ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು:ಕಂದಕೂರ

ಸೈದಾಪುರ:ಸೆ.11:ಇನ್ನುಳಿದ 7 ತಿಂಗಳಲ್ಲಿ ಗ್ರಾಮಗಳ ಅಭಿವೃದ್ದಿಗೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುತ್ತೇನೆ. ಅಧಿಕಾರದಲ್ಲಿ ಇದ್ದರೂ ಇಲ್ಲದಿದರೂ ಕೂಡ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ ಎಂದು ಗುರುಮಠಕಲ್ ಮತಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಅವರು ಅಭಿಪ್ರಾಯಪಟ್ಟರು.
ಸಮೀಪದ ಮಾಧ್ವಾರ ಗ್ರಾಮದಲ್ಲಿ 2022-23ನೇ ಸಾಲಿನ ಲೆಕ್ಕ ಶೀರ್ಷಿಕೆ ಅಪೇಂಡಿಕ್ಸ್-ಇ ಯೋಜನೆ ಅಡಿಯಲ್ಲಿ ಗುರುಮಠಕಲ್ ತಾಲ್ಲೂಕಿನ ಮುಧೋಳ್-ಯಲಗೇರಾ ರಸ್ತೆ (ರಾಜ್ಯ ಹೆದ್ದಾರಿ-127) ಕಿ.ಮೀ 50 ರಿಂದ 58ರವರೆಗಿನ ಆಯ್ದ ಭಾಗಗಳಲ್ಲಿನ ರಸ್ತೆ ಸುಧಾರಣೆ ಕಾಮಾಗಾರಿ (10 ಕೋಟಿ ರೂ) ಮತ್ತು ಕೆಕೆಆರ್‍ಡಿಬಿ ಮೈಕ್ರೋಯೋಜನೆ ಅಡಿಯಲ್ಲಿ ಸ್ಟೇಷನ್ ಸೈದಾಪುರದಿಂದ ರಾಚನಳ್ಳಿ ಕ್ರಾಸ್‍ವರೆಗೆ (2 ಕೋಟಿ ರೂ) ರಸ್ತೆ ಸುಧಾರಣೆ ಕಾಮಾಗಾರಿಗಳ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ನಾನು ಹುಟ್ಟಿದ ಗುರುಮಠಕಲ್ ಮತಕ್ಷೇತ್ರದ ಜನರ ಋಣವನ್ನು ಅಭಿವೃದ್ಧಿಯ ಮೂಲಕ ತೀರಿಸುತ್ತೇನೆ. ಕೆಲಸ ಮಾಡಿ ದುಡಿದವರಿಗೆ ಮತದಾರರು ನಿಮ್ಮ ಮತವನ್ನು ನೀಡಿ ಮುಂದಿನ ಬಾರಿಗೆ ಆರ್ಶೀವದಿಸಬೇಕು ಎಂದರು.
ಬಾಕ್ಸ್: ಕೆರೆ ತುಂಬಿಸುವ ಯೋಜನೆಗೆ 180 ಕೋಟಿ ಅನುದಾನ: ಈ ಭಾಗದ ರೈತರ ಅಭಿವೃದ್ದಿಗಾಗಿ ಸುಮಾರು 180 ಕೋಟಿ ಅನುದಾನದಲ್ಲಿ ಒಟ್ಟು 20 ಕೆರೆಗಳನ್ನು ತುಂಬಿಸುವ ಯೋಜನೆಗೆ ಇನ್ನು ಕೆಲವೆ ದಿನಗಳಲ್ಲಿ ಚಾಲನೆ ನೀಡಲಿದ್ದೇವೆ. ಅದರಲ್ಲಿ ಮಾಧ್ವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 8 ಕೆರೆಗಳು ಈ ಯೋಜನೆಯಡಿಯಲ್ಲಿ ಬರುತ್ತವೆ. ಇದರಿಂದ ರೈತರಿಗೆ ತುಂಬಾ ಅನೂಕೂಲವಾಗುತ್ತದೆ ಎಂದರು.
ಸಹಾಯಕ ನಿರ್ವಾಹಕ ಅಧಿಕಾರಿ ಶ್ರೀಧರ, ಸಹಾಯಕ ಇಂಜಿನಿಯರ್ ಪರಶುರಾಮ, ಗೋಪಾಲ ಮಾಧ್ವಾರ, ಪ್ರಕಾಶ ನೀರಟಿ, ಬಸಣ್ಣ, ಪಾಪಣ್ಣ, ಅನಂತಪ್ಪ ಯದ್ಲಾಪುರ, ಮಹಾದೇವಪ್ಪ ಯಲಸತ್ತಿ, ಅಮರನಾಥರೆಡ್ಡಿಗೌಡ ಸಣ್ಣ ಸಂಬರ್, ವಿರೂಪಾಕ್ಷ ಸಾಹುಕಾರ ಕುಂಟಿಮರಿ, ರಾಘವೇಂದ್ರರೆಡ್ಡಿ ವಡವಟ್, ಶಂಕ್ರಪ್ಪ ಸಾಹುಕಾರ, ಅನಂತರೆಡ್ಡಿ ವಡವಟ್, ಶಂಕರೆಡ್ಡಿ ಯಲಸತ್ತಿ, ಮಲ್ಲಣ್ಣ ಜೈಗ್ರಾಮ, ಗುರುನಾಥರೆಡ್ಡಿಗೌಡ ವಡವಟ್, ಶ್ರೀನಿವಾಸ ಮಾಧ್ವಾರ, ರಾಜು ಉಡುಪಿ, ದೇವು ಘಂಟಿ, ಲಕ್ಷ್ಮಣ ಕೂಡ್ಲೂರು, ಅಲ್ಲಾವುದ್ದೀನ್ ನೀಲಹಳ್ಳಿ, ಕಾರ್ಯಕರ್ತರು, ಗ್ರಾಮಸ್ಥರು ಸೇರಿದಂತೆ ಇತರರಿದ್ದರು.