ಮೂಲಭೂತ ಸೌಕರ್ಯಕ್ಕೆ ದ.ಸಂ.ಸ ಒತ್ತಾಯ

ರಾಯಚೂರು,ಏ.೨೯- ಎಸ್.ಸಿ.ಎಸ್.ಟಿ. ಸಮುದಾಯಕ್ಕೆ ಎಸ್.ಸಿ.ಪಿ.ಟಿ.ಎಸ್.ಪಿ. ಅನುದಾನವನ್ನು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಕೊಡುವ ಸೌಲಭ್ಯಗಳನ್ನು ಮನೆಗೆ ತಲುಪಿಸಬೇಕು. ಹಾಗೂ ಅನ್‌ಲೈನ್ ಕ್ಲಾಸ್ ಮೂಲಕ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ರೀತಿಯಲ್ಲಿ ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಇನ್ನಿತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.
ಕೊರೋನ ಸೂಕ್ತ ರೋಗಾಣುವಿನಿಂದ ಅಗುತ್ತಿರುವ ಮಾನವನ ಮೇಲೆ ದುಷ್ಪರಿಣಾಮಗಳನ್ನು ತಡೆಯುವಲ್ಲಿ ವಿಜ್ಞಾನಿಗಳು ವಿಫಲರಾಗಿದ್ದು,ಇದಕ್ಕಾಗಿ ಸುಮಾರು ವಿಜ್ಞಾನಿಗಳು ಇಂಥ ಸಾಂಕ್ರಮಿಕ ರೋಗವನ್ನು ತಡೆಯಲು ಸುಮಾರು ಪ್ರಯತ್ನಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ದೇಶದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಾಂಗ ಕೋರೋನಾ ತಡೆಯಲು ಅನುಸರಿಸುತ್ತಿರುವ ಲಾಕ್ ಡೌನ್ ಹಾಗೂ ಕಠಿಣ ಕಾನೂನು ಕ್ರಮಗಳಿಂದ ಈ ಜನಾಂಗ ಊಟ ವಿಲ್ಲದೆ ಸಾಯುವ ಪರಿಸ್ಥಿತಿ ಬಂದಿದ್ದು.ಈ ಜನಾಂಗದ ವಿದ್ಯಾರ್ಥಿಗಳು ವಸತಿ ನಿಲಯಗಳು ರದ್ದಾಗಿ ವಿದ್ಯಾಭ್ಯಾಸದಿಂದ ಹಿನ್ನಡೆಯಾಗುತ್ತಿದ್ದಾರೆ ಎಂದು ದೂರಿದರು.
ಸರ್ಕಾರ ಕೋರೋನಾ ತಡೆಗಟ್ಟಲು ಶ್ರಮ ಪಡುತ್ತಿದ್ದು. ಈ ಜನಾಂಗಕ್ಕೆ ಸೌಲಭ್ಯಗಳನ್ನು ಒದಗಿಸುವಲ್ಲಿ ಯಾವುದೇ ಕಾನೂನುಗಳನ್ನು ಮಾಡಿಲ್ಲ.ಈ ಜನಾಂಗದ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳು ಮುಚ್ಚಿರುವುದರಿಂದ ಊರುಗಳಲ್ಲಿ ಆನ್‌ಲೈನ್ ಕ್ಲಾಸ್ ಕಲಿಯಲು ಸ್ಮಾರ್ಟ್ ಫೋನ್‌ಗಳನ್ನು ಕೊಂಡುಕೊಳ್ಳಲು ಹಣ ವಿಲ್ಲದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಇವರ ಅನುದಾನದಿಂದ ವಿದ್ಯಾರ್ಥಿಗಳಿಗೆ ಊಟದ ವೆಚ್ಚದ ಖರ್ಚನ್ನು ಅವರ ಮನೆಗಳಿಗೆ ಅನುದಾನ ಮುಟ್ಟಿಸಬೇಕು ಎಂದು ಆಗ್ರಿಸಿದರು.
ಇವರ ಅನುದಾನದಿಂದ ಸ್ಮಾರ್ಟ ಫೋನ್ , ಲ್ಯಾಪ್‌ಟ್ಯಾಪ್ , ಗಳನ್ನು ಒದಗಿಸಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು.ನ್ಯಾಯ ಬೆಲೆ ಅಂಗಡಿಯಲ್ಲಿ ಸಿಗುವ ಅಕ್ಕಿಯು ಸಹ ಕಡಿತಗೊಳಿಸಲಾಗಿದೆ.ಸಮುದಾಯದ ಅಭಿ ವೃದ್ಧಿ ಗಾಗಿ ಎಸ್.ಸಿ.ಪಿ.ಟಿ.ಎಸ್.ಪಿ.ಅನುದಾನ ಸಿ.ಸಿ.ರಸ್ತೆಗಳು ಸಮುದಾಯ ಭವನಗಳು,ಕೋಟೆ ಗಟ್ಟಲೆ ಅನುದಾನ ಬಳಕೆಯಾಗುತ್ತಿವೆ.ಆದರೆ ಇದರಿಂದ ಎಸ್.ಸಿ , ಎಸ್.ಟಿ,ಜನಾಂಗಕ್ಕೆ ಯಾವುದೇ ಪ್ರಯೋಜನ ವಿಲ್ಲ.ಹಾಗೂ ಕೋಟಿ ಗಟ್ಟಲೆ ಅನುದಾನ ವಾಪಸ್ ಕಳಿಸಿಕೊಡಲಾಗುತ್ತದೆ . ಸಿ.ಸಿ.ರಸ್ತೆಗಳು,ಸಮುದಾಯ ಭವನಗಳು , ವಿವಿಧ ಇಲಾಖೆಗಳಿಂದ ಕೈಗೊಂಡ ಕಾಮಗಾರಿಗಳು ಸಾಮಾನ್ಯ ಜನಾಂಗದ ಬಡಾವಣೆಗಳಲ್ಲಿ ಮಾಡಿ ಗುತ್ತೇದಾರರಿಗೆ ಮತ್ತು ಅಧಿಕಾರಿಗಳಿಗೆ ಅನುಕೂಲವಾಗಿದೆಯೇ ಹೊರತು ಈ ಜನಾಂಗದವರಿಗೆ ಯಾವುದೇ ಪ್ರಯೋಜನವಾಗಿ ಎಂದು ದೂರಿದರು.
ಆದ್ದರಿಂದ ಎಸ್.ಸಿ.ಪಿ.ಟಿ.ಎಸ್.ಪಿ , ಅನುದಾನ ಈ ಜನಾಂಗಕ್ಕೆ ಊಟ,ಬಟ್ಟೆ , ಮೂಲಭೂತ ಸಮಸ್ಯೆಗಳಿಗೆ ಅನುದಾನವನ್ನು ಬಳಿಕೆ ಮಾಡಿ ಸಮುದಾಯಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚನ್ನಬಸವ, ಹನುಮಂತ ಆರೋಲಿ,ಶರಣಪ್ಪ ದಿನ್ನಿ ಸೇರಿದಂತೆ ಇತರರು ಇದ್ದರು.