
ಪ್ರತಿವರ್ಷ ಏಪ್ರಿಲ್1 ರಂದು ಪ್ರಪಂಚದಾದ್ಯಂತ ಮೂರ್ಖರ ದಿನವನ್ನು ಆಚರಿಸಲಾಗುತ್ತದೆ.
ನಿಮ್ಮ ಪ್ರೀತಿಪಾತ್ರರನ್ನು ಮೂರ್ಖರನ್ನಾಗಿ ಮಾಡಿ, ತಮಾಷೆ ನೋಡಲು ಈ ದಿನ ಸೂಕ್ತ. ಯಾಕೆಂದರೆ ಬೇರೆ ದಿನ ನೀವು ಅವರನ್ನು ಮೂರ್ಖರನ್ನಾಗಿಸಲು ಹೊರಟರೆ ಒದೆ ತಿನ್ನುವುದು ಗ್ಯಾರೆಂಟಿ. ಆದರೆ ಇಂದು ಹಾಗಲ್ಲ… ʼಏಪ್ರಿಲ್‌ಫೂಲ್….ʼ ಎನ್ನುವ ಮೂಲಕ ಪರಿಸ್ಥಿತಿಯನ್ನು ಸಂಭಾಳಿಸಬಹುದು. ಇಂದು ನಿಮ್ಮ ಆತ್ಮೀಯರನ್ನು ಫೂಲ್‌ಮಾಡಿ ಮಜಾ ಮಾಡಿ.
ಏಪ್ರಿಲ್1 ತಾರೀಕಿನಂದೇ ಏಪ್ರಿಲ್‌ಫೂಲ್‌ಅಥಾ ಮೂರ್ಖರ ದಿನವನ್ನು ಯಾವ ಕಾರಣಕ್ಕೆ ಆಚರಿಸುತ್ತಾರೆ ಎಂಬ ಇತಿಹಾಸದ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಇದರ ಮೂಲದ ಹಿಂದೆ ಹಲವು ಊಹೆಗಳಿವೆ.
ಅದ್ಯಾಗೂ, 16ನೇ ಶತಮಾನದ ಉತ್ತರಾರ್ಧದಲ್ಲಿ ಪೋಪ್‌ಗ್ರೆಗೊರಿ XIII ಗ್ರೆಗೋರಿಯನ್‌ಕ್ಯಾಲೆಂಡರ್‌ನ ಅನುಷ್ಠಾನಗೊಳಿಸಿದ ಇತಿಹಾಸವು ಇದರ ಹಿಂದಿದೆ ಎನ್ನುತ್ತದೆ ಒಂದು ಸಿದ್ಧಾಂತ.
ಗ್ರೆಗೋರಿಯನ್ ಕ್ಯಾಲೆಂಡರ್ ಜಾರಿಗೆ ಬಂದಾಗ, ಜನವರಿ 1 ವರ್ಷದ ಪ್ರಾರಂಭವಾಯಿತು. ಇದಕ್ಕೂ ಮೊದಲು ಅಂದರೆ ಜೂಲಿಯನ್‌ಕ್ಯಾಲೆಂಡರ್‌ಪ್ರಕಾರ ಮಾರ್ಚ್‌ವರ್ಷಾಂತ್ಯ ಎಂಬುದಿತ್ತು. ಅಂದರೆ ಹಳೆ ಕ್ಯಾಲೆಂಡರ್‌ಪ್ರಕಾರ ಏಪ್ರಿಲ್1 ಹೊಸವರ್ಷವಾಗಿತ್ತು.
ಫ್ರಾನ್ಸ್‌ದೇಶ ಮೊದಲ ಬಾರಿಗೆ ಗ್ರೆಗೋರಿಯನ್‌ಹೊಸ ಕ್ಯಾಲೆಂಡರ್‌ಅನ್ನು ಅಂಗೀಕರಿಸಿತ್ತು. ಈ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದರೂ ಕೂಡ ಕೆಲವು ವ್ಯಕ್ತಿಗಳಿಗೆ ಹೊಸ ಬದಲಾವಣೆಯ ಬಗ್ಗೆ ತಿಳಿದಿರಲಿಲ್ಲ, ಅಲ್ಲದೆ ತಿಳಿದ ಮೇಲೂ ಅವರು ಹೊಸ ಬದಲಾವಣೆಗಳನ್ನು ಅನುಸರಿಸಲು ಒಪ್ಪಿರಲಿಲ್ಲ. ಅಂತಹ ಒಂದು ಗುಂಪು ಏಪ್ರಿಲ್ 1 ರಂದೇ ಹೊಸ ವರ್ಷ ಆಚರಿಸುವುದನ್ನು ಮುಂದುವರೆಸಿತ್ತು.
ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಅನುಸರಿಸುವ (ಹೊಸ ಕ್ಯಾಲೆಂಡರ್) ಜನರು ಜೂಲಿಯನ್‌ಕ್ಯಾಲೆಂಡರ್‌ಅನ್ನು ಅನುಸರಿಸುವ ಜನರನ್ನು ಅಪಹಾಸ್ಯ ಮಾಡಲು ಪ್ರಾರಂಭಿಸಿದರು. ಅವರು ಮೂರ್ಖರು, ಆ ಕಾರಣಕ್ಕೆ ಅವರು ಹೊಸ ಕ್ಯಾಲೆಂಡರ್‌ವರ್ಷವನ್ನು ಆಚರಿಸುತ್ತಿಲ್ಲ ಎಂದು ನಿಂದಿಸಲಾಯಿತು. ಆ ಮೂಲಕ ಏಪ್ರಿಲ್1 ಅನ್ನು ಸಾಂಪ್ರದಾಯಿಕವಾಗಿ ಮೂರ್ಖರ ದಿನ ಎಂದು ಆಚರಿಸಲಾಯಿತು ಎನ್ನಲಾಗುತ್ತದೆ, ಆದರೂ ಕೂಡ ಈ ಬಗ್ಗೆ ಯಾವುದೇ ನಿಖರ ಮಾಹಿತಿಯಿಲ್ಲ.
ಮೂರ್ಖರ ದಿನವನ್ನು ಪ್ರಪಂಚದಾದ್ಯಂತ ಪ್ರತಿ ದೇಶದಲ್ಲೂ ಆಚರಿಸಲಾಗುತ್ತದೆ. ಇದು ರಜಾದಿನವಲ್ಲ. ಇತ್ತೀಚಿನ ಜನರು ಹಾಸ್ಯ ಎಂಬುದನ್ನೇ ಮರೆತು ಗಂಭೀರವಾಗಿ ಬದುಕುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಬಹುಶಃ ನಗುವುದನ್ನೇ ಮರೆತವರೂ ಇದ್ದಾರೆ ಎನ್ನಬಹುದು. ಅಂತಹವರ ಮುಖದಲ್ಲಿ ನಗು ತರಿಸುವ ಉದ್ದೇಶದಿಂದ ಮೂರ್ಖರ ದಿನವನ್ನು ಆಚರಿಸಬಹುದು. ಆದರೆ ತಮಾಷೆಗೆ ಮಿತಿ ಇರಲಿ. ಏಪ್ರಿಲ್‌ಫೂಲ್‌ಡೇ ಅಥವಾ ಮೂರ್ಖರ ದಿನ ಆತ್ಮೀಯರನ್ನು ಕುಚೇಷ್ಟೆ ಮಾಡುವ ಮೂಲಕ, ಮೂರ್ಖರನ್ನಾಗಿಸುವ ಮೂಲಕ ಮೋಜು ಮಾಡುವ ಒಂದು ಸುಸಂದರ್ಭದ ದಿನವಾಗಿದೆ. ಈ ದಿನವು ಜೀವನದಲ್ಲಿ ಸಕಾರಾತ್ಮಕ ಭಾವವನ್ನು ತುಂಬುತ್ತದೆ. ಸ್ನೇಹಿತರು, ಆತ್ಮೀಯರನ್ನು ಒಟ್ಟುಗೂಡಿಸುತ್ತದೆ. ಒಂದು ತಮಾಷೆಯ ಕ್ಷಣದಲ್ಲಿ ಎಲ್ಲರೂ ಒಂದಾಗಿ ಸೇರಲು ಸಹಾಯ ಮಾಡುತ್ತದೆ. ಒಟ್ಟಾರೆ ಈ ದಿನ ಬದುಕಿಗೆ ನಗು ತುಂಬುತ್ತದೆ ಎಂದರೆ ಸುಳ್ಳಾಗಲ್ಲ. ಇದು ಏಪ್ರಿಲ್1 ರ ಮಹತ್ವ.