ಮೂರ್ತ ಹಾಗೂ ಅಮೂರ್ತ ಪರಂಪರೆಗಳು ನಮ್ಮ ಸಂಸ್ಕøತಿಯ ಪ್ರತೀಕ:ಡಾ.ವೀರಶೆಟ್ಟಿ

ಕಲಬುರಗಿ,ನ.25: ನಮ್ಮ ಭಾಗದಲ್ಲಿ ಹಲವು ಬಗೆಯ ಪರಂಪರೆಗಳಿವೆ. ಅವುಗಳಲ್ಲಿ ಕಣ್ಣಿಗೆ ಕಾಣುವ ಹಾಗೂ ಕಣ್ಣಿಗೆ ಕಾಣದ ಹಲವು ಪರಂಪರೆಗಳು ನಮ್ಮ ಭಾಗದಲ್ಲಿವೆ. ಮನುಷ್ಯನ ಹುಟ್ಟಿನಿಂದ ಸಾವಿನವರೆಗೆ ನಡೆದು ಬರುವ ಪ್ರತಿಯೊಂದು ಘಟ್ಟವು ಪರಂಪರೆಯ ಹಿನ್ನಲೆಯನ್ನೇ ಒಳಗೊಂಡಿರುತ್ತದೆ. ನಮ್ಮ ಪ್ರತಿಯೊಂದು ಆಚರಣೆಯು ನಮ್ಮ ಸಂಸ್ಕøತ ಹಾಗೂ ಪರಂಪರೆಯ ಪ್ರತೀಕವಾಗಿವೆ ಎಂದು ತಮ್ಮ ಉಪನ್ಯಾಸದಲ್ಲಿ ಡಾ.ವೀರಶೆಟ್ಟಿಯವರು ಹಿರಿಯ ಉಪ ನಿರ್ದೇಶಕರು ರಾಜ್ಯ ಪತ್ರಗಾರ ಇಲಾಖೆ ಹೇಳಿದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕಲಬುರಗಿ ಹಾಗೂ ಇತಿಹಾಸ ವಿಭಾಗ ಸರಕಾರಿ (ಸ್ವಾಯತ್ತ) ಕಾಲೇಜು ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವಪರಂಪರೆ ಸಪ್ತಾಹ-2022 ಅಂಗವಾಗಿ ವಿಶೇಷ ಉಪನ್ಯಾಸದಲ್ಲಿ ಹೇಳಿದರು.
ವಿಶೇಷ ಉಪನ್ಯಾಸದ ಉದ್ಘಾಟಕರಾಗಿ ಆಗಮಿಸಿದ ಡಾ.ಬಿ.ಎಸ್. ಗುಳಶೆಟ್ಟಿ ಸಮಾಜ ಚಿಂತಕರು ಹಾಗೂ ಸಂಶೋಧಕರು ಭಾರತ ದೇಶದ ಸಂಸ್ಕøತಿಯು ಜಗತ್ತಿನ ಎಲ್ಲಾ ದೇಶಗಳ ಸಂಸ್ಕøತಿಗಿಂತ ವಿಶೇಷವಾಗಿದೆ. ನಮ್ಮ ದಿನ ನಿತ್ಯದ ಬಳಕೆಯ ವಸ್ತುಗಳು ವಿದೇಶಗಳಲ್ಲಿ ಅವರು ತಮ್ಮ ಮನೆಗಳಲ್ಲಿ ಪದರ್ಶಿಸುತ್ತಾರೆ. ಅದರಲ್ಲಿ ತಾವು ಜರ್ಮನ್ ದೇಶದ ಪ್ರವಾಸಕ್ಕೆ ಹೋದಾಗ ಇಲ್ಲಿಯ ಕೆಲವರು ಮನೆಗಳಲ್ಲಿ ಖೌದಿ, ಮರ, ಲಟ್ಟಣಿಕೆ, ಟೊಪ್ಪಿಗೆ ಇವುಗಳನ್ನು ಪ್ರದರ್ಶನದಲ್ಲಿರುವುದನ್ನು ಕಂಡಿರುವುದನ್ನು ಕುರಿತು ಹೇಳಿದರು. ಡಾ.ರಾಜಾರಾಮ ಉಪನಿರ್ದೇಶಕರು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಕಲಬುರಗಿ ಇವರು ತಮ್ಮ ಇಲಾಖೆಯು ಪ್ರತಿ ವರ್ಷ ಈ ರೀತಿಯ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದನ್ನು ಹಾಗೂ ಅವುಗಳ ವಿಶೇಷತೆಯನ್ನು ಕುರಿತು ಮಾತನಾಡಿದರು. ಈ ವರ್ಷ ಪರಂಪರೆ ನಡಿಗೆ, ವಿಶೇಷ ಉಪನ್ಯಾಸ, ಚಿತ್ರಕಲೆಸ್ಪರ್ಧೆ ಈ ರೀತಿಯಲ್ಲಿ ಇತಿಹಾಸ ಮತ್ತು ಪರಂಪರೆಯ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಡಾ.ಶಂಭುಲಿಂಗ ಎಸ್.ವಾಣಿ ಮುಖ್ಯಸ್ಥರು ಇತಿಹಾಸ ವಿಭಾಗ ಇವರು ತಮ್ಮ ಪ್ರಸ್ತಾವಿಕ ನುಡಿಯಲ್ಲಿ ನಮ್ಮ ವಿಭಾಗವು ಪ್ರತಿವರ್ಷ 19 ನವೆಂಬರದಿಂದ 25 ನೇ ತಾರೀಖಿನವರೆಗೆ “ವಿಶ್ವಪರಂಪರೆ ಸಪ್ತಾಹ” ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇವುಗಳಿಂದ ವಿದ್ಯಾರ್ಥಿಗಳಲ್ಲಿ ಪರಂಪರೆಯ ಅರಿವು ಮೂಡಿಸಲಾಗುತ್ತದೆ ಎಂದು ತಮ್ಮ ಪ್ರಸ್ತಾವಿಕ ನುಡಿಗಳಲ್ಲಿ ಹೋದರು.
ಡಾ.ಶಂಕರಪ್ಪ ಹತ್ತಿ ಪ್ರಾಂಶುಪಾಲರು ಅಧ್ಯಕ್ಷಯ ನುಡಿಗಳನ್ನು ಹೇಳಿದರು. ಪ್ರೋ.ಚಂದ್ರಶೇಖರ ಅನಾದಿ ನಿರೂಪಣೆ, ಪ್ರೋ.ಚನ್ನಕ್ಕ ನಾಗಪ್ಪ ವಂದನಾರ್ಪಣೆ ಮಾಡಿದರು. ಕಾಲೇಜಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ವಸ್ತುಸಂಗ್ರಹಾಲಯದ ಅಧಿಕಾರಿಗಳು ಹಾಜರಿದ್ದರು.