ಮೂಲಂಗಿ ಪರೋಟ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು
ಮೂಲಂಗಿ – 2 ಕಪ್ (ತುರಿದದ್ದು)
ಈರುಳ್ಳಿ – 1
ಬೆಳ್ಳುಳ್ಳಿ ಪೇಸ್ಟ್ – 3 ಚಮಚ
ಜೀರಿಗೆ ಪುಡಿ – 1 ಚಮಚ
ಅಮೆಚೂರ್ – 1 ಚಮಚ
ಗರಮ್ ಮಸಾಲಾ -1/2 ಚಮಚ
ಕಾಳುಮೆಣಸು – 1/2 ಚಮಚ
ಕೊತ್ತಂಬರಿ – 2 – 3 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಗೋಧಿ ಹಿಟ್ಟು- 1 ಕಪ್ ಪೂರ್ಣ
ಕಪ್ ನೀರು- 1/4(ಬೇಕಾದಷ್ಟು)
ಎಣ್ಣೆ ಅಥವಾ ತುಪ್ಪ – ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ತುರಿದ ಮೂಲಂಗಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.
ಈರುಳ್ಳಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಬೇಯಿಸಿದ ಮೂಲಂಗಿಗೆ ಒಗ್ಗರಣೆ ಮಾಡಿ.
ಹಿಟ್ಟನ್ನು ಸಾಕಷ್ಟು ನೀರು ಹಾಕಿ ಕಲಸಿ.
ಇನ್ನು 6 ಇಂಚು ಅಗಲದಲ್ಲಿ ಇದನ್ನು ಲಟ್ಟಿಸಿಕೊಳ್ಳಿ.
ಮಧ್ಯಕ್ಕೆ ಬೇಯಿಸಿದ ಮೂಲಂಗಿಯನ್ನು ಇಡಿ.
ತದನಂತರ ಇದನ್ನು ಅರ್ಧಕ್ಕೆ ಮಡಚಿ.
ಇದನ್ನು ತ್ರಿಭುಜಾಕಾರದಲ್ಲಿ ಮಡಚಿ ಚಪಾತಿಯನ್ನು ಪುನಃ ಲಟ್ಟಿಸಿಕೊಳ್ಳಿ.
ಇನ್ನು ಪಾತ್ರೆಯನ್ನು ಬಿಸಿ ಮಾಡಲು ಇರಿಸಿ.
ಪಾತ್ರೆಗೆ ಒಂದು ಚಮಚದಷ್ಟು ಎಣ್ಣೆ ಅಥವಾ ತುಪ್ಪವನ್ನು ಹಾಕಿ.
ಪರೋಟಾವನ್ನು ಬಿಸಿಯಾಗಿರುವ ಪ್ಯಾನ್‌ಗೆ ಹಾಕಿ ಬೇಯಿಸಿ.
ಬೇಕಾದಲ್ಲಿ ಪರೋಟಾದ ಸುತ್ತಲೂ ಎಣ್ಣೆಯನ್ನು ಹಾಕಿ.
ಚೆನ್ನಾಗಿ ಬೇಯುವವರೆಗೆ ಎರಡೂ ಬದಿ ಬಿಸಿ ಮಾಡಿಕೊಳ್ಳಿ.