ಮೂರ್ತಿ ವಿರೂಪ: ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

ಕಲಬುರಗಿ ನ 9: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಬಿಜ್ಜಗೂಪಿ ಎಂಬ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿಯನ್ನು ವಿರೂಪಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವೀರಶೈವ ಲಿಂಗಾಯತ ಯುವ ವೇದಿಕೆ ಆಗ್ರಹಿಸಿದೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ವೀರಶೈವ ಲಿಂಗಾಯತ ಯುವ ವೇದಿಕೆವತಿಯಿಂದ ಪ್ರತಿಭಟನಾ ಪ್ರದರ್ಶನ ನಡೆಸಿ ,ಮೂರ್ತಿಯನ್ನು ಮರುಸ್ಥಾಪಿಸುವಂತೆ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದಯಾನಂದ ಪಾಟೀಲ,ಎನ್ ಶ್ರೀಧರ,ಕಲ್ಯಾಣರಾವ ಪಾಟೀಲ ಕಣ್ಣಿ,ಸುನೀಲ ಮಹಾಗಾಂವಕರ್,ಸತೀಶ ಮಾಹೂರ,ಅವಿನಾಶ ಅರಳಿ,ಸುನೀಲ ಕೋಳಕೂರ,ಗುರುರಾಜ ಸುಂಟನೂರ,ಗುರುರಾಜ ಅಂಬಡಿ, ಮಲ್ಲಿಕಾರ್ಜುನ ಕೊಂಡೇದ,ಶರಣ್ ಅಲ್ಲಮಪ್ರಭು ಪಾಟೀಲ,ಮಂಜುವಾರದ ಸೇರಿದಂತೆ ಅನೇಕರಿದ್ದರು.