ಈ ವರ್ಷ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳು ಕಂಗನಾ ರಣಾವತ್ ಅವರಿಗೆ ತುಂಬಾ ಮಹತ್ವದ್ದಾಗಲಿವೆ. ಈ ಮೂರು ತಿಂಗಳಲ್ಲಿ ಕಂಗನಾರ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳು ಬಿಡುಗಡೆಯಾಗಲಿವೆ.
ಕಂಗನಾ ರಣಾವತ್ ಅವರು ಮುಂಬರುವ ಫಿಲ್ಮ್ ’ತೇಜಸ್’ ಬಿಡುಗಡೆ ದಿನಾಂಕವನ್ನು ಬುಧವಾರ ಘೋಷಿಸಿದ್ದಾರೆ. ಚಿತ್ರದ ಪೋಸ್ಟರ್ ನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಟಿ, ಚಿತ್ರವು ಅಕ್ಟೋಬರ್ ೨೦ ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಈ ಚಿತ್ರದಲ್ಲಿ ಕಂಗನಾ ಏರ್ ಫೋರ್ಸ್ ಪೈಲಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಂಚಿಕೊಂಡ ಫೋಟೋಗಳಲ್ಲಿ, ನಟಿ ವಾಯುಪಡೆಯ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಂಗನಾ ಅಭಿನಯದ ಈ ಚಿತ್ರದ ಶೂಟಿಂಗ್ ೨೦೨೦ ರಿಂದ ನಡೆಯುತ್ತಿತ್ತು. ಕೋವಿಡ್‌ನಿಂದಾಗಿ ಚಿತ್ರ ತಡವಾಗಿ ಪೂರ್ಣಗೊಂಡಿತು. ಚಿತ್ರವು ಅಂತಿಮವಾಗಿ ಅಕ್ಟೋಬರ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
ಸರ್ವೇಶ್ ಮೇವಾಡ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ರೋನಿ ಸ್ಕ್ರೂವಾಲಾ ನಿರ್ಮಿಸುತ್ತಿದ್ದಾರೆ. ಚಿತ್ರದಿಂದ ಕಂಗನಾ ಲುಕ್ ಕೂಡ ರಿವೀಲ್ ಆಗಿದ್ದು, ಜನ ತುಂಬಾ ಇಷ್ಟ ಪಡುತ್ತಿದ್ದಾರೆ.
ವಿಶೇಷವೆಂದರೆ ಇದು ಕಂಗನಾ ಅವರ ಈ ವರ್ಷದ ಮೂರನೇ ಚಿತ್ರವಾಗಿದ್ದು, ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಳೆದ ವರ್ಷ ಧಾಕಡ್ ಬಿಡುಗಡೆಯಾದ ನಂತರ, ಕಂಗನಾ ಅವರ ಮುಂದಿನ ಫಿಲ್ಮ್ ಚಿತ್ರಮಂದಿರಗಳಲ್ಲಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.
ಇದರ ನಂತರ ಮೂರು ತಿಂಗಳಲ್ಲಿ ಕಂಗನಾರ ಮೂರು ಚಿತ್ರಗಳು ಒಂದೊಂದೇ ಬರಲಿದೆ.
ಕಂಗನಾ ರಣಾವತ್ ಮತ್ತೊಮ್ಮೆ ಬಾಕ್ಸ್ ಆಫೀಸ್ ನಲ್ಲಿ ಕಮ್ ಬ್ಯಾಕ್ ಮಾಡಲು ರೆಡಿಯಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೌದು, ಕಂಗನಾ ಅವರ ಮುಂಬರುವ ಚಿತ್ರಗಳ ಪಟ್ಟಿ ನೋಡಿದರೆ ಇದು ನಿಜ. ಮುಂಬರುವ ಮೂರು ತಿಂಗಳಲ್ಲಿ (ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವಂಬರ್) ಕಂಗನಾ ಅವರ ಸತತ ಮೂರು ಚಿತ್ರಗಳು ಬಿಡುಗಡೆಯಾಗಲಿವೆ. ಇದನ್ನು ನೋಡಿ ಕಂಗನಾ ಅಭಿಮಾನಿಗಳು ಉತ್ಸುಕರಾಗುವುದರಲ್ಲಿ ಸಂಶಯವಿಲ್ಲ.
೨೦೨೩ ರಲ್ಲಿ ಕಂಗನಾ ರಣಾವತ್ ಅವರ ಮುಂಬರುವ ಎಲ್ಲಾ ಮೂರು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.
’ಚಂದ್ರಮುಖಿ ೨’- ಬಿಡುಗಡೆ ದಿನಾಂಕ :
ಗಣೇಶ ಚತುರ್ಥಿಯ ಸಮಯ ಬರಲಿರುವ (ಸೆಪ್ಟೆಂಬರ್) ಪಿ ವಾಸು ನಿರ್ದೇಶನದ ಈ ಚಿತ್ರದಲ್ಲಿ ರಾಘವ್ ಲಾರೆನ್ಸ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಕಂಗನಾ ನಾಯಕಿಯಾಗಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಮತ್ತು ಸುಬಾಸ್ಕರನ್ ನಿರ್ಮಾಣದ ಈ ಚಿತ್ರವು ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.
’ತೇಜಸ್’ ಬಿಡುಗಡೆ ದಿನಾಂಕ -೨೦ ಅಕ್ಟೋಬರ್:
ಚಿತ್ರದಲ್ಲಿ ಕಂಗನಾ ಪ್ರಮುಖ ಪಾತ್ರದಲ್ಲಿದ್ದಾರೆ ಮತ್ತು ಏರ್‌ಫೋರ್ಸ್ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೇಜಸ್‌ನ ಕಥೆಯು ವಾಯುಪಡೆಯ ಪೈಲಟ್ ತೇಜಸ್ ಗಿಲ್ ಅವರ ಅಸಾಧಾರಣ ಪ್ರಯಾಣದ ಸುತ್ತ ಸುತ್ತುತ್ತದೆ ಮತ್ತು ನಮ್ಮ ವಾಯುಪಡೆಯ ಪೈಲಟ್‌ಗಳು ದಾರಿಯುದ್ದಕ್ಕೂ ಅನೇಕ ಸವಾಲುಗಳನ್ನು ಹೇಗೆ ಜಯಿಸುತ್ತಾರೆ ಎಂಬುದನ್ನು ಪ್ರದರ್ಶಿಸುವ ಮೂಲಕ ಪ್ರತಿಯೊಬ್ಬ ಭಾರತೀಯರಲ್ಲಿ ಹೆಮ್ಮೆಯ ಆಳವಾದ ಪ್ರಜ್ಞೆಯನ್ನು ಪ್ರೇರೇಪಿಸುವ ಮತ್ತು ತುಂಬುವ ಗುರಿಯನ್ನು ಹೊಂದಿದೆ.
’ಎಮರ್ಜೆನ್ಸಿ’, ಬಿಡುಗಡೆ ದಿನಾಂಕ – ೨೪ ನವೆಂಬರ್:
ಕಂಗನಾ ರಣಾವತ್ ಅವರ ಎಮರ್ಜೆನ್ಸಿ ಚಲನಚಿತ್ರವು ೧೯೭೫ ರಲ್ಲಿ ಇಂದಿರಾ ಗಾಂಧಿಯವರು ಘೋಷಿಸಿದ ತುರ್ತು ಪರಿಸ್ಥಿತಿಯ ಘಟನೆಗಳನ್ನು ಅನುಸರಿಸುತ್ತದೆ, ಇದನ್ನು ಸ್ವತಂತ್ರ ಭಾರತದಲ್ಲಿ ಕರಾಳ ಸಮಯವೆಂದು ಪರಿಗಣಿಸಲಾಗಿದೆ. ಚಿತ್ರದಲ್ಲಿ ಕಂಗನಾ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಕಂಗನಾ ಜೊತೆಗೆ ಸತೀಶ್ ಕೌಶಿಕ್, ಮಿಲಿಂದ್ ಸೋಮನ್, ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ ಮತ್ತು ಮಹಿಮಾ ಚೌಧರಿ ನಟಿಸಿದ್ದಾರೆ. ಈ ಚಿತ್ರವನ್ನು ಕಂಗನಾ ಅವರೇ ನಿರ್ದೇಶಿಸಿದ್ದಾರೆ.
ಮುಂಬೈನ ಅಂಧೇರಿ ಪಶ್ಚಿಮದಲ್ಲಿ ೪೫ ಕೋಟಿ ರೂಪಾಯಿ ಬೆಲೆಯ
ಆಸ್ತಿಯನ್ನು ಖರೀದಿಸಿದ ಅಜಯ್ ದೇವಗನ್
ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಅವರಿಗೆ ಸಂಬಂಧಿಸಿದ ಇತ್ತೀಚಿನ ಸುದ್ದಿಗಳು ಹೊರಬರುತ್ತಿವೆ. ನಟ ಮುಂಬೈನ ಅಂಧೇರಿ ಪಶ್ಚಿಮದಲ್ಲಿ ಆಸ್ತಿಯನ್ನು ಖರೀದಿಸಿದ್ದಾರೆ, ಇದರ ವೆಚ್ಚ ಸುಮಾರು ೪೫ ಕೋಟಿ ಎಂದು ಹೇಳಲಾಗುತ್ತದೆ.
ವರದಿಗಳ ಪ್ರಕಾರ ಅಜಯ್ ದೇವಗನ್ ಅವರ ಹೊಸ ಆಸ್ತಿಯ ಬೆಲೆ ೪೫ ಕೋಟಿ ರೂ. ಇದು ಕಚೇರಿ ಘಟಕಗಳನ್ನು ಸಹ ಒಳಗೊಂಡಿದೆ. ಅಜಯ್ ದೇವಗನ್ ಅವರು ಸಿಗ್ನೇಚರ್ ಬಿಲ್ಡಿಂಗ್‌ನ ೧೬ ಮತ್ತು ೧೭ ನೇ ಮಹಡಿಗಳನ್ನು ಖರೀದಿಸಿದ್ದಾರೆ. ೧೬ನೇ ಮಹಡಿಯಲ್ಲಿ ಕಚೇರಿಯ ೩ ಘಟಕಗಳಿದ್ದು, ಇದರ ಬೆಲೆ ಸುಮಾರು ೩೦ ಕೋಟಿ ರೂ. ೧೭ನೇ ಫ್ಲೋರ್ ನಲ್ಲಿ ೨ ಯೂನಿಟ್‌ಗಳಿವೆ. ಇದರ ಬೆಲೆ ಸುಮಾರು ೧೪.೭೪ ಕೋಟಿ. ಈ ಆಸ್ತಿಯನ್ನು ವಿಶಾಲ್ ವೀರೇಂದ್ರ ಹೆಸರಿನಲ್ಲಿ ಖರೀದಿಸಲಾಗಿದೆ.
ಕೋಟಿಗಟ್ಟಲೆ ಆಸ್ತಿಯ ಒಡೆಯರು:

ಇತ್ತೀಚೆಗಷ್ಟೇ ಪತ್ನಿ ಕಾಜೋಲ್ ಅಪಾರ್ಟ್‌ಮೆಂಟ್ ಒಂದನ್ನು ಖರೀದಿಸಿದ್ದರು, ಅದರ ವೆಚ್ಚವೂ ಕೋಟಿಗಟ್ಟಲೆ ಎಂದು ಹೇಳಲಾಗಿದೆ. ಇತ್ತ ನಟ ಅಜಯ್ ದೇವಗನ್ ಕೂಡಾ ಕೋಟಿಗಟ್ಟಲೆ ಆಸ್ತಿಯ ಒಡೆಯರು. ಐಷಾರಾಮಿ ಬಂಗಲೆಯ ಜೊತೆಗೆ, ಅವರು ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ ಮತ್ತು ಅವರು ಪ್ರತಿ ಚಿತ್ರಕ್ಕೆ ಸುಮಾರು ೩೦ ಕೋಟಿ ರೂ. ವಿಧಿಸುತ್ತಾರೆ. ಅಜಯ್ ದೇವಗನ್ ೨೯೫ ಕೋಟಿ ಆಸ್ತಿಯ ಒಡೆಯ. ಅದೇ ಸಮಯದಲ್ಲಿ, ಕಾಜೋಲ್ ಅನೇಕ ಚಿತ್ರಗಳಲ್ಲಿ ತನ್ನ ನಟನಾ ಕೌಶಲ್ಯವನ್ನು ಹರಡಿದ್ದವರು.೯೦ರ ದಶಕದಲ್ಲಿ ಬಾಲಿವುಡ್‌ನಲ್ಲಿ ಇವರಿಬ್ಬರೂ ಸಕ್ರಿಯರಾಗಿದ್ದರು. ಇಂದಿಗೂ ಕಾಜೋಲ್ ನಟನೆಯನ್ನು ಜನರು ತುಂಬಾ ಇಷ್ಟಪಡುತ್ತಾರೆ. ಇಬ್ಬರೂ ಸ್ಟಾರ್‌ಗಳು ಇಂಡಸ್ಟ್ರಿಯಲ್ಲಿ ಇನ್ನೂ ಸಕ್ರಿಯರಾಗಿದ್ದಾರೆ.
“ಸಿಂಗಮ್ ಎಗೈನ್” ಫಿಲ್ಮ್ ಕಾತುರದಿಂದ ಕಾಯುತ್ತಿದ್ದಾರೆ:
ಚಲನಚಿತ್ರಗಳ ಬಗ್ಗೆ ಮಾತನಾಡಿದರೆ, ಇತ್ತೀಚೆಗೆ ಅವರ ಚಿತ್ರ “ಭೋಲಾ” ಬಿಡುಗಡೆಯಾಯಿತು. ಅದು ಗಲ್ಲಾಪೆಟ್ಟಿಗೆಯಲ್ಲಿ ಯೋಗ್ಯವಾದ ಕಲೆಕ್ಷನ್ ಮಾಡಿತು. ಈಗ ಅಭಿಮಾನಿಗಳು ಅಜಯ್ ದೇವಗನ್ ಅಭಿನಯದ “ಸಿಂಗಮ್ ಎಗೇನ್” ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ವರದಿಗಳ ಪ್ರಕಾರ, ಈ ಚಿತ್ರ ೨೦೨೪ ರಲ್ಲಿ ಬಿಡುಗಡೆಯಾಗಲಿದೆ.