ಮೂಲಭೂತ ಸೌಕರ್ಯಗಳಿಂದ ಶೈಕ್ಷಣಿಕ ಪ್ರಗತಿ

ಕಲಬುರಗಿ :ಎ.19: ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ಸೂಕ್ತ ಕಟ್ಟಡ ವ್ಯವಸ್ಥೆ, ಪೀಠೋಪಕರಣ-ಪಾಠೋಪಕರಣ, ಗ್ರಂಥಾಲಯ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಅಗತ್ಯವಾಗಿದೆ. ಇದರಿಂದ ಬೋಧನೆ-ಕಲಿಕೆ ಪರಿಣಾಮಕಾರಿಯಾಗಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆಯೆಂದು ಸಿಬಿಸಿ ಉಪಾಧ್ಯಕ್ಷ, ಮುಖಂಡ ರವಿ ಕೋಳ್ಕೂರ ಅಭಿಪ್ರಾಯಪಟ್ಟರು.

    ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪ್ರಯೋಗಾಲಯಗಳ ವಿದ್ಯುತ್ತೀಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

    ಕಾಲೇಜಿನ ಪ್ರಾಂಶುಪಾಲ ಮಹ್ಮದ್ ಅಲ್ಲಾವುದ್ದೀನ ಸಾಗರ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಉತ್ತಮ ಗುಣಮಟ್ಟದ ವಿಜ್ಞಾನ ಪ್ರಯೋಗಾಲಯಗಳಿವೆ. ಇದರಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಪಡೆಯಲು ಸಾಧ್ಯವಾಗಿದೆ. ಇಂತಹ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಹೊಂದಿರುವ ನಮ್ಮ ಕಾಲೇಜಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತಾಲ್ಲೂಕಿನ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದು, ಉನ್ನತವಾದ ಸಾಧನೆಯನ್ನು ಮಾಡುವ ಮೂಲಕ, ಕಾಲೇಜು ಮತ್ತು ತಾಲ್ಲೂಕಿಗೆ ಕೀರ್ತಿಯನ್ನು ತರುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಚಂದ್ರಪ್ರಭ ಕಮಲಾಪುರಕರ್, ರವಿಕುಮಾರ ಬಟಗೇರಿ, ಶರಣಮ್ಮ ಭಾವಿಕಟ್ಟಿ, ಎಚ್.ಬಿ.ಪಾಟೀಲ, ಶಂಕ್ರೆಪ್ಪ ಹೊಸದೊಡ್ಡಿ, ಪ್ರಕಾಶ ಪಾಟೀಲ, ನಯಿಮಾ ನಾಹಿದ್, ರೇಣುಕಾ ಚಿಕ್ಕಮೇಟಿ, ಪ್ರ.ದ.ಸ ನೇಸರ ಬೀಳಗಿ, ಪ್ರಮುಖರಾದ ಮೌನೇಶ ನಾಯಕ, ಜಾವೀದ್, ವಿಜಯಲಕ್ಷ್ಮೀ ಅಲಾಳಕರ್ ಸೇರಿದಂತೆ ಮತ್ತಿತರರಿದ್ದರು.