ಮೂರು ದಿನಗಳ ಉದ್ಯಮಶೀಲತಾ ಕಾರ್ಯಕ್ರಮ

ಯಾದಗಿರಿ : ಜು : 21 : ಯಾದಗಿರಿಯ ಎಸ್.ಸಿ, ಎಸ್.ಟಿ,ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜು, ಮುದ್ನಾಳ, ಮೂರು ದಿನಗಳ ಉದ್ಯಮಶೀಲತಾ ತಿಳುವಳಿಕೆ ಇಂದು ಜುಲೈ 20 ಬುಧವಾರ ರಂದು ಕಾರ್ಯಕ್ರಮವನ್ನು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ ಇವರ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಇವರು ಸ್ವಂತ ಉದ್ಯೋಗವನ್ನು ಸ್ಥಾಪಿಸಲು ಪದವಿ ಅಂತಿಮ ವರ್ಷದ ವಿಧ್ಯಾರ್ಥಿತಿಗಳಿಗೆ ಹಮ್ಮಿಕೊಳ್ಳಲಾಗಿತು ಎಂದು ಯಾದಗಿರಿ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

 ಈ ಕಾರ್ಯಕ್ರಮದ  ಅಧ್ಯಕ್ಷತೆ ಸ್ಥಾನ ವಹಿಸಿ ಡಾ.ಬಿ.ಆರ್.ಕೇತನಕರ ಪ್ರಾಂಶುಪಾಲರಾದ ಎಸ್.ಸಿ, ಎಸ್.ಟಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುದ್ನಾಳ, ಯಾದಗಿರಿ ಅವರು ನೀವು ತಾಳ್ಮೆ, ಸಹನೆ, ತ್ಯಾಗ ಎಲ್ಲವನ್ನು ನೀವುಗಳು ರೂಡಿಸಿಕೊಳ್ಳಬೇಕು ಮತ್ತು ಸರಕಾರದ ಯೋಜನೆಗಳನ್ನು ಸರಿಯಾಗಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಯಶಸ್ವಿ ಉದ್ಯಮಶೀಲನಾಗಿ ಬೇರೆಯವರಿಗೆ ಉದ್ಯೋಗ ನೀಡಿ ಎಂದು ಕರೆ ನೀಡಿದರು. 
 ಯಾದಗಿರಿ ಡಿಸ್ಟ್ರಿಕ್ಟ್‍ಲೀಡ್ ಎಸ್.ಬಿ.ಐ ಮ್ಯಾನೆಜರ್ ಕೆ.ಎನ್ ಸಿದ್ದೇಶ್ವರ ಅವರು ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿತಿಗಳಿಗೆ ತಮ್ಮ ಸ್ವಂತ ಉದ್ಯೋಗವನ್ನು ಸ್ಥಾಪನೆ ಮಾಡುವುದಕ್ಕೆ ಇದು ಸುವರ್ಣ ಅವಕಾಶ ಅಗಿರುತ್ತದೆ ಎಂದು ತಿಳಿಸಿದರು ಹಾಗೂ ಬ್ಯಾಂಕಿನ ಸೌಲಭ್ಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು.
 ಎಸ್.ಸಿ, ಎಸ್.ಟಿ, ನಿಯೋಜನಕೋಶ ಸಂಯೋಜಕರು ಡಾ.ಶಿವಲಿಂಗಮ್ಮ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುದ್ನಾಳ ಯಾದಗಿರಿಯಲ್ಲಿ ಅವರು ವಿವಿಧ ರೀತಿಯ ಉದ್ಯಮಗಳ ಅವಕಾಶದ ಬಗ್ಗೆ ವಿವರಿಸುತ್ತಾ ಉದ್ಯಮಶೀಲ ವ್ಯಕ್ತಿಯಲ್ಲಿರಬೇಕಾದ ತಾಳ್ಮೆ, ಸಮಯ ಪ್ರಜ್ಞೆ ಉತ್ತಮವಾದ ನಾಯಕತ್ವದ ಗುಣಲಕ್ಷಣಗಳ ಬಗ್ಗೆ ಮಾತನಾಡಿದರು.
 ಮುಖ್ಯ ಅತಿಥಿಗಳಾಗಿ ಕಲಬುರಗಿ ಸಿಡಾಕ ಉಪನ್ಯಾಸಕರಾದ ಸೈಯದೆ ಅಶ್ಪಾಖ್ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಮತ್ತು ಸಿಡಾಕ್ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಯಾದಗಿರಿ ಸಿಡಾಕ ತರಬೇತುದಾರರಾದ ಶಾಂತಯ್ಯ ಪೂಜಾರಿ ಕಾರ್ಯಕ್ರಮ ನಿರೂಪಣೆ, ಸ್ವಾಗತ ಹಾಗೂ ವಂದನಾರ್ಪಣೆ ಮಾಡಿದರು. ಎಸ್.ಸಿ, ಎಸ್.ಟಿ ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜು, ಮುದ್ನಾಳ, ಯಾದಗಿರಿಯ ಉಪನ್ಯಾಸಕರು ಕಾಯಕ್ರಮದಲ್ಲಿ ಉಪಸ್ಥಿತರಿದರು.