ಮೂರ್ತಿ ಭಿನ್ನ ಆಗಿಲ್ಲ ಅಂದವರು ಬಹಿರಂಗ ಚರ್ಚೆಗೆ ಬನ್ನಿ : ಸಲಗರ್

ಕಾಳಗಿ :ಎ.28: ತಾಲೂಕಿನ ಸುಕ್ಷೇತ್ರ ರೇವಗ್ಗಿ (ರಟಕಲ್ ) ಗುಡ್ಡದ ಶ್ರೀ ರೇಣುಕಾ ಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಈ ಮೂರ್ತಿಯ ಮೇಲೆ ಉದ್ದೇಶಪೂರ್ವಕವಾಗಿ ಶಾಸಕರ ಹೆಸರಿರುವ ಬೋರ್ಡನ್ನು ಅಂಟಿಸಲಾಗಿದೆ, ಶ್ರೀ ರೇಣುಕಾಚಾರ್ಯರ ಭಕ್ತರು ಅಸಮಾಧಾನ ಹೊರಹಾಕುತ್ತಿದ್ದಂತೆ ಅಲ್ಲಿನ ಸಿಬ್ಬಂದಿಗಳಿಗೆ ಹೇಳಿ ಬೋರ್ಡನ್ನು ತೆರಾವು ಮಾಡಿಸಿಸುವ ಸಂದರ್ಭದಲ್ಲಿ ರೇಣುಕಾಚಾರ್ಯರ ಮೂರ್ತಿಯ ಲಿಂಗಾವನ್ನು ಭಿನ್ನ ವಾಗಿರುತ್ತದೆ,ಆದ ಕಾರಣ ಆ ಮೂರ್ತಿಯನ್ನು ಪ್ರಾಣ ಪ್ರತಿಷ್ಠೆ ಮಾಡಿ ಜಗದ್ಗುರುಗಳನ್ನು ಕರೆಯಿಸಿ ವಿಧಿ ವಿಧಾನದ ಪ್ರಕಾರ ಮೂರ್ತಿಯನ್ನು ಅನಾವರಣಗೊಳಿಸಬೇಕು. ಹಾಗೂ ಕ್ಷೇತ್ರದ ಶಾಸಕರಾದ ಡಾ.ಅವಿನಾಶ ಜಾಧವ ಮತ್ತು ಸಂಸದರು ಬಹಿರಂಗವಾಗಿ ಕ್ಷಮೆಯಾಚನೆ ಮಾಡಬೇಕು. ಎಂದು ಹೇಳಿದ್ದೇವೆ ಅದಕ್ಕೆ ಅವರು ಯಾವದೇ ತರಹ ಭಿನ್ನವಾಗಿಲ್ಲ ಅಂತಾ ಹೇಳುತ್ತಿದ್ದಾರೆ ಸಾಕ್ಷಿ ಸಮೇತ ಬಹಿರಂಗ ಪಡಿಸುತೇವೆ ಎಂದು ರೇವನಸಿದ್ದಪ್ಪ ಮಾಸ್ಟರ ಸಲಗರ್ ಹೇಳಿದರು.
ನಂತರ ಮಲ್ಲಿಕಾರ್ಜುನ ಪಾಟೀಲ್ ಹುಳಗೇರಾ ಅವರು ಮಾತನಾಡಿ ಶಾಸಕರ ಎಜೇಂಟರುಗಳು ಯಾವದೇ ತರಹ ಲಿಂಗವನ್ನು ಭಿನ್ನವಾಗಿಲ್ಲ ಅಂತಾ ಹೇಳುತ್ತಿದ್ದಾರೆ, ಅದಕ್ಕಾಗಿ ರೇವಣಸಿದ್ದೇಶ್ವರ ಭಕ್ತಾದಿಗಳಿಂದ ಇದೆ 30ರಂದು ರವಿವಾರ ಬೆಳೆಗ್ಗೆ 9:ಗಂಟೆಯಿಂದ ಕಂದಗೂಳ ಕ್ರಾಸನಿಂದ ರೇವಣಸಿದ್ದೇಶ್ವರ ದೇವಸ್ಥಾನದವರೆಗೆ ಪಾದ ಯಾತ್ರೆ ಹಮ್ಮಿಕೊಳ್ಳಲಾಗಿದೆ.ಶಾಸಕರು ಸಂಸದರು ಬಹಿರಂಗವಾಗಿ ಚರ್ಚೆಗೆ ಬರಲಿ,ಯಾರು ಲಿಂಗಾವನ್ನು ಭಗ್ನವಾಗಿಲ್ಲ ಅಂತಾ ಹೇಳುತ್ತಿದರೆ ಅವರು ಕೂಡ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲೆಸೆದರು. ಈಸಂದರ್ಭದಲ್ಲಿ ಧರ್ಮರಾಜ್ ಕಲ್ಲಹಿಪ್ಪರಗಾ,ಶಿವಶರಣಪ್ಪ ಚನ್ನೂರ್ ಶಿವಕುಮಾರ್ ಕಮಲಾಪುರ,ರೇವಣಸಿದ್ದಪ್ಪ ಸಾಥನೂರ್,ಅಂಬರಾಯ ಶೇಳ್ಳಾಗಿ, ಹೂವಣ್ಣ ವಟವಟಿ,ರಾಘವೇಂದ್ರ ಗುತ್ತೇದಾರ, ಜಗನ್ನಾಥ ಚಂದನಕೇರಾ ಸೇರಿದಂತೆ ಇತರರು ಇದ್ದರು.