ತುಂಬಾ ಸ್ವಚ್ಛತೆ ಇಲ್ಲದೇ ನೀರು ಹಾಕಿದರು ಕೂಡ ಹೊರಗೆ ಹೊಗದ ಸ್ಥಿತಿಯಲ್ಲಿ ಇದ್ದು ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ನಾವು ನೀರನ್ನು ತೆಗೆದುಕೊಂಡು ಹೋಗಿ ಹೊರಗಡೆ ಸ್ನಾನಮಾಡುತ್ತೆವೆ ಎಂದರು. ಊಟದ ವಿಚಾರದಲ್ಲಿ ವಿಧ್ಯಾರ್ಥಿಗಳ ಜೊತೆಯಲ್ಲಿ ವಿಚಾರಿಸಿದರೆ ಶನಿವಾರ ಸಾಯಂಕಾಲ ಮತ್ತು ರವಿವಾರ ನಮಗೆ ಊಟಹಾಕುವದಿಲ್ಲ. ಕೆಳಿದಾಗ ನಿಮ್ಮ ನಿಮ್ಮ ಊರಿಗಾದರು ಹೋಗಿ ಎಂದಾಗ ವಿದ್ಯಾರ್ಥಿಗಳು ಊರಿಗಾದರು ಹೋಗುತ್ತಾರೆ ಇಲ್ಲವೆ ಚಂಡ್ರಿಕಿ ಗ್ರಾಮದಲ್ಲಿ ಅವರವರ ಸಂಬಧಿಕರ ಮನೆಗೆ ಹೋಗಿ ಅವತ್ತಿನ ದಿನ ಕಳೆಯುತ್ತೇವೆ ಎಂದು ಹೇಳಿದರು. ಇನ್ನು ವಸತಿ ನಿಲಯದ ಕೋಣೆಗಳಲ್ಲಿ ಬೆಳಕಿನ ವ್ಯವಸ್ಥೆ ಸರಿಯಾಗಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿಧ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುವುದಾದರು ಹೇಗೆ ಕರಂಟಿನ ಬಲ್ಪೂಗಳು ಹೊದರು ಕೂಡ ನಾವೆ ರೂಪಾಯಿ ಕೊಟ್ಟು ತಂದು ಹಾಕಿಕೊಂಡಿರುವ ವಿಷಯವನ್ನು ವಿಧ್ಯಾರ್ಥಿಗಳು ನಮಗೆ ತಿಳಿಸಿದರು. .ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಭೇಟಿಯಾಗಿ ವಿಚಾರಿಸಿದಾಗ ಹಾಯಿತು ಸಂಭಂದಪಟ್ಟ ಅಧಿಕಾರಿಗಳಿಗೆ ತಿಳಿಸಿ ವಿದ್ಯಾರ್ಥಿಗಳಿಗೆ ಸೂಕ್ತ ವೆವಸ್ಥೆಯನ್ನು ಮಾಡಿಸೋಣ ಎಂದರು ಆದರೆ ಬದನೆಕಾಯಿ ತಿನ್ನಬಾರದು ಅನ್ನುವದು ಬರೆ ಪುಸ್ತಕದಲ್ಲಿಯೇ ಉಳಿದಿದೆ ಆದರೆ ಆಚರಣೆಯಲ್ಲಿ ಇಲ್ಲ ಅನ್ನುವ ಹಾಗೆ ನನಗೆ ಸಮಾಧಾನ ನೀಡಿದರು. ಹಿಂದುಳಿದ ವರ್ಗಗಳ ಜಿಲ್ಲಾ ಕಲ್ಯಾಣ ಅಧಿಕಾರಿ ಶ್ರೀ ರಾಘವೇಂದ್ರ ಸಾರ್ ಅವರನ್ನು ಫೆÇೀನಿನ ಮುಖಾಂತರ ಮಾತನಾಡಿ ವಿಚಾರಿಸಿದಾಗ ಹಾಯಿತು ತಾಲೂಕು ಅಧಿಕಾರಿಗಳಿಗೆ ಹೇಳುತ್ತೇನೆ ಮತ್ತು ಚಂಡ್ರಿಕಿ ಬಾಲಕರ ವಸತಿ ನಿಲಯದ ಮೆಲುವಿಚಾರಕರಿಗು ತಿಳಿಸುತ್ತೆನೆ ಎಂದರು ಆದರೆ ಇದುವರೆಗೂ ವಸತಿ ನಿಲಯ ಇದ್ದದ್ದು ಇದ್ದಹಾಗೆಯೆ ಇದೆ. ತಾಲೂಕು ವಿಸ್ತರಣ ಅಧಿಕಾರಿಗಳು ಶ್ರೀ ಸಂತೋಷ್ ರೆಡ್ಡಿ ಅವರನ್ನು ಫೆÇೀನಿನ ಮುಖಾಂತರ ಮಾತನಾಡಿದಾಗ ನಾನು ಬಂದು ವಸತಿ ನಿಲಯ ಪರಿಶೀಲನೆ ಮಾಡುತ್ತೆನೆ ಎಂದರು ಆದರು ಕೂಡ ವಸತಿ ನಿಲಯದ ವೆವಸ್ಥೆ ಇನ್ನೂ ಹಾಗೆಯೇ ಇದೆ ಆದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗು ಕೇಳಿದರು. ವಸತಿ ನಿಲಯದ ಮೆಲುವಿಚಾರಕರಿಗು ಕೇಳಿದರು. ತಾಲೂಕು ಅಧಿಕಾರಿಗಳಿಗು ಕೇಳಿದರು. ಸಂಬದ ಪಟ್ಪ ಜಿಲ್ಲಾಧಿಕಾರಿಗಳಿಗು ಕೇಳಿದರು ಬಾಲಕರ ವಸತಿ ನಿಲಯದ ಸಮಸ್ಯೆಯೂ ಬಗೆಹರಿಸುತ್ತಿಲ್ಲ. ನಾನು ವಸತಿ ನಿಲಯದಲ್ಲಿ ಇರುವ ವಿಧ್ಯಾರ್ಥಿಗಳ ಜೊತೆಯಲ್ಲಿ ವಿಚಾರಿಸೋಣ ವೆಂದರೆ ಮೊದಲನೇಯ ದಿನ ಬಂದ ವಸತಿ ನಿಲಯದಲ್ಲಿ ಇರುವ ವಿಧ್ಯಾರ್ಥಿಗಳು ಈಗ ನನ್ನ ನೋಡಿದಾಕ್ಷಣ ಅ ವಿಧ್ಯಾರ್ಥಿಗಳು ಬೇರೆ ಕಡೆ ಹೋಗುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ ಈಗ ಯಾರಿಗೆ ಕೇಳಿ ವಿಚಾರಿಸಬೇಕು ವಿಧ್ಯಾರ್ಥಿಗಳ ವಿಧ್ಯಾಭ್ಯಾಸವು ಹೇಗೆ. ಯಾರಿಗೆ ಕೇಳಿದರೆ ಬಾಲಕರ ವಸತಿ ನಿಲಯದಲ್ಲಿ ಇರುವ ಸಮಸ್ಯೆಗಳು ಪರಿಹಾರ ವಾಗುತ್ತದೆ ಎನ್ನುವ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ ಆದರೆ ಚಂಡ್ರಿಕಿ ಬಾಲಕರ ವಸತಿ ನಿಲಯದ ಉತ್ತಮ ವೆವಸ್ಥೆ ಯಾವಾಗ ಯಾರಿಂದ ಆಗುವುದು ಯಾಕೆಂದರೆ ವಿಧ್ಯಾರ್ಥಿಗಳ ಭವಿಷ್ಯವು ವಿಧ್ಯಾಭ್ಯಾಸದ ಮೇಲೆಯೆ ಇದೆ ಆದರಿಂದ ಈ ವಿಷಯವನ್ನು ಮನಗಂಡು ಅಧಿಕಾರಿಗಳು ಗಮನಕೊಟ್ಟು ವಿಧ್ಯಾರ್ಥಿಗಳ ಭವಿಷ್ಯವನ್ನು ಉಜ್ವಲ ಗೊಳಿಸುವರೆಂಬ ವಿಶ್ವಾಸ ವಿದ್ಯಾರ್ಥಿಗಳದ್ದಾಗಿದೆ.