
ತಾಳಿಕೋಟೆ:ಮಾ.6: ಪರಮಾತ್ಮನ ದೃಷ್ಟಿಯಲ್ಲಿ ಜಗತ್ತು ಮೂರು ಗುಣಗಳಿಂದ ಸೃಷ್ಠಿಯಾಗಿದೆ ಅದಕ್ಕಾಗಿ ಗುಣವಂತ ವರ್ಣಿಸಿದ್ದು ನಾಲ್ಕು ವೇದಗಳು,ಹದಿನೆಂಟು ಪುರಾಣಗಳು ಹಾಗೂ ಅಲ್ಲಮಪ್ರಭು ಅವರು ಸಹ ಅದನ್ನೇ ಹೇಳುತ್ತಿದ್ದರೆಂದು ಪಡೆಕನೂರ ದಾಸೋಹ ಮಠದ ಮಲ್ಲಿಕಾರ್ಜುನ ಮಹಾ ಸ್ವಾಮಿಗಳು ನುಡಿದರು.
ರವಿವಾರರಂದು ಶ್ರೀ ಸಾಂಭಪ್ರಭು ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಸಾಗಿಬಂದ ಅಲ್ಲಮಪ್ರಭು ದೇವರ ಶೂನ್ಯ ಸಂಪಾದನೆಯ ಆಧ್ಯಾತ್ಮಿಕ ಪ್ರವಚನದ 13ನೇ ದಿನದಂದು ಮುಂದುವರಿಸಿ ಮಾತನಾಡುತ್ತಿದ್ದ ಅವರು ಶಿಶ್ಯನಿಗೆ ಉಪದೇಸಿದ ಗುರು ಮೂರು ಗುಣಗಳನ್ನು ವಿವರಿಸುತ್ತ ರಜೋಗುಣ, ತಮೋಗುಣ, ರಾಜಸ್ವಗುಣ ಈ ಗುಣಗಳ ಮೇಲೆ ಜಗತ್ತು ನಡೆದಿದೆ ಈ ಮೂರು ಎಲ್ಲರಲ್ಲಿರಲಾರವು ಒಂದೊಂದು ಗುಣದ ಪ್ರಭಾವದಿಂದ ಒಂದೊಂದನ್ನು ಮನುಷ್ಯ ಸಾಧಿಸುತ್ತಾನೆಂದರು. ರಾಜಸ್ವ ಗುಣ ಉಳ್ಳವ ರಾಜ ವೈಭವವನ್ನೇ ಬೇಡುತ್ತಾನೆ ಇದು ನಿಂತಲ್ಲೆ ನಿಲ್ಲುವುದಿಲ್ಲ ಅದು ಹುಡುಕುತ್ತಿರುತ್ತದೆ ಸುಖದ ಸಂಪತ್ತುಗಳನ್ನು ಹುಡುಕುತ್ತಿರುತ್ತದೆ. ಸಂಗ್ರಹ ಮಾಡುವುದೇ ಇದರ ಗುಣವಾಗಿದೆ ಎಂದರು.
ತಮೋಗುಣ ತನ್ನನ್ನು ತಾನು ಮರೆತದ್ದು ತಮಃ ಎಂದರೇ ಯಾರೂ ಕಾಣಂಗಿಲ್ಲ ಸಣ್ಣವರು, ದೊಡ್ಡವರು, ತಂದೆ ತಾಯಿಗಳು, ಅಣ್ಣ ತಮ್ಮಂದಿರು ಎಂಬುವವರು ಸಹ ಕಾಣುವುದಿಲ್ಲ ತಾಚಾರ್ಯ ಮನೋಭಾವದಿಂದ ಕಾಣುವುದೇ ಅದಕ್ಕೆ ಅಜ್ಞಾನವೆಂದು ಕರೆದರೆಂದರು. ರಾಜಸ ಗಳಿಸುವುದೇ ಸಂಗ್ರಹ ಮಾಡುವುದೇ ಇದರ ಕಾಲ ಮಿತಿ ದಾಟಿ ಮುಂದಾಗಿ ಇನಾ ಇನಾ ಬೇಕು ಎಂದು ಜಾಸ್ತಿ ಮಾಡಿ ಆಯುಷ್ಯ ಎಂಬುದು ಕಳೆದು ಬಿಡುತ್ತದೆ. ಬೇಕೆನ್ನುವುದರೊಳಗೆ ಆಯುಷ್ಯ ಮುಗಿದಿದೆ ಬೇಕೆನ್ನುವುದರಲ್ಲಿ ಸತ್ತೆ ಹೋದ ಮನುಜ.
ಜಡಜೀವಿಗಳು ರಾಜೋಗುಣ ಉಳ್ಳವ ಇವ ರಾಜಸ ಗುಣ ಉಳ್ಳವ ಇವರೆಲ್ಲರೂ ಸಮಾಜದಲ್ಲಿರುತ್ತಾರೆ. ರಜಗುಣ ಉಳ್ಳವನ ಮನಸ್ಸಿನ ಗುಣಗಳು ದೇವ ಧರ್ಮವಿಲ್ಲದೇ ಚಲಿಸುತ್ತದೆ ಎಂದರು. ಭಗವಂತನ ಪ್ರಾರ್ಥನೆಯಲ್ಲಿ ರಜಗುಣ ಉಳ್ಳ ಮನಸನ್ನು ಜ್ಞಾನೋಪದೇಶ ಮಾಡಿಸಿ ಮನಸ್ಸಿಗೆ ಪಾಶ ಎಂಬುದನ್ನು ಬಿಗಿದಾಗ ಮಾನವರಿಗೆ ಶರಣರೆಂದು ಕರೆದರು. ತಮಸ್ಸರೆಂದರೇ ಅಜ್ಞಾನ ಧರ್ಮವನ್ನು ತುಳಿದು ಕೊಳ್ಳುತ್ತ ಹೋದಂತಹ ಕೋಣದಂತೆ ಎಂದರು. ಕೋಣವೆಂಬುದು ದೇವತೆಗಳಿಗೂ ತೊಂದರೆ ಕೊಟ್ಟಿತ್ತು ಇಂತಹದ್ದನ್ನು ಮಹಿಶಾಸುರ ಮರ್ದಿನಿ ಕೊಂದು ಹಾಕಿದಳೆಂದರು. ತಪೋಗುಣ ನಾನು ನನ್ನದ್ದು ನನಗೆ ಗೊತ್ತಿದೆ ಎನ್ನುವುದಾಗಿದೆ. ಅದೇ ತಮಸ್ಸು ಎಂದರೇ ನಾನು ಎನ್ನನ್ನುವುದೇ ತಮಪ್ರಧಾನ ಎಂದು ಕರೆದರು. ಇದಕ್ಕೆ ತನ್ನಬೆನ್ನು ತಾನೇ ಚಪ್ಪರಿಸಿಕೊಳ್ಳುವವನಿಗೆ ಅನ್ನುತ್ತಾರೆಂದರು.
6 ಶಾಸ್ತ್ರಗಳನ್ನು ಓದಿದ ಬಸವಣ್ಣ ಏನಗಿಂತ ಕಿರಿಯರಿಲ್ಲ ಶಿವ ಭಕ್ತರಿಗಿಂತ ಹಿರಿಯರಿಲ್ಲ ಎಂದ ಬಸವಣ್ಣ ಅದಕ್ಕಾಗಿ ತುಂಬಿದ ಕೋಡ ತುಳುಕುವುದಿಲ್ಲ ಕಾಲಿಕೊಡ ತುಳುಕುತ್ತದೆ. ನಂಬಿಗೆ ಅಪನಂಬಿಗೆಯಾಗುವುದಿಲ್ಲ. ನಂಬಿದ್ದು ಸತ್ವಗುಣ, ಶಾಂತಗುಣವಾಗಿರುತ್ತದೆ ಆಸೆ ಆಮಿಶಕ್ಕೆ ಬಲಿಯಾಗಲಾರದಂತಹ ಇದೇ ಶಾಶ್ವತ ಅನ್ನುವಂತವನಿಗೆ ರಜಗುಣುಳ್ಳವ ಎನ್ನುತ್ತಾರೆಂದರು. ಯಾವುದೇ ಇರಲಿ ಅವರವರ ಭಾವಕ್ಕೆ ಶಿವಯೋಗಿ ಇರುತ್ತಿಹನು ಲಿಂಗ ಎಂದರೇ ಭಗವಂತ ಲಿಂಗ ಉದ್ಭವವೆಂದರೇ ಧರ್ಮಕ್ಕಾಗಿ ಉದ್ಭವವಾದವರು. ಈ ಲೋಕದಲ್ಲಿಯ ಡೊಂಕನ್ನು ತ್ತಿದ್ದಲು ಶರಣರು ಸಂತರು ಹುಟ್ಟುತ್ತಾರೆಂರು.
ಇತ್ತ ತಂಗಿ ಮಾಯಾದೇವಿಯ ವಿವಾಹಕ್ಕೆ ಮಸರಕಲ್‍ಕ್ಕೆ ನೂರಾರೂ ಗಾಡಿಗಳು ಹೋದವು ಮುಕ್ತಾದೇವಿಯ ಲಗ್ನವು ಆಯಿತು. ಆಕೆ ಅಣ್ಣನ ಹತ್ತಿರ ಬಂದು ಅಣ್ಣ ನಿನ್ನನ್ನು ಅಗಲಿ ಇರುವುದು ಹೇಗೆ? ದೇವನಂತೆ ಇದ್ದವ ನೀನು ಭಕ್ತಳಂತೆ ಇದ್ದಕ್ಕೆ ನಾನೂ ಇರುವುದು ಹೆಗೆ? ನೀನು ಇಲ್ಲಿಗೆ ಬರುವುದು ಹೇಗೆ? ನಾನೂ ಬರುವುದು ಹೇಗೆ ಎಂದು ಕೇಳಿದಾಗ ಅಣ್ಣ ಅಜಗಣ್ಣ ಒಂದು ಸೂಚನೆ ಕೊಟ್ಟ ಆಕೆಯ ಕೈಯಲ್ಲಿ ಒಂದು ಕಮಲದ ಹೂವನ್ನು ಕೊಟ್ಟು ಈ ಕಮಲದ ಹೂ ಬತ್ತುವುದಿಲ್ಲ ಅದು ಅರಳಿಕೊಂಡೆ ಇರುತ್ತದೆ ಅದು ಬತ್ತಿತ್ತೆಂದರೇ ನಾನಿಲ್ಲ ಎಂದು ತಿಳಿದುಕೋ ಎಂದ .ಮೊದಲನೇ ಸೂಚನೆ ನೀಡಿದ ಅಣ್ಣ ಮತ್ತೆ ಎರಡನೇ ಸೂಚನೇ ಕೊಟ್ಟು ಹೇಳುತ್ತಾನೆ ನಿನಗೆ ಕೊಟ್ಟ ಮನೆಯಲ್ಲಿ ಹೈನುಗಾರಿಕೆ ಇದೆ. ಅಲ್ಲಿ ಮಜ್ಜಿಗೆ ಮಾಡುವಾಗ ಬೆಣ್ಣೆ ಹಾಗೆ ಇದ್ದರೆ ನನಗೆ ಏನೂ ಆಗುವುದಿಲ್ಲ ಆದರೆ ಬೆಣ್ಣೆ ಕಲ್ಲಾಯಿತೆಂದರೇ ನಾನಿಲ್ಲ ಎಂದು ತಿಳಿದುಕೋ ಎಂದ. ಮೂರನೇ ಸೂಚನೇ ಹೇಳಿದ ಅಣ್ಣ ನೀನು ಉಟ್ಟ ಸೀರೆಯ ನಿಲುಗೆ ಗಟ್ಟಿಯಾಗಿದ್ದರೆ ಏನೂ ಆಗಿಲ್ಲವೆಂದು ತಿಳಿದುಕೋ ಒಂದುವೇಳೆ ನಿಲಗಿ ಕಳಚಿಬಿತ್ತೆಂದರೇ ನಾನು ಇರುವುದಿಲ್ಲ ಎಂದು ತಿಳಿದುಕೊಎಂದ. ನಾಲ್ಕನೇ ಸೂಚನೆಯೊಂದಿಗೆ ತಂಗಿಗೆ ತಿಳಿಸಿದ ಅಜಗಣ್ಣ ತಂಗಿ ನೀನೂ ಕಟ್ಟಿದ ತುರುಬ ಅಂದವಾಗಿರತ್ತಕ್ಕಂತಹದ್ದು ಅದು ಬಿಚ್ಚಿ ಹೋದರೆ ನಾನಿಲ್ಲ ಅಂತ ತಿಳಿದುಕೋ ಎಂದು ಅಜಗಣ್ಣ ತಂಗಿಗೆ ಬ್ರಹ್ಮಜ್ಞಾನವನ್ನು ಕೊಡುತ್ತಾನೆ. ಅಣ್ಣನ ಮಾತು ಕೇಳಿದ ತಂಗಿ ಮುಕ್ತಾದೇವಿಗೆ ಅಲ್ಲಿದ್ದ ಸುಮಂಗಲೆಯರು ಗಂಡನ ಹೆಸರನ್ನು ಕೇಳುವುದಕ್ಕೆ ಒಬ್ಬರಿಗೊಬ್ಬರು ಮುಗಿಬಿಳುತ್ತಾರೆ. ಶಾಸ್ತ್ರಕ್ಕಾಗಿ ಮದುವೆಯಾಗಿದ್ದಾಳೆ ಮುಕ್ತಾದೇವಿ ಪ್ರಪಂಚಕ್ಕಾಗಿ ಅಲ್ಲ ಆದರೆ ಅಣ್ಣ ಹೇಳುತ್ತಾನೆ ಇದೇ ಗಂಡನ ಮನೆಯೇ ತವರು ಮನಯೆಂದು ತಿಳಿದುಕೋ ಎಂದು ಲೌಕಿಕವಾಗಿ ತಂಗಿಯ ಪಾದ ಹಿಡಿದು ತೊಳೆದು ಒರೆಸುತ್ತ ಹೇಳುತ್ತಾನೆ ತಂಗಿ ನನ್ನ ಜೀವಾವಧಿಯಲ್ಲಿ ಮದುವೆಯಾಗುವುದಿಲ್ಲ ಲೋಕದ ಬಂಧನ ಜಂಜಾಟ ಬೇಡವೆಂದು ಪ್ರತಿಜ್ಞೆ ಮಾಡಿದ. ಅಜಗಣ್ಣ 5 ವಚನಗಳನ್ನು ಹೇಳಿ ತನ್ನ ಮನೆಗೆ ಹೋದ. ತನ್ನ ಮನೆ ಹೊಲದ ಕೆಲಸಕ್ಕೆ ಮುಂದಾದ ರಾಮ ಭಿಮನೆಂಬ ಹೆಸರಿ ಜೊಡೆತ್ತುಗಳಿದ್ದವು. ಅಜಗಣ್ಣ ಅವುಗಳಿಗೆ ಹಗ್ಗ ಹಚ್ಚದೆ ಬಿತ್ತುವುದನ್ನು ಮಾಡುತ್ತಿದ್ದ. ಆ ದಿನ ಎತ್ತುಗಳಿಗೆ ಮೇವು ಹಾಕಿ ಬರುವಾಗ ಅಜಗಣ್ಣನ ಹಣೆಗೆ ಮನೆಯ ಬಾಗಿಲು ಬಡೆಯುತ್ತದೆ ಈ ಘಟನೆಯಿಂದ ಅಣ್ಣ ಹೇಳಿದಂತೆ ಮುಕ್ತಾದೇವಿ ಬಳಿ ಇರುವ ಕಮಲದ ಹೂ ಬಾಡುತ್ತದೆ, ನಿಲಗಿ ಉಚ್ಚಿಬಿಳುತ್ತದೆ, ತುರುಬ ಉಚ್ಚುತ್ತದೆ, ಮಜ್ಜಿಗೆಯಲ್ಲಯ ಬೆಣ್ಣೆ ಕಲ್ಲಾಗಿ ಬಿಡುತ್ತದೆ ಇದೆಲ್ಲವನ್ನು ಅರಿತ ಮುಕ್ತಾಬಾಯಿ ಓಡುತ್ತ ಲಕ್ಕುಂಡಿಗೆ ಬರುತ್ತಾಳೆ.ಇಕೆ ಓಡುವುದನ್ನು ನೋಡಿದ ಉರಿನವರೆಲ್ಲರೂ ಕೂಡ ಓಡುತ ಬರುತ್ತಾರೆ. ಇತ್ತ ಅಣ್ಣ ಲಿಂಗದೊಳಗಾಗಿದ್ದ ಅಣ್ಣನನ್ನು ತೊಡೆಯಮೇಲೆ ಹಾಕಿಕೊಂಡು ಅಳುತ್ತ ಇದ್ದ ಸಂದರ್ಭದಲ್ಲಿ ಅಲ್ಲಿ ಅಲ್ಲಮ ಶಿವಯೋಗಿ ಬರುತ್ತಾನೆ. ಆಗ ಮುಕ್ತಾದೇವಿಗೆ ಹೇಳುತ್ತಾನೆ ನಿನ್ನ ಅಣ್ಣ ಆತ್ಮದಿಂದ ಬಿಡುಗಡೆಯಾಗಿದ್ದಾನೆ ಕೇವಲ ದೇಹ ಮಾತ್ರ ಇಲ್ಲಿಉಳಿದಿದೆ. ಅರಿತವಳ ಕಣ್ಣಲ್ಲಿ ನೀರು ಬರಬಾರದೆಂದ ಅಲ್ಲಮನ ಪಾದಕ್ಕೆ ಮುಕ್ತಾದೇವಿ ಏರಗಿದಾಗ ಮುಕ್ತಾದೇವಿಯಲ್ಲಿಯೇ ಬಯಲಿನ್ಲಿ ಬಯಲಾಗುತ್ತಾಳೆ. ಮುಕ್ತಾಬಾಯಿಗೆ ಹಾಗೂ ಆತಳ ಅಣ್ಣ ಅಜಗಣ್ಣನಿಗೆ ಮುಕ್ತಿ ಕೊಟ್ಟ ಅಲ್ಲಮ ಧರ್ಮ ಉಳಿಸಲು ಪಯಣ ಬೆಳೆಸುತ್ತಾನೆಂದು ಶ್ರೀಗಳು ಪ್ರವಚನ ಮುಂದುವರಿಸಿದರು.
ಈ ಸಮಯದಲ್ಲಿ ಶ್ರೀ ಶರಣಮುತ್ಯಾರ ಮಠದ ಶ್ರೀ ಬಸಣ್ಣ ಶರಣರ, ಶರಣಪ್ಪ ಶರಣರ ನೇತೃತ್ವ ವಹಿಸಿದ್ದರು. ಸಿದ್ದಣ್ಣ ಶರಣರ, ಭಿಮಣ್ಣ ಇಂಗಳಗಿ, ಶರಣಪ್ಪ ದೊರೆ, ಮಲ್ಲಣ್ಣ ಇಂಗಳಗಿ, ಮಲ್ಲಣ್ಣ ಶರಣರ, ಶರಣಗೌಡ ಪೋಲಿಸ ಪಾಟೀಲ, ಶ್ರೀಕಾಂತ ಕುಂಬಾರ, ಬಸವರಾಜ ಛಾಂದಕೋಟೆ, ಕಾಶಿರಾಯ ದೇಸಾಯಿ, ಸಂಗಮೇಶ ಶರಣರ, ಗುರುಲಿಂಗಪ್ಪ ದೊಡಮನಿ, ಸುಭಾಸಗೌಡ ಹಳೆಮನಿ, ತಿಪ್ಪಣ್ಣ ಸಜ್ಜನ, ಭಾರತ ಮಂಟಪ ಮತ್ತು ಸೌಂಡಸಿಸ್ಟಮದ ರಪೀಕ ಮುರಾಳ, ಗವಾಯಿಗಳಾದ ಹಣಮಂತಕುಮಾರ ಬಳಗಾನೂರ, ಬಸವನಗೌಡ ಬಿರಾದಾರ(ಚೊಕ್ಕಾವಿ) ಉಪಸ್ಥಿತರಿದ್ದರು.