ಮೂರು ಹಂತಗಳಲ್ಲಿ ಸೇನಾ ವಾಪಸಾತಿಗೆ ಚೀನಾ-ಭಾರತ ಒಪ್ಪಿಗೆ

ನವದೆಹಲಿ, ನ 11- ದಿಢೀರ್ ಬೆಳವಣಿಗೆಯಲ್ಲಿ ಮೂರು ಹಂತಗಳಲ್ಲಿ ಸೇನಾಪಡೆಗಳನ್ನು ವಾಪಸ್
ಕರೆಸಿಕೊಳ್ಳಲು ಚೀನಾ ಮತ್ತು ಭಾರತ ಒಪ್ಪಿಗೆ ಸೂಚಿಸಿದ್ದು, ಚಟುವಟಿಕೆಗಳ ಮೇಲೆ ನಿಗಾವಹಿಸಲು ಸಹಮತ ವ್ಯಕ್ತಪಡಿಸಿವೆ.
ಲಡಾಕ್ ಸೆಕ್ಟರ್ ನಲ್ಲಿ ಸೇನಾ ಹಿಂತೆಗೆತ ಕುರಿತು ಇದುವರೆಗೂ ಎಂಟು ಸುತ್ತಿನ ಮಾತುಕತೆಗಳು ನಡೆದಿದ್ದವು.. ಆದರೆ ಸೇನಾ ವಾಪಸಾತಿ ಕುರಿತು ಮೂರು ಹಂತಗಳಲ್ಲಿ ವಾಪಸ್ ಕರೆಸಿಕೊಳ್ಳುವ ಕುರಿತು ಪರಸ್ಪರ ಒಪ್ಪಿಗೆ ಸೂಚಿಸಿರುವುದು ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಮುಂದಾಗಿವೆ.
ಇತ್ರೀಚೆಗೆ ನಡೆದ ಚುಶುಲ್ ನಲ್ಲಿ ಎಂಟನೇ ಕಾರ್ಪ್ ಕಮಾಂಡರ್ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಾತುಜತೆ ನಡೆದ ಒಂದು ವಾರಗಳ ಅವಧಿಯಲ್ಲಿ ಸೇನಾ ವಾಪಸಾತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
ಈ ಹಿಂದೆ ನಡೆದ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ನವೀನ್ ಶ್ರೀ ವಾಸ್ತವ ಹಾಗೂ ಸೇನಾ ಕಾರ್ಯಾಚರಣೆಗಳ ಪ್ರಧಾನ ಬ್ರಿಗೇಡಿಯರ್ ಘಾಯ್ ಜತೆ‌ ನಡೆದ ಮಾತುಕತೆ ವೇಳೆ ರೂಪಿಸಲಾದ ಯೋಜನೆಯಂತೆ ಟ್ಯಾಂಕರ್ ಗಳು,ಶಸ್ತ್ರಸಜ್ಜಿತ ಸಿಬ್ಬಂದಿ ಒಂದು ದಿನದಲ್ಲಿ ವಾಪಸ್ ತೆರಳಬೇಕಾಗಿದೆ.
ಎರಡನೇ ಹಂತದಲ್ಲಿ ಪಾಂಒಗಾಂಗ್ ಸರೋವರದ ಉತ್ತರ ಭಾಗದಲ್ಲಿ ಉಭಯ ಸೇನೆಗಳು ದಿನವೊಂದಕ್ಕೆ ಶೇ.30 ರಷ್ಟು ಸಿಬ್ಬಂದಿಗಳಂತೆ ಒಟ್ಟು ಮೂರು ದಿನಗಳ ಕಾಲ ವಾಪಸ್ ಕರೆಸಿಕೊಳ್ಳಲಿವೆ. ಈ ವೇಳೆ ಭಾರತೀಯ ಪಡೆಗಳು ಧನ್ ಸಿಂಗ್ ಥಾಪ ಪೋಸ್ಟ್ ಗೆ ವಾಪಸ್ಸಾಗಲಿವೆ. ಚೀನಾದ ಪಡೆ ಫಿಂಗರ್ 8 ಕ್ಕೆ ಪೂರ್ವದ ತಮ್ಮ ಹಿಂದಿನ ಸ್ಥಿತಿಗೆ ಮರಳಲಿವೆ.

ಮೂರನೇ ಹಾಗೂ ಕೊನೆಯ ಪ್ರಕ್ರಿಯೆಯಲ್ಲಿ ಉಭಯ ಪಡೆಗಳು ಪ್ಯಾಂಗಾಂಗ್ ಸರೋವರದ ದಕ್ಷಿಣ ತೀರದಿಂದ ತಮ್ಮ ಸಿಬ್ಬಂದಿಗಳನ್ನು ಹಿಂದಕ್ಕೆ ಕಕರೆಸಿಕೊಳ್ಳಲಿವೆ.

ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವಣ ನಡೆದ ಬಡಿದಾಟದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮ ರಾಗಿದ್ದರು. ಈ ಘಟನೆ ಬಳಿಕ ಎರಡೂ ದೇಶಗಳ ನಡುವಣ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು.