
ಮೈಸೂರು: ಮೇ.05:- 60 ವರ್ಷದ ಕಾಂಗ್ರೆಸ್ ಆಡಳಿತ ಭರವಸೆ, 10 ವರ್ಷದ ಜೆಡಿಎಸ್ ಆಡಳಿತ ಭರವಸೆ ಹಾಗೂ 9ವರ್ಷದ ಬಿಜೆಪಿ ಆಡಳಿತ ಭರವಸೆ ಈಡೇರಿಕೆಯನ್ನು ಗಮನಿಸಿ ಅಂತಿಮವಾಗಿ ಜನರೇ ಈ ಬಾರಿ ತೀರ್ಮಾನಿಸಲಿ ಎಂದು ಮಾಜಿ ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.
ನಗರದ ಬಿಜೆಪಿಯ ಮಾದ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ದೇಶ ಹಾಗೂ ರಾಜ್ಯವನ್ನು ಕಾಂಗ್ರೆಸ್ 60 ವರ್ಷಗಳ ಕಾಲ ಆಡಳಿತ ನಡೆಸಿದೆ. ಜೆಡಿಎಸ್ 10 ವರ್ಷಗಳ ಕಾಲ ಆಳ್ವಿಕೆ ನಡೆಸಿದೆ. ಬಿಜೆಪಿ 9 ವರ್ಷಗಳ ಕಾಲ ಅಧಿಕಾರ ನಡೆಸಿದೆ. ಈ ಮೂರು ಪಕ್ಷಗಳು ಎಷ್ಟು ಭರವಸೆಗಳನ್ನು ಜನರಿಗೆ ನೀಡಿದ್ದವು. ಎಷ್ಟನ್ನು ಈಡೇರಿಸಿವೆ ಎಂಬುದರ ಬಗ್ಗೆ ರಿಪೆÇೀರ್ಟ್ ಕಾಡ್ನ್ರ್ನು ಜನರ ಮುಂದಿಟ್ಟು ಮತಯಾಚನೆ ಮಾಡೋಣ, ರಿಪೆÇೀರ್ಟ ಕಾಡ್ರ್ಗಳನ್ನು ಮೌಲ್ಯ ಮಾಪನ ಮಾಡಲಿ, ತಮಗೆ ಯಾವ ಸರ್ಕಾರ ಬೇಕು ಎಂದು ಜನರೇ ತೀರ್ಮಾನ ಮಾಡಲಿ. ಆ ಮೂಲಕ ಹೊಸದೊಂದು ಚುನಾವಣೆಯ ದಿಕ್ಕನ್ನು ನೀಡೋಣ, ಈ ಚುನಾವಣೆಯನ್ನು ಪ್ರಜಾತಂತ್ರದ ಮೌಲ್ಯದ ಆಶಯದಲ್ಲಿ ನಡೆಸಲು ಬಿಜೆಪಿ ಬದ್ಧವಾಗಿದೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡ ಇದಕ್ಕೆ ಬದ್ಧರಾಗಬೇಕು ಎಂದು ನುಡಿದರು.
ಈ ಬಾರಿಯ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. 2008ರ ಚುನಾವಣೆಯಲ್ಲಿ 110, 2013 ಚುನಾವಣೆಯಲ್ಲಿ ನಮಲ್ಲಿನ ವ್ಯತ್ಯಾಸದಿಂದ ಬಹುಮತ ಬರಲಿಲ್ಲ. 2018ರಲ್ಲೂ 104 ಸ್ಥಾನಗಳು ಬಿಜೆಪಿಗೆ ಲಭಿಸಿದವು. 2023ರ ಚುನಾವಣೆಯಲ್ಲಿ 130 ಸ್ಥಾನಗಳು ಬಿಜೆಪಿಗೆ ದೊರೆಯಲಿವೆ. ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲು ಪ್ರಧಾನಿ ನರೇಂದ್ರ ಮೋದಿಯವರ ಹಾದಿಯಾಗಿ ಎಲ್ಲಾ ನಾಯಕರು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಯಾರ ಹಂಗಿಲ್ಲದೇ ಸರ್ಕಾರ ರಚಿಸುತ್ತೇವೆ. 120-130 ಸ್ಥಾನಗಳನ್ನು ಗೆಲ್ಲಲು ಚುನಾವಣಾ ತಂತ್ರಗಳನ್ನು ಹೆಣೆದಿದ್ದೇವೆ ಎಂದು ಹೇಳಿದರು.
ಚುನಾವಣೆಗಳು ಬರೀ ಘೋಷಣೆ, ಭರವಸೆಗಳ ಮೇಲೆ ನಡೆಯುತ್ತಿದೆ. ಭರವಸೆ, ಆಶ್ವಾಸನೆ ಆಧಾರದಲ್ಲಿ ಚುನಾವಣೆಗಳು ನಡೆಯಬಾರದು. ಕಾಂಗ್ರೆಸ್ ಜನರ ಮುಂದೆ ಬರೀ ಘೋಷಣೆ, ಭರವಸೆಯ ಗ್ಯಾರಂಟಿ ಕಾಡ್ರ್ಗಳನ್ನು ಮಾತ್ರ ಇಡಬಾರದು. ಕಳೆದ 60 ವರ್ಷಗಳ ಆಡಳಿತದಲ್ಲಿ ಏನೇನು ಅಭಿವೃದ್ಧಿ ಕೆಲಸ ಮಾಡಿದ್ದೇವೆ, ಎಷ್ಟೊಂದು ಭರವಸೆಗಳನ್ನು ಈಡೇರಿಸಿದ್ದೇವೆ. ಯಾವೆಲ್ಲಾ ಭರವಸೆಗಳನ್ನು ಈಡೇರಿಸಿಲ್ಲ ಎಂಬುದರ ಬಗ್ಗೆಯೂ ಜನರ ಮುಂದಿಡಬೇಕು. ರಾಜಕೀಯವನ್ನು ಹೆಚ್ಚಾಗಿ ದುರ್ಬಳಕೆ ಮಾಡಿಕೊಂಡಿದ್ದು ಕಾಂಗ್ರೆಸ್, ದೇಶದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದ್ದು ಕಾಂಗ್ರೆಸ್ ಸರ್ಕಾರಗಳಿಂದಲೇ ಶೇ.85 ರಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಆ ಪಕ್ಷದ ಪ್ರಧಾನ ಮಂತ್ರಿಯಾಗಿದ್ದ ರಾಜೀವ್ ಗಾಂಧಿಯವರೇ ಒಪ್ಪಿಕೊಂಡಿದ್ದರು. ಆದರೆ ಕಾಂಗ್ರೆಸ್‍ನವರು ಬಿಜೆಪಿ ಸರ್ಕಾರ ಶೇ.40 ಕಮಿಷನ್ ಭ್ರಷ್ಟಚಾರ ಸರ್ಕಾರ ಎಂದು ಸುಮ್ಮನೆ ಆರೋಪಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳನ್ನು ನೀಡುತ್ತಿಲ್ಲ. ಹಾಗಾಗಿ ಇವರ ಆರೋಪಗಳನ್ನು ಜನರು ನಂಬಲು ತಯಾರಿಲ್ಲ ಎಂದರು.
ಈ ಚುನಾವಣೆಯಲ್ಲಿ 13 ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರನ್ನು ಸ್ವಂತ ಊರಿನಲ್ಲಿಯೇ ಮನೆಗೆ ಕಳುಹಿಸುವುದು ಬಿಜೆಪಿಯ ಸಾಧನೆಯಾಗಲಿದೆ. ಕಳೆದ ಚುನಾವಣೆಯಲ್ಲಿಯೇ ಸಿದ್ದರಾಮಯ್ಯ ಕೊನೆ ಚುನಾವಣೆ ಎಂದಿದ್ದರು. ಈ ಚುನಾವಣೆಯಲ್ಲಿ ಅವರನ್ನು ಸೋಲಿಸುವ ಮೂಲಕ ನಾವೇ ಕೊನೇ ಚುನಾವಣೆ ಮಾಡಲಿದ್ದೇವೆ. ಹತಾಶರಾದವರು ಗೂಂಡಾಗಿರಿ ಮಾಡುತ್ತಾರೆ. ಅಪಪ್ರಚಾರಕ್ಕೆ ಒತ್ತು ಕೊಡುತ್ತಾರೆ. ಸೋಲಿನ ಭಯ ಇರುವವರು ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಾರೆ. ಈ ಮೂರನ್ನು ಸಿದ್ದರಾಮಯ್ಯ ಅವರಿಗೆ ಅನ್ವಯಿಸಬಹುದು ಎಂದು ಹೇಳಿದರು.
ಜಿಟಿಡಿ ವ್ಯಕ್ತಿಗತ ವಿಶ್ವಾಸರಲ್ಲ: ಶಾಸಕ ಜಿ.ಟಿ.ದೇವೇಗೌಡ ಅವರು ವ್ಯಕ್ತಿಗತವಾಗಿ ವಿಶ್ವಾಸಕ್ಕೆ ಅರ್ಹರಲ್ಲ ಎಂಬುದು ಜನರ ಮಾತುಗಳಿಂದಲೇ ತಿಳಿದುಬಂದಿದೆ. ಅವರು ಪಕ್ಷಾಂತರ ಮಾಡಲು ನಿಸ್ಸೀಮರಾಗಿದ್ದಾರೆ. ಬಿಜೆಪಿಯಲ್ಲಿದ್ದ ಜಿ.ಟಿ.ದೇವೇಗೌಡ ಅವರು ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿದ್ದರು. ಸಿದ್ದರಾಮಯ್ಯನ ವಿರೋಧ ವ್ಯಕ್ತಪಡಿಸಿ ಬಳಿಕ ಅವರ ಛೇಂಬರ್‍ನಲ್ಲಿ ಕಾಣಿಸಿಕೊಂಡರು. ಅಪ್ಪ-ಮಗನಿಗೆ ಟಿಕೆಟ್ ದೊರೆಯುವುದು ಖಾತರಿ ಇಲ್ಲದಿದ್ದಾಗ ನಿರ್ಗಮಿಸಿದರು. ಮರಳಿ ಬಿಜೆಪಿಗೆ ಬರುವ ಯತ್ನ ಮಾಡಿದರು. ಅವರನ್ನು ಮೊದಲೇ ನೋಡಿದ್ದ ನಾವುಗಳು ಹತ್ತಿರ ಬರುವುದು ಬೇಡ ಎಂದು ಹೇಳಿದವು ಎಂದರು.
ಈ ಚುನಾವಣೆಯಲ್ಲಿ 92 ಹೊಸ ಮುಖಗಳಿಗೆ ಟಿಕೆಟ್ ಕೊಟ್ಟಿದ್ದೇವೆ. ಅದರಲ್ಲಿ ಕವೀಶ್‍ಗೌಡ ಒಬ್ಬರು. ಸಾಮಾನ್ಯ ನಿಷ್ಠಾವಂತ ಕಾರ್ಯಕರ್ತ ಶ್ರೀವತ್ಸ ಕೆ.ಆರ್.ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಶಾಸಕ ಎಲ್.ನಾಗೇಂದ್ರ ಅಭಿವೃದ್ಧಿ ಕಾರ್ಯಗಳಿಂದ ಜನರ ಮೆಚ್ಚುಗೆ ಗಳಿಸಿದ್ದಾರೆ. ಶೇ.40 ಕಮಿಷನ್ ಆರೋಪವನ್ನು ಕಾಂಗ್ರೆಸ್ ಸಾಬೀತು ಮಾಡಬೇಕು. ಕೇಂದ್ರ ಸರ್ಕಾರದ 8 ವರ್ಷಗಳ ಆಡಳಿತದಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಆರೋಗ್ಯಕ್ಕೆ ಒತ್ತು ಕೊಟ್ಟಿದ್ದೇವೆ ಎಂದರು.
ಭಜರಂಗದಳ ನಿಷೇಧ ಅಸಾಧ್ಯ: ಭಜರಂಗ ದಳ ನಿಷೇಧಿಸುವ ವಿಚಾರ ತುಂಬಾ ನಗೆ ಬರುತ್ತದೆ. ಅನ್ಯಾಯ ಮಾಡಿದವರಿಗೆ ದೇವರು ಶಿಕ್ಷೆ ಕೊಡುತ್ತಾರೆ ಎಂದು ಜನರು ನಂಬುತ್ತಾರೆ. ಅದೇ ಪರಿಸ್ಥಿತಿ ಕಾಂಗ್ರೆಸ್ಸಿಗೂ ಬರಲಿದೆ. ಧರ್ಮ ರಕ್ಷಿಸುವವ ಸಂಘಟನೆ ನಿಷೇಧಿಸಿದರೆ ಚೆನ್ನಾಗಿ ಪಾಠ ಕಲಿಸುತ್ತಾರೆ ಎಂದು ನುಡಿದರು. ಸುದ್ದಿಗೋಷ್ಠಿಯಲ್ಲಿ ಕೆ.ಆರ್.ಕ್ಷೇತ್ರದ ಅಭ್ಯರ್ಥಿ ಟಿ.ಎಸ್. ಶ್ರೀವತ್ಸ, ನರಸಿಂಹರಾಜ ಕ್ಷೇತ್ರದ ಅಭ್ಯರ್ಥಿ ಸಂದೇಶ್ ಸ್ವಾಮಿ, ಮುಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್‍ಕುಮಾರ್ ಗೌಡ, ಬಿಜೆಪಿ ನಗರ ಕಾರ್ಯಾಧ್ಯಕ್ಷ ಹೆಚ್.ಜಿ.ಗಿರಿಧರ್, ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದ ಸಂಯೋಜಕ ನಾಗೇಶ್, ಜಿಲ್ಲಾ ಸಹ ವಕ್ತಾರ ಡಾ.ಕೆ.ವಸಂತಕುಮಾರ್, ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಮತ್ತಿತರರು ಉಪಸ್ಥಿತರಿದ್ದರು.